'ಸೊಗಡು' ಈಗ ಬಸವೇಶ್ವರ ನಗರದಲ್ಲಿ
ಡೈಮಂಡ್ ಶೇಪ್ ಅಲ್ಲಿ ನಾಜುಕಾಗಿ ಕತ್ತರಿಸಿದ ಈ ‘ಜುಣುಕದ ವಡಿ’, ರೊಟ್ಟಿ ಥಾಲಿಯ ಒಂದು ವಿಶೇಷ ಸೈಡ್ ಡಿಶ್, ಇದು ಹದವಾಗಿ ಖಾರ ಹೊಂದಿದ್ದು, ಅಲಂಕರಿಸಲು ಕಾಯಿ ತೂರಿ ಕರಿ ಎಳ್ಳನ್ನು ಉಪಯೋಗಿಸಿರುತ್ತಾರೆ. ಇಷ್ಟೆಲ್ಲಾ ಬರೀ 150 ರುಪಾಯಿಗೆ ಅಂದರೆ ಅಚ್ಚರಿ ಆಗುವುದು ಖಾತ್ರಿ. ಥಾಲಿ ಊಟಕ್ಕೆ, ಇನ್ನೊಂದು ಆಪ್ಷನ್ ಕೂಡ ಇದೆ, ಅದೇ ದೇಸಿ ತುಪ್ಪ, ಬೆಳ್ಳುಳ್ಳಿ ಖಾರ ಸೇರಿಸಿ ಕಟ್ಟಿದ ರೊಟ್ಟಿ ಮುಟಗಿ ಊಟ. ಇದಲ್ಲದೆ ಜೋಳದ ವಡಿ, ಮಸಾಲಾ ಪಡ್ಡು, ಘೀ ಪಡ್ಡು, ಥಾಲಿಪೆಟ್ಟು ಮುಂತಾದ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
- ಮೃಣಾಲಿನಿ ಪಿ. ಅಗರಖೇಡ್
ಫಾರ್ ಎ ಚೇಂಜ್ ಅಂತ ಹೊಟೇಲ್‌ಗೆ ಹೋಗುವ ಪ್ಲಾನ್ ಮಾಡಿದ್ದರೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ, ರುಚಿಯಾದ ಸ್ವಾದಿಷ್ಟ ಭೋಜನ ಸಿಗುವಂಥ ಹೊಟೇಲ್ ಹುಡುಕಿಕೊಂಡು ಹೋಗುವುದು ಈಗ ದೊಡ್ಡ ಸವಾಲಾಗಿದೆ. ಹಾನಿಕಾರಕ ಕೃತಕ ರಾಸಾಯನಿಕ, ಬಣ್ಣ ಬೆರಸದೆ ತಯಾರಿಸಿದ ಊಟ ತಿಂಡಿಗಳು ಸಿಗುವುದೇ ಅಪರೂಪವಾಗಿದೆ. ಮಷೀನ್‌ನಲ್ಲಿ ಮಾಡಿದ ಅರೆಬೆಂದ ರೊಟ್ಟಿ, ಚಪಾತಿಗಳನ್ನು ತಿಂದು ನಾಲಿಗೆ ರುಚಿ ಕೆಟ್ಟಿದ್ದರೆ, ನೀವು ಒಮ್ಮೆ ಸಾಯಿ ಸೊಗಡು ಗ್ರೂಪ್ಸ್ (ರಾಜಾಜಿನಗರ) ಅವರದ್ದೇ ಹೊಸ ಶಾಖೆ ಶುರುವಾಗಿದೆ. ಅದೂ ಬಸವೇಶ್ವರ ನಗರದ, 8 ನೇ ಮುಖ್ಯ ರಸ್ತೆ, ಲಿಬರ್ಟಿ ಶೋ ರೂಮ್ ಹತ್ತಿರ.
ಇದನ್ನೂ ಓದಿ: ಮುಂಜಾನೆಯಿಂದ ಮುಸ್ಸಂಜೆಯವರೆಗೂ ಇಬ್ಬನಿಯನ್ನು ತಬ್ಬಿಕೊಳ್ಳಿ..
ಸೊಗಡು, ಉತ್ತರ ಕರ್ನಾಟಕದ ವಿಶಿಷ್ಟ ಖಾದ್ಯಗಳಿಗೆ ಈಗಾಗಲೇ ಹೆಸರುವಾಸಿಯಾಗಿದೆ. ಹೊಸ ಶಾಖೆಯಲ್ಲಿಯೂ ಉತ್ತರ ಕರ್ನಾಟಕ ವೈವಿಧ್ಯಮಯ ಊಟ ತಿಂಡಿಗಳು ದೊರಕುತ್ತದೆ.
ಕೈಯಿಂದ ತಟ್ಟಿದ ಬಿಳಿ ಜೋಳದ ರೊಟ್ಟಿ, ಮೊಳಕೆ ಕಟ್ಟಿದ ಕಾಳಿನ ಪಲ್ಯ, ಬದನೇಕಾಯಿ ರಸಪಲ್ಯ, ತರಕಾರಿ ಹಾಕಿದ ಸ್ಪೈಸಿ ಸಾಂಬಾರ್, ಟೊಮ್ಯಾಟೊ, ಮೆಣಸು ರಸಂ, ಮೊಸರು, ಅನ್ನ ಜತೆಗೆ ನೆಂಚಿಕೊಳ್ಳಲು ಉಪ್ಪು ಹಚ್ಚಿ ಎಣ್ಣೆಯಲ್ಲಿ ಬಾಡಿಸಿದ ಹಸಿ ಮೆಣಸಿನಕಾಯಿ, ಹಸಿ ತರಕಾರಿ ಸಲಾಡ್, ಹಾಗೂ ಜುಣುಕದ ವಡಿ ಕೂಡ ದೊರಕುತ್ತದೆ.

ಡೈಮಂಡ್ ಶೇಪ್ ಅಲ್ಲಿ ನಾಜುಕಾಗಿ ಕತ್ತರಿಸಿದ ಈ ‘ಜುಣುಕದ ವಡಿ’, ರೊಟ್ಟಿ ಥಾಲಿಯ ಒಂದು ವಿಶೇಷ ಸೈಡ್ ಡಿಶ್, ಇದು ಹದವಾಗಿ ಖಾರ ಹೊಂದಿದ್ದು, ಅಲಂಕರಿಸಲು ಕಾಯಿ ತೂರಿ ಕರಿ ಎಳ್ಳನ್ನು ಉಪಯೋಗಿಸಿರುತ್ತಾರೆ. ಇಷ್ಟೆಲ್ಲಾ ಬರೀ 150 ರುಪಾಯಿಗೆ ಅಂದರೆ ಅಚ್ಚರಿ ಆಗುವುದು ಖಾತ್ರಿ. ಥಾಲಿ ಊಟಕ್ಕೆ, ಇನ್ನೊಂದು ಆಪ್ಷನ್ ಕೂಡ ಇದೆ, ಅದೇ ದೇಸಿ ತುಪ್ಪ, ಬೆಳ್ಳುಳ್ಳಿ ಖಾರ ಸೇರಿಸಿ ಕಟ್ಟಿದ ರೊಟ್ಟಿ ಮುಟಗಿ ಊಟ. ಇದಲ್ಲದೆ ಜೋಳದ ವಡಿ, ಮಸಾಲಾ ಪಡ್ಡು, ಘೀ ಪಡ್ಡು, ಥಾಲಿಪೆಟ್ಟು ಮುಂತಾದ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದೆಲ್ಲ ಬಿಟ್ಟು ಇನ್ನೇನಿದೆ…? ದೋಸೆ ಇದೆಯಾ…? ಇದೆ, ಇಡ್ಲಿ- ವಡೆ -ಸಾಂಬಾರ್ ಅದೂ ಇದೆ. ನನಗೆ ಮಂಚೂರಿ ಬೇಕು, ಅದು ಸಿಗುತ್ತೆ, ಬೇಡಾ ನನಗೆ ನಾರ್ತ್ ಮೀಲ್ಸ್ ಬೇಕು, ಅದು ತಯಾರಿರುತ್ತೆ, ಹರಾಭರಾ ಕಬಾಬ್, ಚಾಟ್ಸ್, ಜ್ಯೂಸು ಮಿಲ್ಕ್ ಶೇಕ್, ಚಹಾ ಕಾಫಿ, ಹೀಗೆ ಮೇನು ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಸಸ್ಯಾಹಾರದಲ್ಲಿ ಎಲ್ಲ ವೆರೈಟಿ, ಯೋಗ್ಯದರದಲ್ಲಿ ಇಲ್ಲಿ ಲಭ್ಯ.
ಸೆಲ್ಫ್ ಸರ್ವಿಸ್ ಇರುವುದರಿಂದ, ವೈಟಿಂಗ್ ಟೈಮ್ ಕಡಿಮೆ, ಕುಳಿತುಕೊಳ್ಳಲು ಸಾಕಷ್ಟು ದೊಡ್ಡ ಸ್ಥಳಾವಕಾಶವಿದೆ. ಥಾಲಿಯಲ್ಲಿ ಸಿಹಿ ತಿನಸು ಹಾಗೂ ಇನ್ನೂ ಹೆಚ್ಚಿನ ಶುಚಿತ್ವ ಅಗತ್ಯವಿದೆ ಎನಿಸಿತು. ನುರಿತ ಬಾಣಸಿಗರನ್ನು ಹೊಂದಿದ ‘ಸೊಗಡು’ ವೀಕೆಂಡ್ ಲಂಚ್‌ಗೆ ಹೇಳಿ ಮಾಡಿಸಿದ, ಪಾಕೆಟ್ ಫ್ರೆಂಡ್ಲಿ ಒಟೇಲ್. ಮನೆ ಊಟ ಸವಿದಂತೆ ಅನುಭವ ಕೊಡುವ ಈ ಸೊಗಡು ಹೊಟೇಲ್‌ಗೆ ದಿನ ಬಿಟ್ಟು ದಿನ ವಿಸಿಟ್ ಕೊಟ್ಟರೂ ಅನಗತ್ಯ ಎನಿಸಿದು.