ನಮ್ಮ ದಕ್ಷಿಣ ಬೆಂಗಳೂರು ಎಂದಾಕ್ಷಣ ನೆನಪಿಗೆ ಬರುವುದು ತಂಪಾದ ವಾತಾವರಣ ಮತ್ತು ಬಿಸಿಬಿಸಿಯಾದ ಫಿಲ್ಟರ್ ಕಾಫಿಯ ಘಮಲು. ಸಿಲಿಕಾನ್‌ ಸಿಟಿಯ ಆಹಾರ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಜಯನಗರದ ‘ಮಿನರ್ವಾ ಕಾಫಿ ಶಾಪ್’ (Minerva Coffee Shop), ದಕ್ಷಿಣ ಭಾರತದ ಅಪ್ಪಟ ಸಸ್ಯಾಹಾರಿ ತಿಂಡಿಗಳಿಗೆ ಹಾಗೂ ಸಾಂಪ್ರದಾಯಿಕ ರುಚಿಗೆ ಹೆಸರಾಗಿದೆ. ಜಯನಗರದ 4ನೆಯ ಬ್ಲಾಕ್‌ನಲ್ಲಿ ನೆಲೆಸಿರುವ ಈ ಜನಪ್ರಿಯ ಹೊಟೇಲ್, ಪ್ರತಿದಿನ ನೂರಾರು ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಹೈದರಾಬಾದ್‌ನ ಐಕಾನಿಕ್‌ ಪ್ಲೇಸ್‌ ಬೆಂಗಳೂರಿನಲ್ಲೂ ಫೇಮಸ್‌ ಆಗುತ್ತಿದೆ.

Untitled design - 2026-09-16T184852.136

ಬೆಳಗ್ಗಿನ ಉಪಾಹಾರದಿಂದ ಹಿಡಿದು ಸಂಜೆಯ ತಿಂಡಿಯವರೆಗೆ ಮಿನರ್ವಾ ಕಾಫಿ ಶಾಪ್‌ನಲ್ಲಿ ಸಿಗುವ ತಿಂಡಿಗಳ ರುಚಿಯೇ ಬೇರೆ. ಇಲ್ಲಿನ ಬಿಸಿಬಿಸಿ ಮೃದುವಾದ ಇಡ್ಲಿ, ಗರಿಗರಿಯಾದ ಮಸಾಲೆ ದೋಸೆ ಮತ್ತು ಬಾಯಲ್ಲಿ ನೀರೂರಿಸುವ ವಡೆಗಳು ಗ್ರಾಹಕರ ನೆಚ್ಚಿನ ಆಯ್ಕೆಗಳು. ಇದರೊಂದಿಗೆ, ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸುವ ಪರಿಮಳಯುಕ್ತ ಫಿಲ್ಟರ್ ಕಾಫಿಯ ಗುಟುಕು ಮನಸಿಗೆ ಅಪಾರ ಉಲ್ಲಾಸ ನೀಡುತ್ತದೆ. ಅಪ್ಪಟ ಶುದ್ಧ ಸಸ್ಯಾಹಾರಿ ಶೈಲಿಯಲ್ಲಿ ತಯಾರಾಗುವ ಇಲ್ಲಿನ ಪ್ರತಿಯೊಂದು ತಿನಿಸು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ವೆಲ್‌ಕಂ ಹೋಟೆಲ್ ಬೈ ಐಟಿಸಿ ಹೊಟೇಲ್ಸ್

ಅತ್ಯುತ್ತಮ ಆತಿಥ್ಯ

ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಅಥವಾ ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಜಯನಗರದ ಮಿನರ್ವಾ ಕಾಫಿ ಶಾಪ್ ಅತ್ಯಂತ ಸೂಕ್ತವಾದ ತಾಣ. ಇಲ್ಲಿನ ಹಿತಕರವಾದ ಒಳಾಂಗಣ ಮತ್ತು ಸ್ವಚ್ಛತೆಗೆ ನೀಡುವ ಆದ್ಯತೆ ಗ್ರಾಹಕರಿಗೆ ಸಂತೃಪ್ತಿಯ ಅನುಭವವನ್ನು ನೀಡುತ್ತದೆ. ಅತ್ಯಂತ ಸ್ನೇಹಪರ ಸಿಬ್ಬಂದಿ ಹಾಗೂ ತ್ವರಿತ ಸೇವೆ ಇಲ್ಲಿನ ಮತ್ತೊಂದು ವಿಶೇಷತೆಯಾಗಿದ್ದು, ಬರುವ ಪ್ರತಿಯೊಬ್ಬರಿಗೂ ಉತ್ತಮ ಆತಿಥ್ಯ ಸಿಗುತ್ತದೆ.

ಸಂಜೆಯ ಹರಟೆಗೆ ಬೆಸ್ಟ್‌

ಬೆಂಗಳೂರಿನ ಸಂಜೆಯ ತಂಪಾದ ಹವಾಮಾನಕ್ಕೆ ತಕ್ಕಂತೆ, ಮಿನರ್ವಾ ಕಾಫಿ ಶಾಪ್‌ನಲ್ಲಿ ಸಂಜೆಯ ವೇಳೆಗೆ ಹೊಸ ಚೈತನ್ಯ ಕಳೆಗಟ್ಟುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರು ಇಲ್ಲಿ ಸೇರಿ ಸಿಹಿ ಮತ್ತು ಖಾರದ ತಿನಿಸುಗಳನ್ನು ಆನಂದಿಸುತ್ತಾರೆ. ಬಿಸಿಬಿಸಿಯಾದ ಮಸಾಲ ವಡೆ, ಬಜ್ಜಿ ಮತ್ತು ಶಾವಿಗೆ ಬಾತ್‌ನಂಥ ಸಂಜೆಯ ತಿಂಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇದರ ಜತೆಗೆ, ಸುವಾಸನೆಯಿಂದ ಕೂಡಿದ ದಟ್ಟವಾದ ಫಿಲ್ಟರ್ ಕಾಫಿಯ ಜತೆಗೆ ನಡೆಯುವ ಹರಟೆಗಳು ಈ ಜಾಗಕ್ಕೆ ಒಂದು ಕಲಾತ್ಮಕ ಹಾಗೂ ಅಪ್ಯಾಯಮಾನ ಸ್ಪರ್ಶ ನೀಡುತ್ತವೆ.

Untitled design - 2026-09-16T185011.358

ಜಯನಗರದ 4ನೆಯ ಬ್ಲಾಕ್‌ನ ಪ್ರಮುಖ ರಸ್ತೆಯಲ್ಲಿ ನೆಲೆಸಿರುವ ಈ ಹೊಟೇಲ್, ಶಾಪಿಂಗ್ ಮಾಡಲು ಬರುವವರಿಗೂ ಹಾಗೂ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಹೊರಬರುವವರಿಗೂ ಸುಲಭವಾಗಿ ತಲುಪಬಹುದಾದ ನೆಚ್ಚಿನ ಜಾಗವಾಗಿದೆ. ಹೊಟೇಲ್‌ನ ಒಳಾಂಗಣವು ಪ್ರಶಾಂತವಾಗಿದ್ದು, ಆಧುನಿಕ ಸ್ಪರ್ಶದೊಂದಿಗೆ ಸಾಂಪ್ರದಾಯಿಕ ಶೈಲಿಯನ್ನು ಮೇಳೈಸಿದೆ. ಸ್ವಚ್ಛತೆಗೆ ಅತ್ಯುನ್ನತ ಆದ್ಯತೆ ನೀಡುವ ಈ ಸಂಸ್ಥೆಯು, ಪ್ರತಿಯೊಬ್ಬ ಗ್ರಾಹಕನಿಗೂ ಸುರಕ್ಷಿತ ಮತ್ತು ನೈರ್ಮಲ್ಯದ ವಾತಾವರಣ ಇಲ್ಲಿ ಇದೆ.

ಇದನ್ನೂ ಓದಿ:ಇಂಥ ಕ್ಯಾಪ್ಸುಲ್ ಗಳನ್ನು ನೋಡಿದ್ದೀರಾ?

ಪಾಕೆಟ್-ಫ್ರೆಂಡ್ಲೀ ಬೆಲೆ

ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಆಹಾರವನ್ನು ಇಲ್ಲಿ ನೀಡಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಹೊಟ್ಟೆತುಂಬಾ ರುಚಿಕರವಾದ ದಕ್ಷಿಣ ಭಾರತದ ಭಕ್ಷ್ಯಗಳನ್ನು ಸವಿಯಬಹುದು. ಶಾಪಿಂಗ್ ಮುಗಿಸಿ ಆಯಾಸ ಪರಿಹರಿಸಿಕೊಳ್ಳಲು ಅಥವಾ ಸ್ನೇಹಿತರೊಂದಿಗೆ ನೆನಪಿನಲ್ಲಿ ಉಳಿಯುವಂಥ ಕ್ಷಣಗಳನ್ನು ಕಳೆಯಲು 'ಮಿನರ್ವಾ ಕಾಫಿ ಶಾಪ್' ಸದಾ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ನೀವು ಜಯನಗರ ಕಡೆಗೆ ಹೋದರೆ ಅಥವಾ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಉತ್ತಮ ಉಪಾಹಾರ ಸವಿಯಲು ಬಯಸಿದರೆ, ತಪ್ಪದೆ ಮಿನರ್ವಾ ಕಾಫಿ ಶಾಪ್‌ಗೆ ಭೇಟಿ ನೀಡಿ. ಬೆಂಗಳೂರಿನ ಅಸಲಿ ಟೇಸ್ಟ್ ಹಾಗೂ ಕಾಫಿ ಪ್ರಿಯರ ಸ್ವರ್ಗವನ್ನು ಅನುಭವಿಸಿ!

ಉಪಾಹಾರದಿಂದ ಊಟದವರೆಗೆ

ಇಲ್ಲಿ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ನೀವು ಭೇಟಿ ನೀಡಬಹುದು. ಬೆಳಗಿನ ತಿಂಡಿ, ಮಧ್ಯಾಹ್ನ-ರಾತ್ರಿಯ ಊಟ ಅಥವಾ ಸಂಜೆಯ ಬಿಸಿಬಿಸಿ ಸ್ನ್ಯಾಕ್ಸ್, ಎಲ್ಲವೂ ಇಲ್ಲಿ ಲಭ್ಯ. ಪ್ರತಿಯೊಂದು ಉಪಾಹಾರದ ಜತೆ ನೀಡುವ ತಾಜಾ ತೆಂಗಿನಕಾಯಿ ಚಟ್ನಿ, ಘಮಘಮಿಸುವ ಶೇಂಗಾ ಚಟ್ನಿ ಮತ್ತು ದಪ್ಪಗಿನ, ರುಚಿಕರವಾದ ಸಾಂಬಾರ್ ಇಲ್ಲಿನ ಪ್ರಮುಖ ಆಕರ್ಷಣೆ.

Untitled design - 2026-09-16T185245.015

ಬೆಳಗಿನ ಉಪಾಹಾರದಲ್ಲಿ ಬಾಯಲ್ಲಿ ನೀರೂರಿಸುವ ಅನೇಕ ವಿಶೇಷ ಭಕ್ಷ್ಯಗಳಿವೆ:

  • ಎಮ್.ಎಲ್.ಎ ಪೆಸರಟ್ಟು: ಹೆಸರುಕಾಳಿನ ದೋಸೆಯೊಳಗೆ ಹದವಾದ ಉಪ್ಪಿಟ್ಟು ತುಂಬಿದ ಆಂಧ್ರದ ಪ್ರಸಿದ್ಧ ಸವಿ.
  • ಪುನುಗುಲು: ಗರಿಗರಿಯಾದ, ಸಂಜೆಯ ವೇಳೆಗೆ ಅತ್ಯಂತ ಸೂಕ್ತವಾದ ಸಾಂಪ್ರದಾಯಿಕ ತಿನಿಸು.
  • ಗುಂಟೂರು ಸ್ಪೆಷಲ್ ಇಡ್ಲಿ: ಖಾರ ಪ್ರಿಯರಿಗಾಗಿ ಖಾರ-ಮಸಾಲೆಯುಕ್ತ ‘ಸ್ಪೈಸಿ ಗುಂಟೂರು ಇಡ್ಲಿ’.
  • 70 mm ದೋಸೆ: ಆಕರ್ಷಕ ವಿನ್ಯಾಸದ ದೈತ್ಯಾಕಾರದ ಗರಿಗರಿ ದೋಸೆ.
  • ಇದರೊಂದಿಗೆ ಸಾಂಬಾರ್ ವಡೆ, ಬಟನ್ ವಡೆ, ಮೃದುವಾದ ಇಡ್ಲಿ, ಪೊಂಗಲ್, ಉಪ್ಪಿಟ್ಟು ಮತ್ತು ಪೂರಿ-ಸಾಗು ಗ್ರಾಹಕರ ಮನಸ್ಸನ್ನು ಗೆಲ್ಲುತ್ತಿವೆ.

ವಿಳಾಸ

ಸಂಖ್ಯೆ 62, 1ನೆಯ ಮಹಡಿ, ದಿ ಹೈ ಸ್ಟ್ರೀಟ್, 11ನೆಯ ಮುಖ್ಯ ರಸ್ತೆ, 4ನೆಯ ಟಿ ಬ್ಲಾಕ್ ಪೂರ್ವ, 4ನೆಯ ಬ್ಲಾಕ್, ಜಯನಗರ, ಬೆಂಗಳೂರು