ಹಾಂಗ್ ಸೌ ರೆಸಾರ್ಟ್
ಒಂದೆರಡು ದಿನಗಳ ಕಾಲ ಬಿಡುವಿದೆ. ಎಲ್ಲಾದರೂ ಹಸಿರಿನ ಪರಿಸರದ ನಡುವೆ ರೆಸಾರ್ಟ್ ಸೇರಿಕೊಂಡು ಆರಾಮವಾಗಿ ಕಾಲ ಕಳೆಯಬೇಕು..ಚಿಂತೆಯನ್ನೆಲ್ಲಾ ಮರೆತು ಮೈಂಡ್ ಫ್ರೆಶ್ ಆಗುವುದಕ್ಕೆ ಫನ್ ಗೇಮ್ಸ್, ಸ್ವಿಮ್ಮಿಂಗ್ ಪೂಲ್ ಹೀಗೆ ಅನೇಕ ಆಯ್ಕೆಗಳಿರುವ ರೆಸಾರ್ಟ್ ಹುಡುಕಿ, ಮೂರು ಹೊತ್ತೂ ಶುಚಿ ರುಚಿಯಾದ ಆಹಾರ ಸೇವಿಸಬೇಕು ಅಂದುಕೊಂಡು ಹುಡುಕಾಟ ನಡೆಸ್ತಿದ್ದೀರಾ ? ಬೆಂಗಳೂರಿನಿಂದ ಗಂಟೆಗಳ ದೂರದಲ್ಲೇ ಇರುವ ʻಹಾಂಗ್ ಸೌ ರೆಸಾರ್ಟ್ʼ ನಿಮಗೆ ಗುಡ್ ಓಪ್ಶನ್ ಆಗಲಿದೆ.
ಮೊದಲ ನೋಟಕ್ಕೆ ಲವ್ವಾಗೋಯ್ತು ಅಂತಾರಲ್ಲ. ಹಾಗೆ ಈ ರೆಸಾರ್ಟ್ ನೋಡಿದ ಮಂದಿ ಫಿದಾ ಆಗದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ರೆಸಾರ್ಟ್ ಬಜೆಟ್ ಫ್ರೆಂಡ್ಲೀ ಲಿಸ್ಟ್ ನಲ್ಲಿದ್ದರೂ ಲಕ್ಸುರಿ ಲುಕ್ ನಲ್ಲೇ ಎಲ್ಲರ ಹೃದಯಕ್ಕೆ ಲಗ್ಗೆ ಇಡುತ್ತದೆ. ಇಲ್ಲಿ ಸಿಗುವ ಆತಿಥ್ಯ, ರೆಸಾರ್ಟ್ನ ನಾಲ್ಕು ಗೋಡೆಗಳಾಚೆಗೆ ಪರಿಸರದ ನಡುವೆ ಕೂತು ಕಾಲ ಕಳೆಯುವ ಅವಕಾಶವಂತೂ ರೆಸಾರ್ಟ್ ಪ್ರೇಮಿಗಳನ್ನ ಕೈಬೀಸಿ ಕರೆಯುತ್ತದೆ. ಬಜೆಟ್ ಫ್ರೆಂಡ್ಲಿಯಾಗಿದ್ದು, ಅಡ್ವೆಂಚರಸ್ ಆಗಿರುವ ಡೇ ಔಟ್ ಪ್ಯಾಕೇಜಸ್ ಹಾಗೂ ಲಕ್ಸುರಿಯಸ್ ನೇಚರ್ ಸ್ಟೇ ಯಾವುದಿದೆಯೆಂದು ನೀವು ಹುಡುಕುತ್ತಿದ್ದರೆ ಹಾಂಗ್ ಸೌ ರೆಸಾರ್ಟ್ ಬಗ್ಗೆ ಮೊದಲು ತಿಳಿಯಲೇ ಬೇಕು.
ಇದನ್ನೂ ಓದಿ: ಕೂರ್ಗ್ನ ಹೆರಿಟೇಜ್ ರೆಸಾರ್ಟ್
ಹೌದು..ರೆಸಾರ್ಟ್ ಗಳೆಂದರೆ ಬರಿಯ ಕೂರ್ಗ್, ವಯನಾಡು ಅಂತೆಲ್ಲಾ ದೂರದ ಊರುಗಳನ್ನು ಹುಡುಕಾಡುತ್ತಲೇ ಹೋಗುವವರು ಅವೆಲ್ಲವನ್ನೂ ಮರೆತು ಒಮ್ಮೆ ಬರಬೇಕಿರುವುದು ಬೆಂಗಳೂರಿನಿಂದ ಕೇವಲ ಅರ್ಧ ಗಂಟೆಯ ದೂರದಲ್ಲಿರುವ ತಾವರೆಕೆರೆ ಸಮೀಪದ ಹಾಂಗ್ ಸೌ ರೆಸಾರ್ಟ್ನತ್ತ. ನಗರದ ವಾಹನ ದಟ್ಟಣೆ, ಕೆಲಸದ ಒತ್ತಡಗಳಿಂದ ಸ್ವಲ್ಪ ಸಮಯ ದೂರವಿದ್ದು, ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ಬಯಸುವವರ ನೆಚ್ಚಿನ ತಾಣವಿದು. ಪ್ರಕೃತಿಯ ಹಸಿರು ಪರಿಸರ, ಈಜುಕೊಳ, ಸಾಹಸ ಚಟುವಟಿಕೆಗಳು, ರುಚಿಕರ ಭೋಜನ ಮತ್ತು ಆರಾಮದಾಯಕ ವಾಸ್ತವ್ಯದ ವ್ಯವಸ್ಥೆಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವ ಈ ರೆಸಾರ್ಟ್, ದಿನದ ಪ್ರವಾಸದಿಂದ ಹಿಡಿದು ರಾತ್ರಿಯ ವಾಸ್ತವ್ಯದವರೆಗೂ ವಿವಿಧ ಅನುಭವಗಳನ್ನು ನೀಡುತ್ತದೆ.
ಮಾಗಡಿ ರಸ್ತೆಯ ತಾವರೆಕೆರೆ ಸಮೀಪದ ಪೈಪ್ಲೈನ್ ಬೈಚಗುಪ್ಪೆ ರಸ್ತೆಯಲ್ಲಿರುವ ʻಹಾಂಗ್ ಸೌ ರೆಸಾರ್ಟ್ʼ, ಬೆಂಗಳೂರಿನಿಂದ ಹೆಚ್ಚು ದೂರ ಪ್ರಯಾಣಿಸದೆ ಸಿಗುವ ವಾಸ್ತವ್ಯ ತಾಣ. ಒಂದು ದಿನವನ್ನು ಪ್ರವಾಸದ ಖುಷಿಯಲ್ಲಿ ಕಳೆಯಲು ಬಯಸುವವರಿಗೆ ಇದು ಅನುಕೂಲಕರ ತಾಣವಾಗಿದೆ.

ಸಾಹಸ ಮತ್ತು ಮನೋರಂಜನೆ
ಮೊದಲ ಬಾರಿಗೆ ನೋಡುತ್ತಲೇ ಇಲ್ಲಿನ ಸ್ವಚ್ಛ ಹಾಗೂ ವಿಭಿನ್ನ ಮಾದರಿಯಲ್ಲಿ ನಿರ್ಮಿಸಲಾಗಿರುವ ಈಜುಕೊಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಭೇಟಿ ನೀಡಿದವರು ಮಿಸ್ಟ್ ರೈನ್ ಡ್ಯಾನ್ಸ್ ಅನುಭವವನ್ನು ಪಡೆದಿದ್ದರೆ ವಾಸ್ತವ್ಯ ಅಥವಾ ಡೇ ಔಟ್ ಪ್ಯಾಕೇಜ್ ಪೂರ್ಣವಾಗದು. ನೀರಿನಲ್ಲಿ ಆಟವಾಡುತ್ತಾ, ಸಂಗೀತದೊಂದಿಗೆ ಮಳೆಯ ಅನುಭವ ಪಡೆಯುತ್ತಾ ಸ್ನೇಹಿತರೊಂದಿಗೆ ಸಮಯ ಖುಷಿಯೇ ಬೇರೆ. ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳನ್ನು ಇಷ್ಟಪಡುವವರಿಗಾಗಿ ಬ್ಯಾಡ್ಮಿಂಟನ್, ಕ್ರಿಕೆಟ್, ವಾಲಿಬಾಲ್, ಟೇಬಲ್ ಟೆನಿಸ್, ಬಿಲ್ಲುಗಾರಿಕೆ ಮತ್ತು ಟಾರ್ಗೆಟ್ ಶೂಟಿಂಗ್ನಂಥ ಆಯ್ಕೆಗಳಿವೆ.
ಇದರೊಂದಿಗೆ ಜಿಪ್ಲೈನ್, ಫ್ಲೈಯಿಂಗ್ ಫಾಕ್ಸ್, ವಾಲ್ ಕ್ಲೈಂಬಿಂಗ್, ಸ್ಕೈ ಸೈಕಲ್ ಮತ್ತು ಗೈರೋ 360 ಸೈಕಲ್ನಂಥ ಚಟುವಟಿಕೆಗಳು ಪ್ರವಾಸಕ್ಕೆ ಮತ್ತಷ್ಟು ಕಿಕ್ ನೀಡುತ್ತವೆ. ಸಾಮಾನ್ಯವಾಗಿ ಎಲ್ಲೂ ಕಾಣಸಿಗದ ಕುದುರೆ ಸವಾರಿ ಮತ್ತು ಎಟಿವಿ ಬೈಕ್ ರೈಡ್ಗಳ ಅನುಭವವನ್ನೂ ಪಡೆಯಬಹುದು. ಆದರೆ ಇವುಗಳಿಗೆ ಹೆಚ್ಚುವರಿ ಶುಲ್ಕಅನ್ವಯಿಸುತ್ತದೆ. ಇತರ ಹಲವು ಚಟುವಟಿಕೆಗಳನ್ನು ಆಯ್ದ ಡೇಔಟ್ ಅಥವಾ ವಾಸ್ತವ್ಯದ ಪ್ಯಾಕೇಜ್ನಲ್ಲಿ ಸೇರಿಸಲಾಗಿದೆ. ಹೀಗಾಗಿ ವಿಶ್ರಾಂತಿಯ ಜತೆಗೆ ಉತ್ತಮ ಮನರಂಜನೆಯನ್ನೂ ಬಯಸುವವರಿಗೆ ಈ ತಾಣ ಸೂಕ್ತವಾಗಿದೆ.

ವಾಸ್ತವ್ಯಕ್ಕೆ ಹಲವು ಆಯ್ಕೆ
ಒಂದು ದಿನದ ಪ್ರವಾಸದ ಜತೆಗೆ ರಾತ್ರಿ ಉಳಿದುಕೊಳ್ಳಲು ಬಯಸುವವರಿಗಾಗಿ ರೆಸಾರ್ಟ್ನಲ್ಲಿ ಎಸಿ ಕೊಠಡಿಗಳು, ಟೆಂಟ್ ವಾಸ್ತವ್ಯ ಮತ್ತು ವಿಶಾಲವಾದ ಲಕ್ಸುರಿ ಸೂಟ್ಗಳ ಆಯ್ಕೆಗಳಿವೆ. ಪ್ರಕೃತಿಯ ವಾತಾವರಣದಲ್ಲಿ ಟೆಂಟ್ನಲ್ಲಿ ಉಳಿಯುವ ಅನುಭವವನ್ನು ಬಯಸುವವರು ಕ್ಯಾಂಪಿಂಗ್ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದು. ಹೆಚ್ಚು ಆರಾಮ ಮತ್ತು ಖಾಸಗಿತನ ಬಯಸುವವರಿಗೆ ಎಸಿ ಕೊಠಡಿಗಳು ಹಾಗೂ ಸೂಟ್ಗಳು ಅನುಕೂಲಕರವಾಗಿವೆ.
ಆಹಾ ..ಸವಿರುಚಿ !
ಪ್ಯಾಕೇಜ್ ಯಾವುದೇ ಆಗಿದ್ದರೂ ಇಲ್ಲಿ ಲಭ್ಯವಿರುವ ಆಹಾರದ ರುಚಿಯನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಹಾಂಗ್ ಸೌ ರೆಸಾರ್ಟ್ನಲ್ಲಿ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ ಮತ್ತು ರಾತ್ರಿ ಭೋಜನಕ್ಕೆ ವ್ಯವಸ್ಥೆ ಇದೆ. ಉಪಾಹಾರದಲ್ಲಿ ಇಡ್ಲಿ, ವಡೆ, ದೋಸೆ, ಖಾರಬಾತ್, ಸಾಂಬಾರ್ ಹಾಗೂ ಚಹಾ, ಕಾಫಿಯಂಥ ಆಯ್ಕೆಗಳಿವೆ. ಮಧ್ಯಾಹ್ನದ ಊಟದಲ್ಲಿ ರೊಟ್ಟಿ, ನಾನ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು, ಅನ್ನ ಹಾಗೂ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ವಾರಾಂತ್ಯಗಳಲ್ಲಿ ಮಾತ್ರ ಚಿಕನ್ ಬಿರಿಯಾನಿಯನ್ನು ಸವಿಯುವ ಅವಕಾಶವಿದೆ.
ಹಾಂಗ್ ಸೌ ರೆಸಾರ್ಟ್ ಕೇವಲ ಪ್ರವಾಸಿ ತಾಣವಾಗಿರದೆ, ಕಾರ್ಯಕ್ರಮಗಳ ಆಯೋಜನೆಗೂ ಅವಕಾಶ ಕಲ್ಪಿಸುತ್ತದೆ. ಇಲ್ಲಿ ಕನಿಷ್ಠ 50 ಜನರಿಂದ ಪ್ರಾರಂಭವಾಗಿ ಸುಮಾರು 1,800ಕ್ಕೂ ಹೆಚ್ಚು ಜನರ ಸಾಮರ್ಥ್ಯದ ಕಾರ್ಯಕ್ರಮಗಳಿಗೆ ಅನುಗುಣವಾಗಿ ಕನ್ವೆನ್ಷನ್ ಹಾಲ್ ಮತ್ತು ವಿವಿಧ ಸ್ಥಳಗಳ ವ್ಯವಸ್ಥೆಯಿದ. ಕಂಪನಿಗಳ ತಂಡದ ಔಟಿಂಗ್, ಉದ್ಯೋಗಿಗಳ ವಾರಾಂತ್ಯದ ಪ್ರವಾಸ, ಹುಟ್ಟುಹಬ್ಬ, ಕುಟುಂಬ ಸಮಾರಂಭ, ಬೇಬಿ ಶವರ್ ಮತ್ತು ಇತರ ಖಾಸಗಿ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಬಹುದು. ಉಚಿತ ವೈ-ಫೈ, ವಿದ್ಯುತ್ ಬ್ಯಾಕಪ್ ಮತ್ತು ವಾಹನ ನಿಲುಗಡೆ ಸೌಲಭ್ಯಗಳೂ ಲಭ್ಯವಿವೆ.
ಒಟ್ಟಿನಲ್ಲಿ, ಬೆಂಗಳೂರಿನ ಸಮೀಪದಲ್ಲೇ ಒಂದು ದಿನದ ವಿಶ್ರಾಂತಿ, ಸಾಹಸ ಚಟುವಟಿಕೆಗಳು, ರುಚಿಕರ ಆಹಾರ ಮತ್ತು ಆರಾಮದಾಯಕ ವಾಸ್ತವ್ಯವನ್ನು ಬಯಸುವವರು ನೀವಾದರೆ ತಾವರೆಕೆರೆ ಸಮೀಪದಲ್ಲಿರುವ ಹಾಂಗ್ ಸೌ ರೆಸಾರ್ಟ್ ಒಮ್ಮೆ ಭೇಟಿ ನೀಡಿ.
ವಿಳಾಸ:
ಪೈಪ್ಲೈನ್ ಬೈಚಗುಪ್ಪೆ ರಸ್ತೆ, ತಾವರೆಕೆರೆ, ಬೆಂಗಳೂರು, ಕರ್ನಾಟಕ – 562130.
ಸಂಪರ್ಕ: +91 70223 68404.
ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್ಗಾಗಿ: https://magadi.hongsauresort.com/
ಲೇಖನವನ್ನು ಹೆಚ್ಚು ಸುದ್ದಿಶೈಲಿಯಲ್ಲಿ ರೂಪಿಸಿ