ನೀವು ಕೋಟ್ಯಧಿಪತಿಗಳಾಗಬೇಕಾ? ಈ ದೇಶಕ್ಕೆ ಹೋಗಿಬನ್ನಿ!
ವಿದೇಶಿ ಪ್ರವಾಸಿಗರು ಭಾರತದ ಕಣ್ಣಿನಲ್ಲಿ ಸಿರಿವಂತರೆನಿಸಿಕೊಳ್ಳುತ್ತಾರೆ. ಹಾಗಾದರೆ ಭಾರತೀಯರಿಗೆ ವಿದೇಶಕ್ಕೆ ಹೋದಾಗ ಇಂಥ ಸಿರಿವಂತಿಕೆ ಮೆರೆಯುವ ಅವಕಾಶವಿಲ್ಲವೇ? ನಾವು ಯಾವ ದೇಶಕ್ಕೆ ಹೋದಾಗ ಹೀಗೆ ಧಾರಾಳವಾಗಿ ಖರ್ಚು ಮಾಡಬಹುದು? ಯಾವ ದೇಶಗಳು ನಮ್ಮನ್ನ ಶ್ರೀಮಂತರಂತೆ ಕಾಣುತ್ತವೆ? ಅಸಲಿ ವಿಷಯ ಏನೆಂದರೆ ಕರೆನ್ಸಿ ಮೌಲ್ಯ ಏನೇ ಇದ್ದರೂ ಕೊಳ್ಳುವಿಕೆ ವಿಷಯದಲ್ಲಿ ಮಹಾ ವ್ಯತ್ಯಾಸ ಆಗುವುದಿಲ್ಲ. ಆದರೂ ನಮ್ಮ ಕರೆನ್ಸಿಗೆ ಅವರ ದೇಶದ ಹೆಚ್ಚು ಕರೆನ್ಸಿ ದೊರೆಯುತ್ತದೆ ಎಂದಾಗ ಅವರೆದುರು ನಾವು ಸಿರಿವಂತರೆಂದುಕೊಳ್ಳಬಹುದು.
ಭಾರತದಲ್ಲಿ ವಿದೇಶಿಗರು ತಿಂಗಳುಗಟ್ಟಲೆ ಪ್ರವಾಸದಲ್ಲಿ ಕಾಲ ಕಳೆಯುವುದನ್ನು ನೋಡಿದಾಗ, ಇವರಿಗೆ ಕೆಲಸ ಇಲ್ಲವೇ? ಇಷ್ಟೊಂದು ದಿನ ಪ್ರವಾಸ ಮಾಡುವಷ್ಟು ಹಣ ಇವರ ಬಳಿ ಇದೆಯಾ ಎಂಬೆಲ್ಲ ಪ್ರಶ್ನೆ ನಮ್ಮಲ್ಲಿ ಸಹಜವಾಗಿಯೇ ಬರುತ್ತವೆ. ಗಮನಿಸಿ ನೋಡಿ, ಅಂಥ ಬಹುತೇಕ ಪ್ರವಾಸಿಗರು, ಅಮೆರಿಕನ್ನರೋ, ಯುರೋಪಿಯನ್ನರೋ ಅಥವಾ ನಮಗಿಂತ ಶ್ರೀಮಂತ ದೇಶದವರೋ ಆಗಿರುತ್ತಾರೆ. ಶ್ರೀಮಂತ ದೇಶ ಅಂದರೇನು? ನಮ್ಮ ಕರೆನ್ಸಿಗಿಂತ ಹೆಚ್ಚು ಮೌಲ್ಯದ ಕರೆನ್ಸಿ ಹೊಂದಿರುವ ದೇಶದವರು ಅಂದುಕೊಳ್ಳಿ. ಉದಾಹರಣೆಗೆ ಅಮೆರಿಕ. ಅವರ ಒಂದು ಡಾಲರ್ ನಮ್ಮ ದೇಶದ 92 ರುಪಾಯಿಗೆ ಸಮ. ಅದೇ ರೀತಿ ಯುರೋಪಿನ ಕರೆನ್ಸಿಗಳು, ಪೌಂಡ್ ಗಳು, ದುಬೈನ ಧಿರಮ್ ಗಳು ಸೇರಿದಂತೆ ಹಲವು ದೇಶಗಳ ಕರೆನ್ಸಿ ನಮ್ಮ ರುಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿರುತ್ತದೆ. ಇದರಿಂದಾಗಿ ಅವರಿಗೆ ನಮ್ಮ ದೇಶ ದುಬಾರಿ ಅನಿಸುವುದಿಲ್ಲ. ಇಲ್ಲಿ ಅವರು ಶಾಪಿಂಗ್ ಮಾಡಲು ಚಿಂತೆ ಮಾಡುವುದಿಲ್ಲ. ಹೇರಳವಾಗಿ ಹಣ ಖರ್ಚು ಮಾಡುತ್ತಾರೆ. ಸಾವಿರ ರುಪಾಯಿ ವಸ್ತು ಕೊಂಡರೆ ಬರೀ ಹತ್ತು ಡಾಲರ್ ಆಗುತ್ತದೆ. ಓಕೆ ಅಂತ ಶಾಪಿಂಗ್ ಮಾಡಿಬಿಡುತ್ತಾರೆ. ಆ ವಿದೇಶಿ ಪ್ರವಾಸಿಗರು ಭಾರತದ ಕಣ್ಣಿನಲ್ಲಿ ಸಿರಿವಂತರೆನಿಸಿಕೊಳ್ಳುತ್ತಾರೆ. ಹಾಗಾದರೆ ಭಾರತೀಯರಿಗೆ ವಿದೇಶಕ್ಕೆ ಹೋದಾಗ ಇಂಥ ಸಿರಿವಂತಿಕೆ ಮೆರೆಯುವ ಅವಕಾಶವಿಲ್ಲವೇ? ನಾವು ಯಾವ ದೇಶಕ್ಕೆ ಹೋದಾಗ ಹೀಗೆ ಧಾರಾಳವಾಗಿ ಖರ್ಚು ಮಾಡಬಹುದು? ಯಾವ ದೇಶಗಳು ನಮ್ಮನ್ನ ಶ್ರೀಮಂತರಂತೆ ಕಾಣುತ್ತವೆ? ಅಸಲಿ ವಿಷಯ ಏನೆಂದರೆ ಕರೆನ್ಸಿ ಮೌಲ್ಯ ಏನೇ ಇದ್ದರೂ ಕೊಳ್ಳುವಿಕೆ ವಿಷಯದಲ್ಲಿ ಮಹಾ ವ್ಯತ್ಯಾಸ ಆಗುವುದಿಲ್ಲ. ಆದರೂ ನಮ್ಮ ಕರೆನ್ಸಿಗೆ ಅವರ ದೇಶದ ಹೆಚ್ಚು ಕರೆನ್ಸಿ ದೊರೆಯುತ್ತದೆ ಎಂದಾಗ ಅವರೆದುರು ನಾವು ಸಿರಿವಂತರೆಂದುಕೊಳ್ಳಬಹುದು. ಉದಾಹರಣೆಗೆ ವಿಯೆಟ್ನಾಂ ಕರೆನ್ಸಿಯನ್ನೇ ನೋಡಿ. ನಮ್ಮ ಒಂದು ರುಪಾಯಿ ವಿಯೆಟ್ನಾಂನ 299 ಡಾಂಗ್ ಗೆ ಸಮ. ಅಲ್ಲಿ ಹೋದಾಗ ನಮ್ಮ ವ್ಯಾಪಾರಗಳೆಲ್ಲ ಲಕ್ಷಗಳಲ್ಲಿ ಇರುತ್ತದೆ. ಸಾವಿರ ರುಪಾಯಿ ಅಂದರ ಅಲ್ಲಿನ ಮೂರು ಲಕ್ಷ ಡಾಂಗ್. ಕೈಯಲ್ಲಿ ಲಕ್ಷಾಂತರ ರುಪಾಯಿ ಇರುವ ಖುಷಿ ಅನುಭವಿಸಬಹುದು.
ಹಾಗಾದರೆ ನಾವು ಭಾರತೀಯರು ಯಾವಯಾವ ದೇಶಗಳಲ್ಲಿ ಕರೋಡ್ ಪತಿಯಂತೆ ಮೆರೆಯಬಹುದು?
ವಿಯೆಟ್ನಾಂ

1ರುಪಾಯಿ= 299 ವಿಯೆಟ್ನಾಂ ಡಾಂಗ್
ಭಾರತೀಯ ರುಪಾಯಿಯ ಎದುರು ಇದು ದುರ್ಬಲ ಕರೆನ್ಸಿ. ಇದೇ ಕಾರಣಕ್ಕೆ ಭಾರತೀಯರು ಬಹಳ ಸುಲಭವಾಗಿ ವಿಯೆಟ್ನಾಂ ಹೋಗಿ ಅಲ್ಲಿನ ಹಾ ಲಾಂಗ್ ಬೇ, ಹನೋಯ್, ಹೋ ಚಿ ಮಿನ್ಹ್, ಮೆಕಾಂಗ್ ಡೆಲ್ಟಾ ಮುಂತಾದ ಸ್ಥಳಗಳನ್ನು ಸುತ್ತಿ ಶಾಪ್ ಮಾಡಿ ಬರುತ್ತಾರೆ.
ಲಾವೋಸ್
1 ರುಪಾಯಿ= 253 ಲಾವೋಶಿಯನ್ ಕಿಪ್
ಪ್ರಕೃತಿ ಸೌಂದರ್ಯದಲ್ಲಿ ಅತ್ಯಂತ ಶ್ರೀಮಂತವೆನಿಸಿರುವ ಈ ದೇಶದ ಕರೆನ್ಸಿ ಮಾತ್ರ ಬಡವಾಗಿದೆ. ಈ ದೇಶದಲ್ಲಿ ಪ್ರವಾಸ ಬಹಳ ಅಗ್ಗ. ಕಡಿಮೆ ಹಣದಲ್ಲಿ ಕಯಾಕಿಂಗ್, ಟ್ರೆಕ್ಕಿಂಗ್, ಜಿಪ್ ಲೈನಿಂಗ್, ಹಾಟ್ ಏರ್ ಬಲೂನಿಂಗ್ ಎಲ್ಲವನ್ನೂ ಎಂಜಾಯ್ ಮಾಡಬಹುದು. ಲುವಾಂಗ್ ಪ್ರಬಾಂಗ್, ವಿಯೆಂಟಿಯಾನ್, ಕುವಾಂಗ್ ಸಿ ಫಾಲ್ಸ್, ಬುದ್ಧ ಪಾರ್ಕ್ ಮುಂತಾದ ಸ್ಥಳಕ್ಕೆ ಭೇಟಿ ಕೊಟ್ಟು ಆನಂದಿಸಬಹುದು.
ಇಂಡೋನೇಷ್ಯಾ

1 ರುಪಾಯಿ= 194 ಇಂಡೋನೇಷ್ಯಾ ರುಪೀಸ್
ಇಂಡೋನೇಷ್ಯಾ ಮೇಲೆ ಭಾರತದ ಹಿಂದುತ್ವದ ಪ್ರಭಾವ ಇರುವಂತೆಯೇ ಕರೆನ್ಸಿಯೂ ಪ್ರಭಾವಕ್ಕೊಳಗಾಗಿದೆ. ಇವರ ಕರೆನ್ಸಿಯೂ ರುಪೀಸ್. ಆದರೆ ಮೌಲ್ಯ ಮಾತ್ರ ಭಾರತಕ್ಕಿಂತ ಅತಿ ಕಡಿಮೆ. ಭಾರತದಿಂದ ಬಾಲಿ, ಗಿಲಿ ದ್ವೀಪ, ಕೊಮೊಡೋ ನ್ಯಾಷನಲ್ ಪಾರ್ಕ್ ಕಡೆಗೆ ಸುಲಭವಾಗಿ ಹಾರುವುದು ಏಕೆಂದು ಅರ್ಥವಾಯಿತಾ? ವಿಶ್ವದ ಅತಿ ದೊಡ್ಡ ದ್ವೀಪ ರಾಷ್ಟ್ರಗಳಲ್ಲಿ ಒಂದಾಗಿರುವ ಇಂಡೋನೇಷ್ಯಾ ಪ್ರಕೃತಿ ಸೌಂದರ್ಯದ ಖನಿ. ತನಾಹ್ ಲಾಟ್ ದೇವಾಲಯ, ಲೆಂಬೋಗನ್ ರೀಫ್ ಕ್ರೂಸಸ್ ಆಂಗ್ ವೈಟ್ ವಾಟರ್ ಕ್ರೂಸಸ್ ಇವೆಲ್ಲ ಬಹಳ ಕಡಿಮೆ ಖರ್ಚಿನಲ್ಲಿ ಎಂಜಾಯ್ ಮಾಡಿ ಬರಬಹುದು.
ಕಾಂಬೋಡಿಯಾ
1 ರುಪಾಯಿ= 47 ಕಂಬೋಡಿಯನ್ ರಿಯಾಲ್
ಅಂಕೋರ್ ವಾಟ್ ಭಾರತೀಯರನ್ನು ಆಕರ್ಷಿಸುತ್ತಿರುವ ಇನ್ನೊಂದು ದೇಶ. ಬಜೆಟ್ ಟ್ರಾವೆಲ್ ಗೆ ರೆಕಮೆಂಡ್ ಮಾಡಬಹುದಾದ ಜಾಗಗಳಲ್ಲಿ ಒಂದು. ಇಲ್ಲಿನ ಕರೆನ್ಸಿ ಕೂಡ ಭಾರತಕ್ಕಿಂತ ದುರ್ಬಲವೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ, ವೀಸಾ ಆನ್ ಅರೈವಲ್ ಕೊಡುತ್ತಿರುವ ಕಾಂಬೋಡಿಯಾದ ಆರ್ಥಿಕತೆ ಮಾತ್ರ ಹಿಂದುಳಿದಿದೆ. ಭಾರತೀಯರ ಬಜೆಟ್ ಪ್ರವಾಸಕ್ಕೆ ಬೆಸ್ಟ್ ಸಜೆಶನ್ ಇದು.
ಪರಾಗ್ವೆ

1ರುಪಾಯಿ= 93.60 ಗೌರಾನಿ
ದಕ್ಷಿಣ ಅಮೆರಿಕದ ದೇಶವಾಗಿರುವ ಪರಾಗ್ವೆ ಅಮೆರಿಕದ ಭಾಗವಾಗಿಯೂ ಕರೆನ್ಸಿ ದೃಷ್ಟಿಯಿಂದ ಹಿಂದಿದೆ. ಭಾರತ ಒಂದು ಡಾಲರ್ ಗೆ ಕೊಡುವಷ್ಟು ಹಣವನ್ನು, ಪರಾಗ್ವೆ ನಮ್ಮ ಒಂದು ರುಪಾಯಿಗೆ ಕೊಡುತ್ತದೆ. ಇಪ್ಪತ್ತಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ದೇಶಕ್ಕೆ ಹೋಗಲು ವಿಮಾನ ಯಾನ ಮಾತ್ರ ದುಬಾರಿ. ಹೋದ ನಂತರ ಎಲ್ಲವೂ ಸೋವಿ!
ದಕ್ಷಿಣ ಕೊರಿಯಾ
1 ರುಪಾಯಿ= 17.19 ವೋನ್
ಕೊರಿಯಾದ ಕರೆನ್ಸಿಯೆದುರು ನಾವು ಶ್ರೀಮಂತರು. ಆದರೆ ಅಲ್ಲಿ ಎಲ್ಲವೂ ದುಬಾರಿ ಎನ್ನುತ್ತಾರೆ ಪ್ರವಾಸಿಗರು. ಕರೆನ್ಸಿ ಕನ್ವರ್ಶನ್ ಮಾಡಿಕೊಂಡು ನೋಡಿದರೆ ಅಲ್ಲಿನ ಆಹಾರ, ವಿಹಾರಗಳಿಗೆ ಭಾರತದ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆಯಂತೆ. ಹೆಚ್ಚು ವೋನ್ ಗಳು ಜೇಬಲ್ಲಿದ್ದರೂ ಖರೀದಿಯ ಸಮಯದಲ್ಲಿ ಮೂಟೆಗಟ್ಟಲೆ ಹಣ ಸುರಿದಂತೆ ಭಾಸವಾಗುತ್ತದಂತೆ.
ಒಟ್ಟಾರೆಯಾಗಿ ಇಲ್ಲೆಲ್ಲ ನಮಗೆ ಕರೆನ್ಸಿ ಮೌಲ್ಯದಿಂದಾಗಿ ನಾವು ಶ್ರೀಮಂತರೆಂಬ ಭಾವನೆ ಬರುತ್ತದೆ ಎನ್ನಬಹುದು.