Wednesday, June 24, 2026
Wednesday, June 24, 2026

ಹೊಯ್ಸಳ ವಿಲೇಜ್ ರಿಸಾರ್ಟ್

ಹಚ್ಚ ಹಸಿರಿನ ವಾತಾವರಣದಲ್ಲಿ ವಾರಾಂತ್ಯಗಳನ್ನು ಕಳೆಯಬೇಕು ಎಂದುಕೊಳ್ಳುವವರು ನಮ್ಮ ನಡುವೆ ಅನೇಕರಿದ್ದಾರೆ. ಗಂಟೆಗಳ ಕಾಲ ಪ್ರಯಾಣ ಮಾಡಿ ದಣಿಯುವುದಕ್ಕಿಂತ ಬೆಂಗಳೂರಿನ ಸಮೀಪದಲ್ಲೇ ಇರುವ ರೆಸಾರ್ಟ್‌ಗೆ ತೆರಳಿ, ರೆಸಾರ್ಟ್‌ ಟೂರಿಸಂ ಜತೆಗೆ ವೆಲ್‌ನೆಸ್‌ ಟೂರಿಸಂ ಅನುಭವಿಸಬೇಕೆಂದುಕೊಂಡರೆ ಹಾಸನ ಜಿಲ್ಲೆಯ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ʻಹೊಯ್ಸಳ ವಿಲೇಜ್ ರೆಸಾರ್ಟ್ʼ ನಿಮಗೆ ಉತ್ತಮ ಆಯ್ಕೆ.

ಬೆಂಗಳೂರಿನಿಂದ ಸುಮಾರು ಮೂರು ಗಂಟೆಗಳ ಪ್ರಯಾಣದಲ್ಲೇ ಸಿಗುವ ಹಾಸನ ಸಮೀಪದ ʻಹೊಯ್ಸಳ ವಿಲೇಜ್ ರೆಸಾರ್ಟ್ʼ ಪ್ರವಾಸಿಗರ ಮನಸೆಳೆಯುವ ವಿಶಿಷ್ಟ ತಾಣ. ಹಸಿರು ವಾತಾವರಣ, ಪುರಾತನ ಸಂಸ್ಕೃತಿ-ಸಂಪ್ರದಾಯಗಳು ಮತ್ತು ಆಧುನಿಕ ಸೌಲಭ್ಯಗಳ ಸಮನ್ವಯದಿಂದ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುವ ಈ ರೆಸಾರ್ಟ್‌, ಹೊಯ್ಸಳ ಸಾಮ್ರಾಜ್ಯದ ವೈಭವವನ್ನು ಪ್ರತಿಬಿಂಬಿಸುವಂತಿದೆ.

ಇದನ್ನೂ ಓದಿ: ಕೂರ್ಗ್‌ನ ಹೆರಿಟೇಜ್‌ ರೆಸಾರ್ಟ್‌

ಸುಮಾರು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೆಸಾರ್ಟ್‌ನ ವಿಶೇಷಗಳಲ್ಲಿ ಒಂದು ಇಲ್ಲಿನ ಆತಿಥ್ಯ. ಇಲ್ಲಿನ ಸಿಬ್ಬಂದಿ ಸಂಪ್ರದಾಯಬದ್ಧವಾಗಿ ಅತಿಥಿಗಳನ್ನು ಸ್ವಾಗತಿಸುವ, ಸ್ವೀಕರಿಸುವ ವಿಧಾನ ಪ್ರವಾಸಿಗರಲ್ಲಿ ಆತ್ಮೀಯತೆಯನ್ನು ಮೂಡಿಸುತ್ತದೆ. ದಕ್ಷಿಣ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಊಟದ ವ್ಯವಸ್ಥೆ, ಬಾಳೆ ಎಲೆಯಲ್ಲಿ ನೀಡುವ ಆಹಾರ ಮತ್ತು ಮಲೆನಾಡಿನ ರುಚಿಕರ ಖಾದ್ಯಗಳು ಅತಿಥಿಗಳಿಂದ ಮೆಚ್ಚುಗೆ ಪಡೆದಿವೆ.

Untitled design (67)

ಗ್ರಾಮೀಣ ಶೈಲಿಯ ವಿನ್ಯಾಸ ಹೊಂದಿರುವ ಈ ರೆಸಾರ್ಟ್‌ನಲ್ಲಿನ ಪ್ರಮುಖ ಕಾಟೇಜ್‌ಗಳು ಮಣ್ಣಿನ ಮನೆಗಳ ಮಾದರಿಯಲ್ಲಿವೆ. ಹೆರಿಟೇಜ್ ಕಾಟೇಜ್‌ಗಳು, ಜಕುಜಿ ವಿಲ್ಲಾಗಳು ಮತ್ತು ಮಾಲ್ನಾಡ್ ಪ್ಯಾಲೇಸ್ ಸೂಟ್‌ಗಳ ವ್ಯವಸ್ಥೆಯೂ ಇದ್ದು, ಪ್ರವಾಸಿಗರಿಗೆ ಐಷಾರಾಮಿ ಅನುಭವ ನೀಡುತ್ತವೆ. ಪ್ರತಿಯೊಂದು ಕೊಠಡಿಯಲ್ಲೂ ಗ್ರಾಮೀಣ ಸೊಗಡಿನ ಜತೆಗೆ ಆಧುನಿಕ ಸೌಲಭ್ಯಗಳನ್ನು ಕಲಾತ್ಮಕವಾಗಿ ಅಳವಡಿಸಲಾಗಿದೆ.

ಏನ್‌ ವಿಶೇಷ ಗೊತ್ತಾ?

- ಅತಿಥಿಗಳಿಗಾಗಿ ಇಲ್ಲಿ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಗೋಪೂಜೆ, ಎತ್ತಿನ ಬಂಡಿಯ ಸವಾರಿ, ಜನಪದ ಕಲೆಗಳು ಮತ್ತು ಹಳ್ಳಿಯ ಜೀವನ ಶೈಲಿಯನ್ನು ಪರಿಚಯಿಸುವ ಕಾರ್ಯಕ್ರಮಗಳು ಇಲ್ಲಿನ ಆಕರ್ಷಣೆಗಳಾಗಿವೆ.

- ಕುಟುಂಬ ಪ್ರವಾಸ, ಸ್ನೇಹಿತರೊಂದಿಗೆ ವಿಶ್ರಾಂತಿ, ಕಾರ್ಪೊರೆಟ್ ಇವೆಂಟ್ಸ್‌ ಜತೆಗೆ ಡೆಸ್ಟಿನೇಷನ್‌ ವೆಡ್ಡಿಂಗ್‌ ಪ್ಲೇಸ್‌ ಹುಡುಕುವವರಿಗೂ ಇದು ಅತ್ಯುತ್ತಮ ಆಯ್ಕೆ. ‌

Untitled design (65)

ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್

ಪ್ರಕೃತಿಯ ನಡುವೆ ನೆಲೆಸಿರುವ ಹೊಯ್ಸಳ ವಿಲೇಜ್ ರೆಸಾರ್ಟ್ ಆತಿಥ್ಯದ ಜತೆಗೆ ಆಯುರ್ವೇದ ಚಿಕಿತ್ಸೆಗಳ ಮೂಲಕವೂ ಎಲ್ಲರ ಗಮನ ಸೆಳೆದಿದೆ. ಇಲ್ಲಿರುವ ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್, ದೇಹ ಮತ್ತು ಮನಸಿಗೆ ಹೊಸ ಚೈತನ್ಯ ನೀಡುವ ಆರೈಕೆ ಕೇಂದ್ರವಾಗಿ ಪ್ರಸಿದ್ಧಿ ಗಳಿಸಿದೆ. ಆಧುನಿಕ ಜೀವನದ ಒತ್ತಡ ಮತ್ತು ಆತಂಕದಿಂದ ದೂರವಾಗಿ ಶಾಂತ ಜೀವನಶೈಲಿ ಅನುಭವಿಸಲು ಬಯಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.

ಸಮಸ್ಯೆಗೆ ಸೂಕ್ತ ಆಯುರ್ವೇದ ಚಿಕಿತ್ಸೆ

ಹೆಡ್ ಮಸಾಜ್‌, ಫುಟ್ ಮಸಾಜ್‌, ಬ್ಯಾಕ್ ಮಸಾಜ್‌ ಮೊದಲಾದ ಚಿಕಿತ್ಸೆಗಳು ದೇಹದ ಒತ್ತಡ ನಿವಾರಿಸಿ ಮನಸಿಗೆ ಶಾಂತಿ ನೀಡುತ್ತವೆ. ಹರ್ಬಲ್ ಬಾಡಿ ಮಸಾಜ್ ದೇಹದ ವಿಷಪದಾರ್ಥಗಳನ್ನು ಹೊರಹಾಕಲು ಸಹಕರಿಸುತ್ತದೆ. ಅಭ್ಯಂಗಂ, ಶಿರೋಧಾರಾ, ಪಿಳಿಚಿಲ್ ಮತ್ತು ಕಿಳಿ ಮುಂತಾದ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗಳೂ ಇಲ್ಲಿ ಲಭ್ಯ.

ಈ ವೆಲ್‌ನೆಸ್ ಸೆಂಟರ್‌ನಲ್ಲಿ ಅನುಭವಿ ಆಯುರ್ವೇದ ತಜ್ಞರು ಹಾಗೂ ಥೆರಪಿಸ್ಟ್‌ಗಳು ಸೇವೆ ನೀಡುತ್ತಾರೆ. ನಿಸರ್ಗದ ನಡುವೆ ಯೋಗ, ಧ್ಯಾನದ ಅನುಭವವನ್ನು ಪಡೆಯಬಹುದು. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ಮುಂಗಡ ಬುಕಿಂಗ್ ವ್ಯವಸ್ಥೆಯೂ ಇದೆ.

ರೆಸಾರ್ಟ್‌ ಸಮೀಪದಲ್ಲೇನಿದೆ?

ಹಾಸನದ ಪ್ರಸಿದ್ಧ ಪ್ರವಾಸಿ ತಾಣಗಳಾದ ಬೇಲೂರು, ಹಳೆಬೀಡು ಮತ್ತು ಶ್ರವಣಬೆಳಗೊಳಕ್ಕೆ ಈ ರೆಸಾರ್ಟ್ ಸಮೀಪದಲ್ಲಿದೆ. ಹೊಯ್ಸಳರ ಕಾಲದ ಶಿಲ್ಪಕಲೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಇದು ಅತ್ಯುತ್ತಮ ತಂಗುದಾಣ. UNESCO ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಬೇಲೂರು ಮತ್ತು ಹಳೆಬೀಡು ದೇವಾಲಯಗಳ ಸೌಂದರ್ಯವನ್ನು ನೋಡಿದ ಬಳಿಕ ಈ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಬಹುದು.

Untitled design (64)

ಒಟ್ಟಿನಲ್ಲಿ, ಹೊಯ್ಸಳ ವಿಲೇಜ್ ರೆಸಾರ್ಟ್ ಒಂದು ಅದ್ಭುತ ವಾಸ್ತವ್ಯದ ಜತೆಗೆ ಉತ್ತಮ ಆರೋಗ್ಯ, ನೆಮ್ಮದಿ ಮತ್ತು ಸಂಪ್ರದಾಯಗಳ ಅನುಭವ ಒಟ್ಟಾಗಿ ನೆಲೆನಿಂತ ಅದ್ಭುತ ಪ್ರವಾಸಿ ತಾಣವೂ ಆಗಿದೆ. ಪ್ರಕೃತಿಯ ಮಡಿಲಲ್ಲಿ ಆಯುರ್ವೇದದ ಆರೈಕೆ ಬಯಸುವ ಪ್ರತಿಯೊಬ್ಬರೂ ಈ ರೆಸಾರ್ಟ್‌ಗೆ ಭೇಟಿ ನೀಡಲೇಬೇಕು.

ಸಂಪರ್ಕ:

ಕಾರ್ಪೊರೇಟ್ ಕಚೇರಿ:

ಹೊಯ್ಸಳ ವಿಲೇಜ್ ರೆಸಾರ್ಟ್ಸ್

ನಂ.15, ಆಶೀರ್ವಾದ್ ಕಾಂಪ್ಲೆಕ್ಸ್, 3ನೇ ಮಹಡಿ, 2ನೇ ಮುಖ್ಯ ರಸ್ತೆ, ಲೋವರ್ ಪ್ಯಾಲೇಸ್ ಆರ್ಚರ್ಡ್ಸ್, ಸದಾಶಿವನಗರ, ಬೆಂಗಳೂರು-560080

(ಶೆಲ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ, ಇಂಡಸ್ಇಂಡ್ ಬ್ಯಾಂಕ್ ಮೇಲ್ಭಾಗ)

ದೂರವಾಣಿ: +91 80 22340166/77/88

ದೂರವಾಣಿ: +91 95910 77400 / 888 4444125

reservations@hoysalavillageresorts.com

www.hoysalavillageresorts.com

ರೆಸಾರ್ಟ್ ವಿಳಾಸ:

ಹೊಯ್ಸಳ ವಿಲೇಜ್ ರೆಸಾರ್ಟ್‌ಗಳು

ಸೈ.ನಂ.357, 1/2, ಹಂದಿಂಕೆರೆ ವಿಲೇಜ್ ಅಂಚೆ ಕಚೇರಿ ಬೇಲೂರು ರಸ್ತೆ, ಹಾಸನ-573217, ಕರ್ನಾಟಕ

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ