ವಂದೇ ಭಾರತ್ ರೈಲಿನಲ್ಲಿ ವೀಕೆಂಡ್ಸ್ ಭೇಟಿ ನೀಡಬಹುದಾದ 4 ಪವಿತ್ರ ನಗರಗಳು
ವಂದೇ ಭಾರತ್ ರೈಲುಗಳ ವೇಗ ಮತ್ತು ಆರಾಮದಾಯಕ ಸೇವೆಯಿಂದ ವಾರಾಂತ್ಯದ ಚಿಕ್ಕ ಧಾರ್ಮಿಕ ಪ್ರವಾಸಗಳು ಹೆಚ್ಚು ಸುಲಭವಾಗಿಸಿದೆ. ವಾರಾಣಸಿ, ಅಯೋಧ್ಯೆ, ಕತ್ರಾ ಮತ್ತು ಪುರಿ ಮೊದಲಾದ ಪವಿತ್ರ ನಗರಗಳಿಗೆ ಕಡಿಮೆ ಸಮಯದಲ್ಲೇ ಭೇಟಿ ನೀಡಿ ಆಧ್ಯಾತ್ಮಿಕ ಅನುಭವವನ್ನು ಪಡೆಯಬಹುದಾದ ಸುವರ್ಣವಾಕಾಶ ಎಲ್ಲರದಾಗಲಿ.
ವಂದೇ ಭಾರತ್ ರೈಲಿನಲ್ಲಿ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ 4 ಪವಿತ್ರ ನಗರಗಳು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಮೂಲಕ ವಾರಾಂತ್ಯದ ಪ್ರವಾಸವನ್ನು ಸುಲಭಗೊಳಿಸಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣವು ಅತ್ಯಂತ ಆರಾಮದಾಯಕ ಮತ್ತು ಅನುಕೂಲಕರವಾಗಿದ್ದು, ಹೈ-ಸ್ಪೀಡ್ ರೈಲುಗಳು ಆಧ್ಯಾತ್ಮಿಕ ತಾಣಗಳಿಗೆ ವೇಗವಾಗಿ ಪ್ರವೇಶವನ್ನು ಒದಗಿಸಿವೆ.
ಕಡಿಮೆ ಸಮಯದಲ್ಲೇ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಮರಳಲು ಬಯಸುವವರಿಗೆ ಈ ರೈಲುಗಳು ಉತ್ತಮ ಆಯ್ಕೆಯಾಗಿವೆ. ವಿಶೇಷವಾಗಿ ಉದ್ಯೋಗದಲ್ಲಿರುವವರಿಗೆ ಶನಿವಾರ ಹಾಗೂ ಭಾನುವಾರದ ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ವಾರಾಣಸಿ (ಉತ್ತರ ಪ್ರದೇಶ)
2019ರಲ್ಲಿ ಆರಂಭವಾದ ದೇಶದ ಮೊದಲ ವಂದೇ ಭಾರತ್ ರೈಲು ದೆಹಲಿ ಮತ್ತು ವಾರಾಣಸಿಯನ್ನು ಸಂಪರ್ಕಿಸುತ್ತದೆ. ಇದು ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಡುವ ರೈಲಾಗಿದ್ದು, ಮಧ್ಯಾಹ್ನ 2 ಗಂಟೆಗೆ ವಾರಾಣಸಿಗೆ ತಲುಪುತ್ತದೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಹಿಂದಿರುಗುವ ರೈಲನ್ನು ಬಳಸಿಕೊಂಡು ವಾರಾಂತ್ಯದಲ್ಲೇ ಪ್ರವಾಸ ಮುಗಿಸಬಹುದು. ಇಲ್ಲಿ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ, ಗಂಗಾ ಘಾಟ್‌ಗಳು ಹಾಗೂ ಗಂಗಾ ಆರತಿ ಪ್ರಮುಖ ಆಕರ್ಷಣೆಗಳಾಗಿವೆ.
ಅಯೋಧ್ಯೆ (ಉತ್ತರ ಪ್ರದೇಶ)
ದೆಹಲಿ ಆನಂದ್ ವಿಹಾರ್‌ನಿಂದ ಅಯೋಧ್ಯಾ ಕ್ಯಾಂಟ್‌ಗೆ ಸಂಚರಿಸುವ ವಂದೇ ಭಾರತ್ ರೈಲು, ಬೆಳಗ್ಗೆ 6:10ಕ್ಕೆ ಹೊರಟು ಮಧ್ಯಾಹ್ನ 2:30ಕ್ಕೆ ತಲುಪುತ್ತದೆ, ಇದು ಭಕ್ತರಿಗೆ ಅನುಕೂಲಕರವಾಗಿದ್ದು, ಶ್ರೀರಾಮನ ಜನ್ಮಸ್ಥಳವೆಂದು ನಂಬಲಾಗುವ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣವಾದ ರಾಮ ಮಂದಿರ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಹಿಂದಿರುಗುವ ಸೇವೆಯು ಸಹ ಅನುಕೂಲಕರವಾಗಿದ್ದು, ಅಯೋಧ್ಯಾದಿಂದ ಮಧ್ಯಾಹ್ನ 3:25 ಕ್ಕೆ ಹೊರಟು ರಾತ್ರಿ 11:40 ಕ್ಕೆ ದೆಹಲಿಯನ್ನು ತಲುಪುತ್ತದೆ. ವಾರಾಂತ್ಯದಲ್ಲೇ ದರ್ಶನ ಮಾಡಿ ಹಿಂದಿರುಗಲು ಈ ರೈಲು ಸೂಕ್ತವಾಗಿದೆ.

ಕತ್ರಾ (ಜಮ್ಮು ಮತ್ತು ಕಾಶ್ಮೀರ)
ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ತೆರಳುವ ಯಾತ್ರಿಕರಿಗೆ ದೆಹಲಿ–ಕತ್ರಾ ವಂದೇ ಭಾರತ್ ರೈಲು ಪ್ರಯಾಣವನ್ನು ಸುಲಭಗೊಳಿಸಿದ್ದು, ಸುಮಾರು ಎಂಟು ಗಂಟೆಗಳಲ್ಲಿ ಕತ್ರಾ ತಲುಪಬಹುದು. ಅಲ್ಲಿಂದ ವೈಷ್ಣೋ ದೇವಿ ದೇವಾಲಯದ ಪಾದಯಾತ್ರೆಯನ್ನು ಆರಂಭಿಸಿ, ಮರುದಿನದ ರೈಲಿನಲ್ಲಿ ದೆಹಲಿಗೆ ಮರಳಬಹುದು.
ಪುರಿ (ಒಡಿಶಾ)
ಹೌರಾ–ಪುರಿ ವಂದೇ ಭಾರತ್ ರೈಲು ಮೂಲಕ ಜಗನ್ನಾಥ ದೇವಾಲಯಕ್ಕೆ ತಲುಪುವುದು ಈಗ ಮತ್ತಷ್ಟು ಸುಲಭಕರವಾಗಿಸಿದೆ. ಬೆಳಗ್ಗೆ ಹೊರಟು ಸುಮಾರು ಏಳು ಗಂಟೆಗಳಲ್ಲಿ ಪುರಿ ತಲುಪುವ ಈ ರೈಲು, ಸಂಜೆ ಅಥವಾ ಮರುದಿನ ಹಿಂದಿರುಗುವ ಅವಕಾಶವನ್ನು ಒದಗಿಸುತ್ತದೆ. ಚಾರ್ ಧಾಮ ಯಾತ್ರೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಪುರಿ ಭಕ್ತರ ನೆಚ್ಚಿನ ತಾಣಗಳಲ್ಲೊಂದು.

ಒಟ್ಟಾರೆ, ವಂದೇ ಭಾರತ್ ರೈಲುಗಳ ವೇಗ ಮತ್ತು ಆರಾಮದಾಯಕ ಸೇವೆಯಿಂದ ವಾರಾಂತ್ಯದ ಚಿಕ್ಕ ಧಾರ್ಮಿಕ ಪ್ರವಾಸಗಳು ಹೆಚ್ಚು ಸುಲಭವಾಗಿಸಿದೆ. ವಾರಾಣಸಿ, ಅಯೋಧ್ಯೆ, ಕತ್ರಾ ಮತ್ತು ಪುರಿ ಮೊದಲಾದ ಪವಿತ್ರ ನಗರಗಳಿಗೆ ಕಡಿಮೆ ಸಮಯದಲ್ಲೇ ಭೇಟಿ ನೀಡಿ ಆಧ್ಯಾತ್ಮಿಕ ಅನುಭವವನ್ನು ಪಡೆಯಬಹುದಾದ ಸುವರ್ಣವಾಕಾಶ ಎಲ್ಲರದಾಗಲಿ.