• ಶಶಿಕರ ಪಾತೂರು

ಮಾಮು ಟೀ ಅಂಗಡಿ, ಗೌಡ್ರ ಹೊಟೇಲ್ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು ನಟಿ ಅರ್ಚನಾ ಸಿಂಗ್. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುವ ಜತೆಗೆ ಪ್ರವಾಸದ ಬಗ್ಗೆಯೂ ಆಸಕ್ತಿ‌ ವಹಿಸಿರುವ ಈ‌ ನಟಿ ಎವರೆಸ್ಟ್ ಮೇಲೆ ಏರಿದ ತಮ್ಮ ಅನುಭವದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

ಮೊದಲ‌ ಬಾರಿ ಎವರೆಸ್ಟ್ ಚಾರಣ ಮಾಡಿದ ಅನುಭವ ಹೇಗಿತ್ತು?

ಹಿಮಾಚಲ‌ ಪ್ರದೇಶ ನನಗೆ ಹೊಸದೇನೂ ಅಲ್ಲ. ಆದರೆ ಹಿಂದೆ ನಾನು ಚಿಕ್ಕದಾಗಿ ಹೈಕಿಂಗ್‌ ಮಾಡಿದ ಅನುಭವ ಮಾತ್ರ ಹೊಂದಿದ್ದೆ. ಅದು ಬಿಟ್ಟರೆ ಸೌತ್‌ ಇಂಡಿಯಾದಲ್ಲಿ ಬೆಟ್ಟದ ಮೇಲಿರುವ ದೇವಸ್ಥಾನಗಳಿಗೆ ಮೆಟ್ಟಿಲು ಹತ್ತಿ ಹೋದ ಅನುಭವ ಇತ್ತು. ಮಾತ್ರವಲ್ಲ ನಾನು ಜಿಮ್‌ ರೆಗ್ಯುಲರ್‌ ಮಾಡುವವಳೂ ಅಲ್ಲ. ಇಂಥ ನಾನು ಮೊದಲ ಟ್ರೆಕ್ಕಿಂಗ್‌ ನಲ್ಲೇ ಎವರೆಸ್ಟ್‌ ಏರಿದ್ದು ಮಾತ್ರ ಅದ್ಭುತ ಅನುಭವ.

ಇದನ್ನೂ ಓದಿ: ನಿರಂಜನ್ ಯಶಸ್ವಿಯಾಗಿ ಪ್ರೀತೀಲಿ ’ಬಿದ್ದ’ ಕಥೆ!

ಎವರೆಸ್ಟ್‌ ತನಕದ ಪ್ರಯಾಣವನ್ನು ವಿವರಿಸಬಹುದೇ?

ಬೆಂಗಳೂರಿನಿಂದ ಗೋರಕ್ ಪುರಕ್ಕೆ ವಿಮಾನದಲ್ಲಿ ಹೋಗಿದ್ದೆವು.‌ ಅಲ್ಲಿಂದ ರಸ್ತೆಯ ಮೂಲಕ ಗಡಿ ದಾಟಿ ಬಸ್‌ ಮೂಲಕ ಕಠ್ಮಂಡು ಸೇರಿಕೊಂಡೆವು. ಏಕೆಂದರೆ ನಡಿಗೆಯಲ್ಲೇ ಬಾರ್ಡರ್‌ ಕ್ರಾಸ್‌ ಮಾಡುವ ಅನುಭವ ಪಡೆಯಬೇಕಿತ್ತು. ಅದಕ್ಕಾಗಿ ಬಾರ್ಡರ್ ಕ್ರಾಸ್‌ ಮಾಡಿ ಫಾರ್ಮಾಲಿಟೀಸ್‌ ಕಂಪ್ಲೀಟ್‌ ಮಾಡಿದ್ದೆವು.

Untitled design (10)

ಈ ಪ್ರಯಾಣದಲ್ಲಿ ಯಾರೆಲ್ಲ ನಿಮ್ಮ ಜತೆಗಿದ್ದರು?

ಸಾಮಾನ್ಯವಾಗಿ ನಾನು ಮೊದಲೆಲ್ಲ ಸೋಲೋ ಟ್ರಿಪ್ ಪ್ಲ್ಯಾನ್‌ ಮಾಡುತ್ತಿದ್ದೆ. ಆದರೆ ಈಗ ನೇಪಾಳ ಸರಕಾರ ಹೊಸ ರೂಲ್ಸ್‌ ಮಾಡಿದೆ. ಹೋಗುವಾಗ ಗೈಡ್‌ ಜೊತೆಗೆ ಹೋಗಬೇಕು. ಇಲ್ಲವಾದರೆ ಲೈಫ್‌ ಗೆ ರಿಸ್ಕ್‌. ಏಕೆಂದರೆ ಅಲ್ಲಿ ಆಕ್ಸಿಜನ್‌ ಪ್ರಾಬ್ಲಮ್ ಇದೆ. ಅದಕ್ಕೆ ಗೈಡ್‌ ಜತೆಯೇ ಹೋಗಬೇಕಿತ್ತು. ಹಾಗಾಗಿಯೇ ನಾಲ್ಕೈದು ಜನ ಗ್ರೂಪ್‌ ಮಾಡಿಕೊಂಡು ಕಠ್ಮಂಡುವಿನಿಂದ ಹೋಗಿದ್ದು.

ಒಟ್ಟು ಎಷ್ಟು ದಿನಗಳ‌ ಪ್ರಯಾಣ ಮಾಡಿದ್ದೀರಿ?

ಈ ಪ್ರವಾಸ 14 ದಿನ ನಿರಂತರವಾಗಿ ನಡೆದಿತ್ತು. ಅದರಲ್ಲಿ 13 ದಿನ ಟ್ರೆಕ್ಕಿಂಗ್‌ ಎಂದೇ ಹೇಳಬಹುದು. ಅದರಲ್ಲಿ ಹೋಗುವುದು 8 ದಿನ, ಎವರೆಸ್ಟ್‌ ಬೇಸ್‌ ತನಕ. ಅಲ್ಲಿಂದ ವಾಪಸ್ ಬರೋಕೆ ಒಂದು 3-4 ದಿನ.

ಇಷ್ಟು ದೊಡ್ಡ ಚಾರಣ ಅಂದಾಗ ನೀವು ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದಿರಿ?

ಪ್ರತಿಯೊಬ್ಬರೂ ಫಿಸಿಕಲ್‌ ತಯಾರಿ ಮಾಡಿಕೊಂಡೇ ಹೋಗುತ್ತಾರೆ. ಏಕೆಂದರೆ ಎವರೆಸ್ಟ್‌ ಹತ್ತೋದು ತುಂಬಾನೇ ಕಷ್ಟ. ಅದರಲ್ಲಿ 50% ಜನ ಮಾತ್ರ ಕಂಪ್ಲೀಟ್‌ ಮಾಡುವುದು. ಆರೋಗ್ಯ ಸಮಸ್ಯೆ ಕೂಡಾ ಆಗುತ್ತದೆ. ಹೋಗುವುದಕ್ಕಿಂತ ಮುಂಚೆ ಮೇಲೆ ಹತ್ತುವುದನ್ನು ಪ್ರಾಕ್ಟೀಸ್‌ ಮಾಡ್ತಾರೆ. ನಾನು ಹೋಗೋ ಮುಂಚೆ ಜಾಸ್ತಿ ಏನೂ ಮಾಡಿಲ್ಲ, ಮಾಡಬೇಕಿತ್ತು. ಆದರೆ ಮೂರ್ನಾಲ್ಕು ದಿನ ಮುಂಚೆ ಪ್ರತಿದಿನ ಹತ್ತು ಹದಿನೈದು ಕಿ.ಮೀ ನಡೆದಿದ್ದೀನಿ. ಅದು ಉಪಯೋಗಕ್ಕೆ ಬರಲಿಲ್ಲ ಬಿಡಿ. ಸಾಮಾನ್ಯವಾಗಿ ಎಲ್ಲರೂ ಮೂರ್ನಾಲ್ಕು ತಿಂಗಳು ಪ್ರಿಪರೇಷನ್‌ ಮಾಡ್ಕೊಂಡು ಹೋಗ್ತಾರೆ. ಆದರೆ ನಾನು ಮಾಡಿದ್ದು ಕೇವಲ ಹತ್ತು ದಿನದ ವಾಕಿಂಗ್. ನನ್ನ ಪ್ರಕಾರ ಟ್ರೆಕ್ಕಿಂಗ್‌ ಎಕ್ಸ್‌ಪೀರಿಯೆನ್ಸ್‌ ಇದ್ದರೆ ಒಳ್ಳೆಯದು. ನಾನು ಚಿಕ್ಕ ಪುಟ್ಟದ್ದು ಮಾಡಿದ್ದೀನಿ. ಅಂದರೆ ಹಿಮಾಚಲ್‌ನಲ್ಲಿ, ಟೆಂಪಲ್‌ಗಳು, ಚಿಕ್ಕಪುಟ್ಟ ಹಿಲ್‌ಗಳು, ಹೈಕ್‌ ಮೊದಲು ಮಾಡಿದ್ದೆ. ಅದು ಸ್ವಲ್ಪ ಪ್ರಾಕ್ಟಿಸ್‌ ಇತ್ತು. ತುಂಬಾ ಪ್ರಾಕ್ಟಿಸ್‌ ಮಾಡುವವರಿಗೆ ಹಾಗೂ ಟ್ರೆಕ್ಕಿಂಗ್‌ ಮಾಡುವವರಿಗೆ ಎವರೆಸ್ಟ್‌ ಹತ್ತುವುದು ತುಂಬಾ ಸುಲಭ.

Untitled design (13)

ನಿಮ್ಮ ತಯಾರಿ ಹಿಮಾಲಯದಲ್ಲಿ ಎಷ್ಟರ ಮಟ್ಟಿಗೆ ಉಪಯೋಗಕ್ಕೆ‌ ಬಂತು?

ನಾನು ಹಿಮಾಲಯದ ಬಗ್ಗೆ ತುಂಬಾ ವಿಡಿಯೋಸ್‌, ಆರ್ಟಿಕಲ್ಸ್‌ ಎಲ್ಲಾ ನೋಡಿಕೊಂಡೇ ಹೋಗಿದ್ದೆ. ಹಾಗಾಗಿ ತುಂಬಾ ಕಷ್ಟ ಅಂತ ಗೊತ್ತಿತ್ತು. ಇದು ತುಂಬಾ ಅಡ್ವೆಂಚರಸ್‌. ಆದರೆ ಅಷ್ಟೇ ಬ್ಯೂಟಿಫುಲ್‌ ವ್ಯೂಸ್‌ ಇತ್ತು. ಎವರೆಸ್ಟ್‌ ತನಕ ಹೋಗುವುದು ತುಂಬಾ ಜನರಿಗೆ ಸಾಧ್ಯ ಆಗುವುದಿಲ್ಲ. ಆದರೆ ನನಗೆ ಕಾನ್ಫಿಡೆನ್ಸ್‌ ಇತ್ತು. ನಾನು ದೈಹಿಕ ಶಕ್ತಿಗಿಂತಲೂ ಮಾನಸಿಕವಾಗಿ ಗಟ್ಟಿಯಾಗಿದ್ದೆ. ಹಾಗಾಗಿ ನಾನು ಬೇಸ್‌ ಕ್ಯಾಂಪ್‌ ತನಕ ಹೋಗಬಲ್ಲೆ ಅನ್ನೋದನ್ನು ಚಾಲೆಂಜ್‌ ಆಗಿ ತಗೊಂಡೆ.

ಒಮ್ಮೆ ಟ್ರೆಕ್ಕಿಂಗ್ ಶುರು ಮಾಡಿದ ಮೇಲೆ ಭಯವಾಗಿತ್ತೇ?

ಗ್ರೀನ್‌ ವ್ಯಾಲೀಸ್‌ ಹಾಗೂ ಅಲ್ಲಿನ ಸ್ನೋ ಡೆಸರ್ಟ್‌ನಿಂದ ಹಿಡಿದು ಮಡ್‌ ಡೆಸರ್ಟ್‌ ದಾಟಿ ಸಾಗಬೇಕಿತ್ತು. ಮಧ್ಯೆ ಸಣ್ಣ ಸಣ್ಣ ಹಳ್ಳಿಗಳು ಎಲ್ಲಾ ಬರುತ್ತವೆ! ಲೋಕಲ್‌ ಜನರ ಸಂಪರ್ಕ ಅದೆಲ್ಲ ಒಳ್ಳೆಯ ಅನುಭವ. ಅಲ್ಲೊಂದು ಮ್ಯೂಸಿಯಂ ಇದ್ದು ಅದನ್ನು ನಲ್ಲಿ ಸ್ನೋ ಮ್ಯಾನ್‌ ಎಟಿ ಅಂತ ಕರೆಯುತ್ತಾರೆ. ಸ್ನೋ ಮ್ಯಾನ್‌ ಅಂದರೆ ಅಲ್ಲಿ ಆದಿಮಾನವನ ಸ್ಕಲ್‌ ಮಾದರಿಯಂಥದ್ದೆಲ್ಲ ಇದೆ. ಹಿಲರಿಯವರು ಮೊದಲ ಬಾರಿಗೆ ಮೌಂಟ್‌ ಎವರೆಸ್ಟ್‌ ಎಕ್ಸ್‌ಪ್ಲೋರ್‌ ಮಾಡಿರುವ ಬಗ್ಗೆ ಆ ಮ್ಯೂಸಿಯಂನಲ್ಲಿ ಮಾಹಿತಿ ಇದೆ.

Untitled design (11)

ನಿಮಗೆ ಈ ಪ್ರವಾಸದಲ್ಲಿ ಕನ್ನಡಿಗರು ಯಾರಾದರೂ ಸಿಕ್ಕಿದ್ದಾರಾ?

ಹೌದು. ಅದೊಂದು ಅನುಭವನ್ನು ಹೇಳಲೇಬೇಕು. ಕರ್ನಾಟಕದಿಂದ ಒಂದು ತಂಡವೇ ಸಿಕ್ಕಿತ್ತು. ನಾನಿದ್ದದ್ದು ಒಂದು ಟೀ ಹೌಸ್‌ ನಲ್ಲಿ. ಟೀ ಹೌಸ್‌ ಅಂದರೆ ಅಲ್ಲಿನ ಹಳ್ಳಿಮನೆಗಳು. ಅವು ರೆಸ್ಟೋರೆಂಟ್‌ ಥರದ ಮನೆಗಳು. ಅಲ್ಲಿ ನಾವು ತಂಗಬೇಕಿತ್ತು. ಅಲ್ಲಿ ಕನ್ನಡ ಮಾತನಾಡಬಲ್ಲ ಮೂರು ನಾಲ್ಕು ಜನಗಳು ಇದ್ದರು. ನಾನು ಹೋಗಿ ಮಾತನಾಡಿಸಿದೆ. ಅವರು ಕೂಡ ಬೆಂಗಳೂರಿನವರೇ ಅಂತ ಹೇಳಿದಾಗ ನನಗೆ ರೋಮಾಂಚನ ಆಯಿತು.

ಅವರಲ್ಲೊಬ್ಬರು ಬ್ಯುಸಿನೆಟ್‌ ಹೆಂಗಸು ಇದ್ರು. ತುಂಬಾ ಟ್ರೆಕ್ಕಿಂಗ್‌ ಹೋಗಿ ಹೋಗಿ ಅನುಭವ ಆಗಿ ಈಗ ಎವರೆಸ್ಟ್‌ ಗೆ ಬಂದಿದ್ರು. ಏನು ನೀವು ಎಕ್ಸ್‌ಪಿರೀಯನ್ಸ್‌ ಇಲ್ಲದೇನೇ ಸೀದಾ ಎವರೆಸ್ಟ್‌ ಟ್ರೆಕ್ಕಿಂಗ್‌ಗೆ ಬಂದಿದ್ದೀರಾ ಎಂದು ಅಚ್ಚರಿಪಟ್ಟರು.