ಕಿಷ್ಕಿಂದಾದಲ್ಲಿ ಇದ್ದಷ್ಟು ಹೊತ್ತೂ ದಿಲ್ ಖುಷ್!
ರೆಸಾರ್ಟ್‌ಗಳಲ್ಲಿ ಒಂದೋ ಎರಡೋ ಈಜುಕೊಳಗಳು ಇರುತ್ತವೆ. ಇಲ್ಲಿ ಒಂದು ವಿಶಾಲ ವ್ಯಾಪಿ ವಾಟರ್ ಪಾರ್ಕ್ ಇದೆ. ಇಲ್ಲಿನ ಈಜುಕೊಳಗಳ ಸಂಖ್ಯೆ ಆರು. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೂ ಗೆಳೆಯರನ್ನು ಕರೆದುಕೊಂಡು ಬಂದರೂ ಇಲ್ಲಿ ಈಜು ಮೋಜಿಗೆ ಅಡ್ಡಿ ಆತಂಕಗಳಿಲ್ಲ. ಯಾವುದೇ ವಯೋಮಾನದವರಿಗೂ ಒಗ್ಗುವ ಆಕಾರ ಮತ್ತು ಆಳದ ಬೇರೆ ಬೇರೆ ಈಜುಕೊಳಗಳು ಇಲ್ಲಿವೆ. ಜಾರುಬಂಡಿಗಳಲ್ಲಿ ಜಾರಿ ಈಜುಕೊಳಗಳಲ್ಲಿ ಬೀಳುವುದು, ಯಾವುದೇ ಫ್ಯಾಂಟಸಿ ಪಾರ್ಕ್‌ಗಳಿಗಿಂತ ಕಮ್ಮಿ ಇಲ್ಲ. ಅದರಲ್ಲೂ ವೈವಿಧ್ಯಮಯ ವಿನ್ಯಾಸದ ಕೊಳಗಳು ಇರುವಾಗ ಒಲ್ಲದ ಮನಸಿನವರು ಒಂದು ಬಾರಿಯಾದರೂ ಈಜಲು ಇಳಿಯುತ್ತಾರೆ.
ಕಾಲಿದ್ದಾಗಲೇ ಹಂಪಿಯನ್ನು ನೋಡು ಎನ್ನುವ ಮಾತಿದೆ. ಇಲ್ಲಿನ ದೇವಾಲಯ, ವಾಸ್ತುಶಿಲ್ಪ, ಇತಿಹಾಸ, ಪುರಾಣ, ಪ್ರಕೃತಿ, ಬೆಟ್ಟ-ಗುಡ್ಡಗಳನ್ನು ನೋಡಲು ಪ್ರತಿದಿನವೂ ಹಂಪಿಯಲ್ಲಿ ದೇಶ-ವಿದೇಶಗಳಿಂದ ಬಂದ ಪ್ರವಾಸಿಗರು ಕಣ್ಣಿಗೆ ಬೀಳುತ್ತಾರೆ. ಒಂದು ದಿನದಲ್ಲಿ ಇಲ್ಲಿನ ಎಲ್ಲಾ ತಾಣಗಳನ್ನು ನೋಡುವುದಂತೂ ಅಸಾಧ್ಯ. ಈ ಪ್ರವಾಸದ ವೇಳೆ ನೀವು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಉಣಬಡಿಸುವ ಒಂದು ರೆಸಾರ್ಟ್‌ನಲ್ಲಿ ಉಳಿಯಲು ಇಷ್ಟಪಡುತ್ತೀರಿ. ಆಗ ನೀವು ಹಂಪಿ ಮತ್ತು ಆನೆಗೊಂದಿಯ ಹತ್ತಿರದ ಸ್ಟೋನ್ ಬ್ರಿಡ್ಜ್ ಕ್ರಾಸ್ ಬಳಿ ಇರುವ ಕಿಷ್ಕಿಂದಾ ಹೆರಿಟೇಜ್ ರೆಸಾರ್ಟ್‌ಗೆ ಹೋಗಿ…
ಕಿಷ್ಕಿಂದ ರೆಸಾರ್ಟ್ ಹೇಗಿದೆ?
ವಾರದ ಯಾವುದೋ ಒಂದು ದಿನ ಜನರಿಂದ ತುಂಬಿದ್ದು, ಮತ್ತೊಂದು ದಿನ ಖಾಲಿಯಾಗುವ ರೆಸಾರ್ಟ್ ಇದಲ್ಲ. ಇಲ್ಲಿ ಪ್ರತಿದಿನವೂ ಸಾಕಷ್ಟು ಜನರು ಬರುತ್ತಾರೆ. ದಿನಗಟ್ಟಲೆ ಉಳಿಯುತ್ತಾರೆ. ಮರಳಿ ಇಲ್ಲಿಂದ ಮನತುಂಬಿಕೊಂಡು ಹೋಗುತ್ತಾರೆ. ಮೋಜು ಮಸ್ತಿ ಜತೆಗೆ ಪ್ರಶಾಂತ ವಾತಾವರಣವೂ ಇಲ್ಲಿ ಸದಾ ಇದ್ದೇ ಇರುತ್ತದೆ.
ಇದನ್ನೂ ಓದಿ: ಮುಂಜಾನೆಯಿಂದ ಮುಸ್ಸಂಜೆಯವರೆಗೂ ಇಬ್ಬನಿಯನ್ನು ತಬ್ಬಿಕೊಳ್ಳಿ..
ಇಲ್ಲಿನ ಲಾನ್‌ನ ಉದ್ದ ಲೆಕ್ಕಕ್ಕಿಲ್ಲ
ಈ ಒಟ್ಟು ರೆಸಾರ್ಟ್ ಹುಲ್ಲು ಹಾಸು ಅಂದರೆ ಲಾನ್‌ನಿಂದ ಕೂಡಿದೆ. ಹಾಗಾಗಿ ಫೊಟೋಗ್ರಫಿ, ವಿಡಿಯೋಗ್ರಫಿಗಳಿಗೆ ಒಂದು ಉತ್ತಮ ತಾಣ. ಪ್ರತಿದಿನವೂ ಇದರ ನಿರ್ವಹಣೆ ಆಗುವುದರಿಂದ ನೋಡಲು ಸ್ವಚ್ಛ ಮತ್ತು ಸುಂದರವಾಗಿರುತ್ತದೆ. ರೆಸಾರ್ಟ್‌ನಿಂದ ದೂರದೂರಕ್ಕೂ ಕಾಡು ಮತ್ತು ಅಲ್ಲಲ್ಲಿ ಭತ್ತದ ಗದ್ದೆಗಳೇ ಇರುವುದರಿಂದ ಕಣ್ಣಿಗೆ ಕಾಣುವಷ್ಟು ದೂರಕ್ಕೂ ಇಲ್ಲಿ ಹಸುರಿಗೆ ಆದಿ-ಅಂತ್ಯಗಳೇ ಕಾಣುವುದಿಲ್ಲ. ಅದರಲ್ಲೂ ಈ ರೆಸಾರ್ಟ್ ಇರುವ ತಾಣ ಹನುಮನ ನಾಡು ಅಂಜನಾದ್ರಿ ಪರ್ವತದ ಹತ್ತಿರ. ಸುತ್ತಲೂ ಗುಡ್ಡಗಾಡು. ಹಾಗಾಗಿ ಎತ್ತ ನೋಡಿದರೂ ವಿಹಂಗಮ ನೋಟಗಳೇ ಕಣ್ಣಿಗೆ, ಮುಖ್ಯವಾಗಿ ನಿಮ್ಮ ಕ್ಯಾಮೆರಾ ಕಣ್ಣಿಗೆ ಬೀಳುತ್ತವೆ.

ವಾಟರ್ ಆಕ್ಟಿವಿಟಿ
ರೆಸಾರ್ಟ್‌ಗಳಲ್ಲಿ ಒಂದೋ ಎರಡೋ ಈಜುಕೊಳಗಳು ಇರುತ್ತವೆ. ಇಲ್ಲಿ ಒಂದು ವಿಶಾಲ ವ್ಯಾಪಿ ವಾಟರ್ ಪಾರ್ಕ್ ಇದೆ. ಇಲ್ಲಿನ ಈಜುಕೊಳಗಳ ಸಂಖ್ಯೆ ಐದಾರು. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೂ ಗೆಳೆಯರನ್ನು ಕರೆದುಕೊಂಡು ಬಂದರೂ ಇಲ್ಲಿ ಈಜು ಮೋಜಿಗೆ ಅಡ್ಡಿ ಆತಂಕಗಳಿಲ್ಲ. ಯಾವುದೇ ವಯೋಮಾನದವರಿಗೂ ಒಗ್ಗುವ ಆಕಾರ ಮತ್ತು ಆಳದ ಬೇರೆ ಬೇರೆ ಈಜುಕೊಳಗಳು ಇಲ್ಲಿವೆ. ಜಾರುಬಂಡಿಗಳಲ್ಲಿ ಜಾರಿ ಈಜುಕೊಳಗಳಲ್ಲಿ ಬೀಳುವುದು, ಯಾವುದೇ ಫ್ಯಾಂಟಸಿ ಪಾರ್ಕ್‌ಗಳಿಗಿಂತ ಕಮ್ಮಿ ಇಲ್ಲ. ಅದರಲ್ಲೂ ವೈವಿಧ್ಯಮಯ ವಿನ್ಯಾಸದ ಕೊಳಗಳು ಇರುವಾಗ ಒಲ್ಲದ ಮನಸಿನವರು ಒಂದು ಬಾರಿಯಾದರೂ ಈಜಲು ಇಳಿಯುತ್ತಾರೆ.
ರೆಸ್ಟೋರೆಂಟ್‌ಗಳು
ಇಲ್ಲಿ ಉಳಿದ ಮೇಲೆ ಉತ್ತರ ಕರ್ನಾಟಕ ಶೈಲಿಯ ಆಹಾರ ಸವಿಯದಿದ್ದರೆ ಹೇಗೆ? ರೆಸಾರ್ಟ್‌ನಲ್ಲೇ ಏಳು ರೆಸಾರ್ಟ್‌ಗಳಿವೆ. ಜೋಳದ ರೊಟ್ಟಿಯಿಂದ ಹಿಡಿದು ಪಿಜ್ಜಾವರೆಗೆ ಅಂದರೆ ಹಳ್ಳಿಯಿಂದ ದಿಲ್ಲಿವರೆಗೆ ಎಲ್ಲಾ ವೆರೈಟಿಯ ಆಹಾರ ಖಾದ್ಯಗಳನ್ನು ನೀವಿಲ್ಲಿ ಸವಿಯಬಹುದು. ಆರ್ಡರ್ ಮಾಡಿದ ಅರೆ ಗಳಿಗೆಯಲ್ಲೇ ಆಹಾರ ಸರ್ವ್ ಸಹ ಆಗಿರುತ್ತದೆ. ಕಾಫಿ, ಉಪಾಹಾರ ಮಳಿಗೆಗಳೂ ಇಲ್ಲಿವೆ. ಮಕ್ಕಳೊಂದಿಗೆ ಆಟವಾಡಲು ಮತ್ತೆ ಅತ್ತಿತ್ತ ಹೋಗುವ ಯಾವ ಆಲೋಚನೆಗಳೂ ನಿಮಗಿಲ್ಲಿ ಬೇಡ. ಆರು ಪ್ಲೇ ಏರಿಯಾಗಳು ಇಲ್ಲಿವೆ. ಮಸ್ತ್ ಫೊಟೋ ಶೂಟ್ ಸಹ ಮಾಡಬಹುದು.
ವಸತಿ ಗೃಹಗಳು
ಇಲ್ಲಿ ಎಸಿ, ನಾನ್ ಎಸಿ ಸೇರಿ ಒಟ್ಟು 25 ಕಾಟೇಜ್‌ಗಳು ಮತ್ತು 4 ಸೂಟ್ ರೂಮ್‌ಗಳಿವೆ. ಪ್ರತಿ ಕಾಟೇಜ್‌ನಿಂದಲೂ ಕಿಟಕಿಯಿಂದ ಕಣ್ಣಾಯಿಸಿದರೆ ಹಚ್ಚಹಸುರು ವಾತಾವರಣವನ್ನು ಕಣ್ತುಂಬಿಕೊಳ್ಳಬಹುದು. ಕೋಣೆಗಳ ಕ್ಲೀನಿಂಗ್ ಆಗಿಂದಾಗ್ಗೆ ಆಗುವುದರಿಂದ ಸದಾ ಶುಚಿಯಾಗಿರುತ್ತವೆ. 24 ಗಂಟೆಯೂ ವಿದ್ಯುತ್ ಹಾಗೂ ಬಿಸಿ ಮತ್ತು ತಣ್ಣೀರು ಲಭ್ಯವಿರುತ್ತದೆ. ಉಚಿತ ಇಂಟರ್‌ನೆಟ್ ಸೇವೆ, ಉಚಿತ ವಾಹನ ಪಾರ್ಕಿಂಗ್ ಸೌಲಭ್ಯವೂ ಇದೆ. ಮರೆಯಬೇಡಿ ಇಲ್ಲಿ ಮಕ್ಕಳಿಗೆ ಉಚಿತ ವಸತಿ!

ಬಾರ್ ಬೇಕಾ?
ದೂರದ ಊರಿಗೆ ಹೋದಾಗ ಸಿಪ್ ಬೈ ಸಿಪ್ ಮದ್ಯ ಕುಡಿದು ಮಾತನಾಡುವುದರಲ್ಲೂ ಒಂದು ಮಜವಿದೆ. ಈ ಮಜಕ್ಕೆ ಇಲ್ಲಿನ ಬಾರ್ ಅವಕಾಶ ನೀಡುತ್ತದೆ. ಹೆಚ್ಚಾಗದಂತೆ ಕುಡಿದು, ಜತೆಗಿದ್ದವರ ಜತೆ ಒಂದಷ್ಟು ಕಾಲ ಕಳೆದು ಬೆಚ್ಚಗೆ ಮಲಗಬಹುದು. ಬಾ ಬಾರೋ ಬಾರೋ ಬಾರೋ ಅಂತ ಈ ಎಣ್ಣೆ ಅಂಗಡಿಯೇನೋ ಕರೆಯುತ್ತೆ ಹಿತಮಿತವಾಗಿ ಕುಡಿಯಬೇಕಷ್ಟೇ.
ಕಾರು ಬಾಡಿಗೆ
ಇಲ್ಲಿಗೆ ಹತ್ತಿರದಲ್ಲೇ ಆಂಜನೇಯ ಹುಟ್ಟಿದ ನಾಡು ಅಂಜನಾದ್ರಿ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ, ಹಂಪಿ, ತುಂಗಭದ್ರಾ ಜಲಾಶಯ, ಸಣಾಪುರ ಹೊಳೆ, ಹುಲಿಗೆಮ್ಮನ ಕ್ಷೇತ್ರ ಹುಲಿಗೆ ಹೀಗೆ ಸಾಕಷ್ಟು ತಾಣಗಳಿದ್ದು, ಸುತ್ತಲೂ ಒಂದು ಪಿಕ್‌ನಿಕ್ ಮಾಡಲು ಇಲ್ಲಿ ನೀವು ಕಾರು ಬಾಡಿಗೆಗೆ ಪಡೆಯಬಹುದು. ಸಭಾಂಗಣ, 24 ಗಂಟೆಗಳ ಕಾಲ ಸೆಕ್ಯುರಿಟಿ, ಬ್ಯಾಗೇಜ್ ಸಂಗ್ರಣೆ, ಹೀಗೆ ಇಲ್ಲಿನ ಸಾಕಷ್ಟು ವಿಷಯಗಳು ಈ ರೆಸಾರ್ಟ್‌ನಲ್ಲಿವೆ. ಮಾಹಿತಿ ನೀಡಲು ಸಿಬ್ಬಂದಿ ಸದಾ ಸಿದ್ಧವಾಗಿರುತ್ತಾರೆ ಅಲ್ಲಿಗೆ ಹೋದಾಗ ಅವರನ್ನೊಮ್ಮೆ ಮಾತನಾಡಿಸಿ.
ವಿಳಾಸ & ಸಂಪರ್ಕ:
Kishkinda Heritage Resort, 485, Near Stone Bridge,
ANEGUNDI, Sanapur, Karnataka 583234
Phone : 082176 87224