ಕರ್ನಾಟಕದ ಕರಾವಳಿ ಭಾಗದ ಮುತ್ತುಗಳೆಂದೇ ಗುರುತಿಸಿಕೊಂಡಿರುವ ಉಡುಪಿ ಮತ್ತು ಮಂಗಳೂರು, ಪ್ರಕೃತಿ, ಸಂಸ್ಕೃತಿ ಹಾಗೂ ಪರಂಪರೆಯ ಅದ್ಭುತ ಸಂಗಮ. ಬೆಳ್ನೊರೆಯ ಕಡಲ ತೀರಗಳು, ಹಸಿರಿನಿಂದ ಕಂಗೊಳಿಸುವ ತೆಂಗಿನ ತೋಟಗಳು, ನದಿಗಳು ಹಾಗೂ ಬೆಟ್ಟಗಳ ಸೊಬಗು ಈ ಪ್ರದೇಶದ ವಿಶೇಷ ಆಕರ್ಷಣೆ. ಕರಾವಳಿಯವಳೇ ಆದ ನನಗಿದು ಹೊಸತಲ್ಲವಾದರೂ ಇಲ್ಲಿನ ರೆಸಾರ್ಟ್‌ಗಳ ಅನುಭವ ಪಡೆಯಬೇಕೆಂಬುದು ಬಹು ದಿನಗಳ ಯೋಜನೆಯಾಗಿತ್ತು. ಹೀಗೆ ಪ್ರಾರಂಭವಾದ ಹುಡುಕಾಟದಲ್ಲಿ ಕಂಡುಕೊಂಡಿದ್ದೇ ʻಬೆಲ್ಲೆ ಹೆರಿಟೇಜ್ ಫಾರ್ಮ್ಸ್ ಅಂಡ್ ರೆಸಾರ್ಟ್ʼ.

ಇದನ್ನೂ ಓದಿ:ರೆಸಾರ್ಟ್‌ಗಳಿಗೊಂದು ಬೆಂಚ್ ಮಾರ್ಕ್ ಬೆಂಚ್ಕಲ್ ರೆಸಾರ್ಟ್

ಒತ್ತಡದ ಜೀವನ, ನಗರಗಳ ಗದ್ದಲದಿಂದ ದೂರವಾಗಿ ಪ್ರಕೃತಿಯ ನಡುವೆ ಕೆಲ ಕ್ಷಣಗಳನ್ನು ಕಳೆಯುವ ಆಸೆಯಿಂದ ಮಂಗಳೂರಿನಿಂದ ಸುಮಾರು ಒಂದು ಗಂಟೆಯ ಪ್ರಯಾಣದಲ್ಲಿ ಸಿಗುವ ಬೆಳ್ಳೆ ಹೆರಿಟೇಜ್ ಫಾರ್ಮ್ಸ್ ಅಂಡ್ ರೆಸಾರ್ಟ್ಗೆ ಭೇಟಿ ನೀಡಿದ್ದೆ. ಶ್ವೇತಾ ಆರ್‌ ಕಿಣಿ ಅವರ ಮಾಲೀಕತ್ವದ ಈ ರೆಸಾರ್ಟ್‌, ಕೇವಲ ಒಂದು ವಾಸ್ತವ್ಯದ ಸ್ಥಳವಲ್ಲ; ಕರ್ನಾಟಕದ ಕರಾವಳಿ ಭಾಗದ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುವ ವಿಶಿಷ್ಟ ತಾಣವಾಗಿಯೂ ಗುರುತಿಸಿಕೊಂಡಿದೆ. ‌

Untitled design (90)

ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಮಾದರಿ

ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಹಿಂದಿನ ಕಾಲದಲ್ಲಿ ಮಣ್ಣು, ಬೆಲ್ಲ ಮತ್ತು ಸುಣ್ಣವನ್ನು ಬಳಸಿ ಮನೆಗಳನ್ನು ನಿರ್ಮಿಸುವ ವಿಶಿಷ್ಟ ಸಂಪ್ರದಾಯವಿತ್ತು. ಈ ವಿಧಾನವು ಸ್ಥಳೀಯ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿದ್ದು, ಬೇಸಗೆಯ ಉರಿಯುವ ದಿನಗಳಲ್ಲಿಯೂ ಮನೆಯೊಳಗೆ ಸಹಜವಾಗಿ ತಂಪಾದ ವಾತಾವರಣವನ್ನು ಕಾಪಾಡುತ್ತಿತ್ತು. 1700 ಮತ್ತು 1800ರ ದಶಕಗಳಲ್ಲಿ ಬಳಕೆಯಾಗುತ್ತಿದ್ದ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬೆಳ್ಳೆ ಹೆರಿಟೇಜ್ ರೆಸಾರ್ಟ್ ಮತ್ತೆ ಸಮಾಜಕ್ಕೆ ಪರಿಚಯಿಸಿದೆ.

ಇಲ್ಲಿನ ಪ್ರತಿಯೊಂದು ಕಾಟೇಜ್‌ಗಳು ಸಂಸ್ಕೃತ ಬಾಷೆಯಲ್ಲಿದ್ದು, ಭೂಮಾತೆಯ ಮಹತ್ವ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುತ್ತವೆ. ಮಣ್ಣಿನ ಮನೆಯಲ್ಲಿ ವಾಸಿಸುವ ಅನುಭವವು ಅತಿಥಿಗಳಿಗೆ ಪ್ರಕೃತಿಯೊಂದಿಗಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಡೇಔಟ್‌ ಪ್ಯಾಕೇಜ್‌ ಮಾತ್ರವಲ್ಲದೆ ವಾಸ್ತವ್ಯಕ್ಕೂ ಇಲ್ಲಿ ಅವಕಾಶವಿದೆ.

ಸಾಂಪ್ರದಾಯಿಕ ಆಹಾರ

ಅತಿಥಿಗಳಿಗೆ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯ ಉಪಾಹಾರವನ್ನು ಉಚಿತವಾಗಿ ನೀಡಲಾಗುತ್ತದೆ. ಜತೆಗೆ ಉಡುಪಿ, ಮಂಗಳೂರು ಭಾಗದ ಪ್ರಮುಖ ನಾನ್‌ವೆಜ್‌ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶವೂ ನಮಗಿಲ್ಲಿ ಲಭ್ಯವಿದೆ. ಪರಂಪರೆ, ಪ್ರಕೃತಿ ಮತ್ತು ಆತ್ಮೀಯ ಆತಿಥ್ಯದ ಅನುಭವವನ್ನು ಬಯಸುವವರಿಗೆ ಬೆಳ್ಳೆ ಹೆರಿಟೇಜ್ ಫಾರ್ಮ್ಸ್ ಅಂಡ್ ರೆಸಾರ್ಟ್ ನಿಜಕ್ಕೂ ಒಂದು ಮರೆಯಲಾಗದ ತಾಣವಾಗಿದೆ.

Untitled design (91)

ಕುಟುಂಬ ಸಮಾರಂಭಗಳು, ಹುಟ್ಟುಹಬ್ಬದ ಆಚರಣೆಗಳು, ಕಾರ್ಪೊರೇಟ್ ಸಭೆಗಳು ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಜತೆಗೆ ಮಕ್ಕಳಿಗಾಗಿ ಇಲ್ಲಿ ವಿಶೇಷ ಗೇಮ್‌ ಜೋನ್‌ ಇದ್ದು, ಇನ್‌ಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್‌ ಮತ್ತಷ್ಟು ಕ್ರಿಯಾಶೀಲರನ್ನಾಗಿಸುತ್ತದೆ.

ಮುಂಗಾರು ಪ್ರಾರಂಭವಾಗುತ್ತಲೇ ಈ ರೆಸಾರ್ಟ್‌ ವಿಶೇಷವಾಗಿಯೇ ಕಳೆಕಟ್ಟುತ್ತದೆ. ಮುಂಗಾರಿನ ಅತಿಥಿಗಳಿಗಾಗಿ ಇಲ್ಲಿ ಅಡಿಕೆ ತೋಟಗಳ ವೀಕ್ಷಣೆ ಮತ್ತು ʻಕೆಸರು ಗದ್ದೆ ನಾಟಿʼಯಂಥ ಗ್ರಾಮೀಣ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ಇಲ್ಲಿದೆ.

ಚಿಕ್ಕದಾದ ತೋಟ, ಗೋಶಾಲೆಯ ಕನಸಿನೊಂದಿಗೆ ಈ ಜಾಗವನ್ನು ಅಭಿವೃದ್ಧಿ ಪಡಸಿಕೊಂಡು, ಅದಕ್ಕೆ ಸೌಭಾಗ್ಯ ಗೋಶಾಲ ಎಂದು ನಾಮಕರಣ ಮಾಡಿ ಹತ್ತು ದನಗಳನ್ನು ಸಾಕಿಕೊಂಡಿದ್ದೆವು. ಗೋಶಾಲೆ, ತೋಟದ ಸಲಕರಣೆಗಳನ್ನಿರಿಸುವುದಕ್ಕಾಗಿ ಸಿಮೆಂಟ್‌ ಬಳಸದೆಯೇ ಮಣ್ಣು, ಸುಣ್ಣ ಬೆಲ್ಲವನ್ನು ಬಳಸಿ ಚಿಕ್ಕದಾದ ಫಾರ್ಮ್‌ ಹೌಸ್‌ ಮಾಡಿಕೊಂಡೆವು. ಈ ಫಾರ್ಮ್‌ ಹೌಸ್‌ ಗೆ ಭೇಟಿ ಕೊಟ್ಟ ಅನೇಕ ಸ್ನೇಹಿತರು ಉತ್ತಮ ಪ್ರತಿಕ್ರಿಯೆ ನೀಡಿರುವುದಷ್ಟೇ ಅಲ್ಲದೆ, ಇದನ್ನು ರೆಸಾರ್ಟ್ ಮಾಡುವಂತೆ ತಿಳಿಸಿದರು. ಕಳೆದ ಎರಡು ವರ್ಷಗಳ ಹಿಂದಷ್ಟೂಳಿದ ಜಾಗದಲ್ಲಿ 10 ಕೋಣೆಗಳ ವಿಭಿನ್ನ ಮಾದರಿಯ ರೆಸಾರ್ಟ್‌ ನಿರ್ಮಿಸಿದೆವು. ಅಲ್ಲದೆ ಸಾಂಪ್ರದಾಯಿಕ ಶೈಲಿಯ ಆಹಾರವನ್ನು ಉಣಬಡಿಸುತ್ತಿದ್ದೇವೆ. ಅತಿಥಿಗಳಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನೂ ಇಲ್ಲಿ ಕಲ್ಪಿಸಿಕೊಟ್ಟಿರುವುದುರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
- ಕೆ.ರಾಘವೇಂದ್ರ ಕಿಣಿ, ಮ್ಯಾನೇಜರ್‌, ಬೆಳ್ಳೆ ಹೆರಿಟೇಜ್‌

--

ವಿಳಾಸ:

ಬೆಳ್ಳೆ ಹೆರಿಟೇಜ್ ರೆಸಾರ್ಟ್ ಮತ್ತು ಫಾರ್ಮ್ಸ್, ರಸ್ತೆ, ಲಯನ್ಸ್ ಭವನದ ಹತ್ತಿರ, ಪಡು ಬೆಳ್ಳೆ, ರಾಜನಬೆಟ್ಟು, ಬೆಳ್ಳೆ, ಕರ್ನಾಟಕ 576120

ಕರೆ ಮಾಡಿ: 8660756118

ವಾಟ್ಸಾಪ್: 8660756118

ವೆಬ್‌ಸೈಟ್: www.belleheritagefarms.com