Thursday, July 30, 2026
Thursday, July 30, 2026

ಶಿಬುಯಾ ಕ್ರಾಸಿಂಗ್‌

ಟ್ರಾಫಿಕ್ ದೀಪದ ಬಣ್ಣ ಬದಲಾಗುತ್ತಿದ್ದಂತೆ ಶಿಬುಯಾದ ಈ ದೊಡ್ಡ ಛೇದಕದ ಪ್ರತಿ ಮೂಲೆಯಿಂದಲೂ ಪಾದಚಾರಿಗಳ ಗುಂಪು ಮುನ್ನುಗ್ಗುತ್ತದೆ. ಎತ್ತರದ ಸ್ಥಳದಿಂದ ವೀಕ್ಷಿಸಿದರೆ ಬೃಹತ್ ಸೈನ್ಯ ರಣರಂಗಕ್ಕೆ ನುಗ್ಗುವ ಹಾಗೆ. ಅಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ಗಮ್ಯ ಸ್ಥಳ ತಲುಪಬೇಕೆಂಬ ನಿರ್ಣಯವಿರುತ್ತದೆ. ಸಾಕಷ್ಟು ಜನಸಂದಣಿ ಇದ್ದರೂ ಯಾರೂ ಯಾರಿಗೂ ಢಿಕ್ಕಿ ಹೊಡೆಯುವುದಿಲ್ಲ. ಇಲ್ಲಿ ಕಾಣುವ ಅಪರಿಚಿತ ಸೌಜನ್ಯ, ಶಿಷ್ಟಾಚಾರ, ಗಡಿಬಿಡಿ ಆಯೋಜನೆ, ಜಪಾನಿಗ ಅಲ್ಲದಿದ್ದರೂ ಎಲ್ಲರನ್ನೂ ಮೋಡಿಮಾಡುತ್ತದೆ.

  • ವಿದ್ಯಾ ವಿ. ಹಾಲಭಾವಿ

ಜಪಾನ್ ದೇಶದಲ್ಲಿನ ಟೋಕಿಯೋದಂಥ ಮಹಾನಗರದಲ್ಲಿ ಅತ್ಯಾಕರ್ಷಕ ಸ್ಥಳವೆಂದರೆ ಗೋಪುರ, ವಿಗ್ರಹ, ಮ್ಯೂಸಿಯಂ ಅಥವಾ ಪಾರ್ಕ್ ಅಲ್ಲವೇ ಅಲ್ಲ! ಬದಲಾಗಿ ಶಿಬುಯಾ ಸ್ಟೇಷನ್‌ನ ಹ್ಯಾಚಿಕೊ ನಿರ್ಗಮನ ದ್ವಾರದಲ್ಲಿನ ಪಾದಚಾರಿ ಕ್ರಾಸಿಂಗ್! ಹತ್ತು ಲೇನ್‌ಗಳು, ದೊಡ್ಡ ದೊಡ್ಡ ಜಾಹಿರಾತು ಫಲಕಗಳು, ನಿಯಾನ್ ದೀಪಗಳಿಂದ ಆವೃತವಾದ ಈ ಟ್ರಾಫಿಕ್ ಛೇದಕದ ನೋಟ ರಮಣೀಯವಾದ್ದದ್ದೇನಲ್ಲ. ಆದರೆ ಒಮ್ಮೆ ಟ್ರಾಫಿಕ್ ದೀಪ ಕೆಂಪು ಬಣ್ಣಕ್ಕೆ ತಿರುಗಿದಾಗ ಅಲ್ಲಿನ ಚಿತ್ರಣವೇ ಬದಲಾಗುತ್ತದೆ. ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಲೇಬೇಕಾದ ದೃಶ್ಯವಿದು.

ಇದನ್ನೂ ಓದಿ: ಚಾರ್ಲಿ ಚಾಪ್ಲಿನ್‌ ಮೆಚ್ಚಿ ಉಳಿದಿದ್ದ ತಾಣ

ಅಲ್ಲಿದ್ದ ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ! ಕ್ಷಣ ಕ್ಷಣಕ್ಕೂ ಒತ್ತಡ ಜಾಸ್ತಿಯಾಗುತ್ತಾ ಹೋಗುತ್ತದೆ! ಸಂಭವನೀಯ ಶಕ್ತಿಯು ಚಲನ ಶಕ್ತಿಯಾಗಲು ತಯಾರಾಗುತ್ತದೆ! ತಕ್ಷಣವೇ ಟ್ರಾಫಿಕ್ ದೀಪದ ಬಣ್ಣ ಬದಲಾಗುತ್ತದೆ. ಶಿಬುಯಾ ಜಿಲ್ಲೆಯಲ್ಲಿನ ಈ ದೊಡ್ಡ ಛೇದಕದಲ್ಲಿ ಏನೇನೂ ಇರುವುದಿಲ್ಲ. ನಂತರ ಪ್ರತಿಯೊಂದು ಮೂಲೆಯಿಂದಲೂ ಪಾದಚಾರಿಗಳ ಗುಂಪು ಮುನ್ನುಗ್ಗುತ್ತದೆ. ಎತ್ತರದ ಸ್ಥಳದಿಂದ ವೀಕ್ಷಿಸಿದರೆ ಬೃಹತ್ ಸೈನ್ಯವೊಂದು ರಣರಂಗಕ್ಕೆ ನುಗ್ಗುವ ಹಾಗೆ. ಅಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸಂಪರ್ಕದ ಪಾಯಿಂಟ್ ಅನ್ನು ತಲುಪಬೇಕೆಂಬ ನಿರ್ಣಯವಿರುತ್ತದೆ. ಸಾಕಷ್ಟು ಜನಸಂದಣಿ ಇದ್ದರೂ ಯಾರೂ ಯಾರಿಗೂ ಢಿಕ್ಕಿ ಹೊಡೆಯುವುದಿಲ್ಲ. ಮಧ್ಯ ಭಾಗದಲ್ಲಿ ಜತೆಯಾಗುತ್ತಾರೆ. ನಂತರ ಮನ ಬಂದ ಕಡೆಗೆ ಚದುರಿ ಹೋಗುತ್ತಾರೆ. ಪಾದಚಾರಿಗಳಿಗಾಗಿ ಈ ಛೇದಕ ಸುಮಾರು ಒಂದು ನಿಮಿಷ ತೆರೆದಿರುತ್ತದೆ. ಈ ಸಮಯದಲ್ಲಿ ಛೇದಕವು ಮಾನವೀಯತೆ ಮೂರ್ತಿವೆತ್ತ ಸಾಗರದಂತಿರುತ್ತದೆ. ಇಲ್ಲಿ ಕಾಣುವ ಅಪರಿಚಿತ ಸೌಜನ್ಯ, ಶಿಷ್ಟಾಚಾರ, ಗಡಿಬಿಡಿ ಆಯೋಜನೆ, ಜಪಾನಿಗ ಅಲ್ಲದಿದ್ದರೂ ಎಲ್ಲರನ್ನೂ ಮೋಡಿಮಾಡುತ್ತದೆ. ಲೇಖಕ ಆರಾನ್ ಗಿಲ್ಬೆರ್ಥ್ನು ʼಈ ನೂಕು ನುಗ್ಗಾಟ ನೋಡುತ್ತಿದ್ದಾಗ ನೀವೇನೂ ಸಹಾಯ ಮಾಡಲಾಗುವುದಿಲ್ಲ. ಆದರೆ ಈ ವ್ಯವಸ್ಥೆಯನ್ನು ಜತೆಯಾಗಿ ಹಿಡಿದಿಟ್ಟುಕೊಂಡಿರುವ ಕುತೂಹಲವಾದರೂ ಏನು? ಹೇಗೆ ಜನರು ಇಷ್ಟು ಚೆನ್ನಾಗಿ ವರ್ತಿಸುತ್ತಾರೆ?ʼ ಎಂದು ಅಚ್ಚರಿಪಡುತ್ತಾನೆ.

ನಿಧಾನವಾಗಿ ಕಿಕ್ಕಿರಿದ ಜನಸಂದಣಿ ಕರಗುತ್ತಾ ಹೋಗುತ್ತದೆ. ನಂತರ ಬಹುತೇಕ ಬರಿದಾಗುತ್ತದೆ. ಕೆಲವೇ ಕೆಲವರು ಆ ದೀಪವನ್ನು ಹಿಂದಿಕ್ಕಲು ಹೆಣಗಾಡುತ್ತಾ ಓಡುತ್ತಿರುತ್ತಾರೆ. ನಂತರ ಟ್ರಾಫಿಕ್ ದೀಪ ಬದಲಾಗುತ್ತದೆ. ವಾಹನಗಳ ಸಂಚಾರ ಜೋರಾಗಿ ಮಿಡಿಯುತ್ತದೆ. ವಾಹನ ಸಂಚರಿಸುತ್ತಿರುವಾಗ ಪ್ರತಿಯೊಂದು ಮೂಲೆಯಲ್ಲೂ ಕ್ರಮೇಣ ಜನರ ಜಮಾವಣೆ ಆಗತೊಡಗುತ್ತದೆ. ಅಂಗಡಿಯವರು, ಪ್ರಯಾಣಿಕರು, ಶಾಲಾ ಬಾಲಕಿಯರು, ಹದಿಹರೆಯದವರು, ಕೂದಲಿಗೆ ನೀಲಿ ಬಣ್ಣ ಬಳಿದುಕೊಂಡಿರುವ ಪೋಕರಿಗಳು ಹೀಗೆ ಪ್ರತಿಯೊಬ್ಬರೂ ತಮ್ಮ ಸರದಿಗಾಗಿ ಕಾಯುತ್ತಿರುತ್ತಾರೆ. ಯಾವಾಗ ಕ್ರಾಸ್ ವಾಕಿಂಗ್‌ನ ದೀಪ ಹಸಿರಾಗುತ್ತದೆಯೋ ಮತ್ತೆ ಶಿಬುಯಾದ ಟ್ರಾಫಿಕ್ ಚಕ್ರದ ಏಕಕಾಲೀನತೆ ಪೂರ್ಣಗೊಳ್ಳುತ್ತದೆ.

Untitled design - 2026-07-30T132426.903

ಶಿಬುಯಾ ಕ್ರಾಸಿಂಗ್, ಇಡೀ ಪ್ರಪಂಚದಲ್ಲೇ ‘ಅತ್ಯಂತ ಜನನಿಬಿಡ ಛೇದಕ’ ಎಂದು ಹೇಳಲಾಗುತ್ತದೆ. ಪೀಕ್ ಅವಧಿಯಲ್ಲಿ ಒಂದು ಟ್ರಾಫಿಕ್ ದೀಪ ಬದಲಾದಾಗ 2,500ಕ್ಕೂ ಹೆಚ್ಚು ಜನರು ಹಾಗೂ ದಿನವೊಂದಕ್ಕೆ 2 ಮಿಲಿಯನ್ ಜನರು ಈ ಛೇದಕವನ್ನು ಕ್ರಾಸ್ ಮಾಡುತ್ತಾರೆ. 1940ರ ಕಾಲದಲ್ಲಿ ಇದನ್ನು ಜನಪ್ರಿಯಗೊಳಿಸಿದ ಕೀರ್ತಿ ಡೆನ್ವರ್‌ನ ಸ್ಟ್ರೀಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಹೆನ್ರಿ ಬಾರ್ನೆಸ್ ಎಂಬ ಟ್ರಾಫಿಕ್ ಇಂಜಿನಿಯರ್‌ಗೆ ಸಲ್ಲುತ್ತದೆ. ಅದಕ್ಕಾಗಿ ಈ ಕ್ರಾಸಿಂಗ್ ಅನ್ನು ‘ಬಾರ್ನೆಸ್ ನೃತ್ಯ(ಬಾರ್ನೆಸ್ ಡ್ಯಾನ್ಸ್) ಎಂದೂ ಕರೆಯುತ್ತಾರೆ. ಈ ಕ್ರಾಸಿಂಗ್ ಜನರಿಗೆ ತುಂಬಾ ಆನಂದವನ್ನುಂಟು ಮಾಡುತ್ತದೆ. ಅವರು ತಮ್ಮ ರಸ್ತೆಗಳನ್ನು ಡ್ಯಾನ್ಸ್ ಮಾಡುತ್ತಲೇ ದಾಟುತ್ತಾರೆ ಎಂದು ವರದಿಗಾರನೊಬ್ಬ ಬರೆದಿದ್ದರಿಂದ ಡ್ಯಾನ್ಸ್ ಎಂಬುದು ಬಾರ್ನೆಸ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.

ಜಪಾನ್ ದೇಶದಲ್ಲಿ ಇಂಟರ್ ಸೆಕ್ಷನ್ ಆಫ್‌ ರಶ್‌ ಹವರ್‌ (ನೂಕು ನುಗ್ಗಲಿನ ಛೇದಕ) ಬಂದಿದ್ದು 1969ರಲ್ಲಿ. ಇಂದು ನಾಡಿನಾದ್ಯಂತ 300ಕ್ಕೂ ಹೆಚ್ಚು ಸಂಖ್ಯೆಯಲ್ಲಿವೆ. ಈ ಕ್ರಾಸಿಂಗ್‌ನ ಅನುಭವ ಪಡೆಯದೇ ಹೋದರೆ ಟೋಕಿಯೋ ಪ್ರವಾಸ ಅಪೂರ್ಣ ಎನ್ನಬಹುದು. ಜನನಿಬಿಡ ಛೇದಕದ ಮಧ್ಯೆದಲ್ಲಿ ನುಗ್ಗುತ್ತಾ ದಾರಿಯನ್ನು ಕ್ರಾಸ್ ಮಾಡಬಹುದು. ಅಥವಾ ದೂರದಿಂದಲೂ ನೀವು ಇದನ್ನು ಗಮನಿಸಬಹುದು. ಕ್ರಾಸಿಂಗ್‌ನ ಉತ್ತರ ಭಾಗದಲ್ಲಿರುವ ಬಹುಮಹಡಿ ಕಟ್ಟಡಗಳ ಎರಡನೆಯ ಅಂತಸ್ತಿನ ಕಿಟಕಿಯಿಂದ ಇಣುಕುತ್ತಾ, ಸಮ್ಮೋಹನಗೊಳಿಸುವ ಈ ನೋಟವನ್ನು ಚೆನ್ನಾಗಿ ಅಸ್ವಾದಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...