ಸೌತ್ ಬೆಂಗಳೂರಿನಲ್ಲಿ ಫುಡ್ ಅಡ್ಡಾಗಳಿಗೂ ಕೊರತೆ ಇಲ್ಲ. ಮದ್ಯಪ್ರಿಯರಿಗೆ ಪಬ್ ಮತ್ತು ರೆಸ್ಟೋಬಾರ್ ಗಳಿಗೂ ಕೊರತೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಬೆಂಗಳೂರಿನ ಆಹಾರ ನಗರಿಯಾಗಿ ಗುರುತಿಸಿಕೊಳ್ಳುತ್ತಿದೆ. ದೇಶದ ಹಾಗೂ ವಿದೇಶದ ಎಲ್ಲ ಬಗೆಯ ತಿಂಡಿಗಳು ಇಲ್ಲಿ ಸಿಗುತ್ತವೆ. ಇನ್ನು ಪಾರ್ಟಿ ಪ್ರಾಣಿಗಳಿಗಂತೂ ಒಂದಕ್ಕಿಂತ ಒಂದು ಅದ್ಭುತವಾದ ಪಬ್ ಗಳಿವೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಆದರೆ ಅಪರೂಪದ ಪಾರ್ಟಿಗಳಲ್ಲಿ ಮಿತಸೇವನೆ ಮಾಡುತ್ತಾ ಒಂದು ಅದ್ಭುತ ವಾತಾವರಣದಲ್ಲಿ ಕಾಲ ಕಳೆಯಲು ಬಯಸುವವರಿಗೆ ಆರ್ ಆರ್ ನಗರದಲ್ಲಿ ಒಂದನ್ನೊಂದು ಮೀರಿಸುವ ರೆಸ್ಟೋಬಾರ್ ಮತ್ತು ಪಬ್ ಗಳಿವೆ. ತನ್ನ ಅತ್ಯಂತ ವಿಶೇಷವಾದ ವಿನ್ಯಾಸದಿಂದ, ಹೆಸರಿನಿಂದ ಮತ್ತು ರುಚಿಕರ ಆಹಾರದಿಂದ ಜನಮನ ಗೆದ್ದಿರುವ ಅಂಥದ್ದೊಂದು ರೆಸ್ಟೋರೆಂಟ್ ದಿ ವಾಟರಿಂಗ್ ಹೋಲ್.

ಇದನ್ನೂ ಓದಿ: ಐಟಿ ಹಬ್‌ನಲ್ಲೊಂದು ಪೆಟ್‌ ಫ್ರೆಂಡ್ಲೀ ರೆಸಾರ್ಟ್‌

ಕ್ರಿಕೆಟ್ ಸ್ಟೇಡಿಯಂ ಫೀಲ್!

ಐಪಿಎಲ್ ಇರಲಿ ಭಾರತ ಪಾಕಿಸ್ತಾನ ಮ್ಯಾಚ್ ಇರಲಿ, ಫುಟ್ ಬಾಲ್ ವರ್ಲ್ಡ್ ಕಪ್ ಇರಲಿ, ವಾಟರಿಂಗ್ ಹೋಲ್ ಹೌಸ್ ಫುಲ್ ಆಗುತ್ತದೆ. ತಂಪು ಗಾಳಿಯ ನಡುವೆ, ಪೂಲ್ ಸೈಡ್ ಕೂತು, ಚಿಲ್ಡ್ ಬಿಯರ್ ಹೀರುತ್ತಲೋ, ತಣ್ಣನೆಯ ಸ್ಕಾಚ್ ಸವಿಯುತ್ತಲೋ ಅಗಲಪರದೆಯ ಮೇಲೆ ಮ್ಯಾಚ್ ನೋಡುವುದೇ ಒಂದು ರೋಮಾಂಚಕ ಅನುಭವ. ಸ್ಟೇಡಿಯಮ್ಮಲ್ಲೇ ಕೂತಿದ್ದೇವೋ ಎಂಬ ಆಂಬಿಯೆನ್ಸ್ ಅಲ್ಲಿ ನಿರ್ಮಾಣವಾಗುತ್ತದೆ. ನಡುನಡುವೆ ಇಷ್ಟದ ಸೈಡ್ ಡಿಶಸ್ ಆರ್ಡರ್ ಮಾಡುತ್ತಾ ಮ್ಯಾಚ್ ನೋಡುವ ಅನುಭವ ಅವರ್ಣನೀಯ.

ಒಳಗೊಮ್ಮೆ ಹೊಕ್ಕು ನೋಡಿ!

New Project (5)

ಬೆಂಗಳೂರಿನ ಆರ್ ಆರ್ ನಗರದ ಆರ್ಚ್ ದಾಟಿ ಒಂದು ಕಿಲೋಮೀಟರ್ ಒಳಗೆ ಬಂದರೆ ಅಲ್ಲಿಯೇ ಸಿಗುತ್ತದೆ ದಿ ವಾಟರಿಂಗ್ ಹೋಲ್. ಸುಮಾರು ಹದಿನೈದು ಸಾವಿರ ಚದರ ಅಡಿಯಲ್ಲಿ ನಿರ್ಮಿಸಿರುವ ಈ ರೆಸ್ಟೋರೆಂಟ್ ನ ಪ್ರವೇಶದ್ವಾರವೇ ವಿಶೇಷವಾಗಿ ಕಾಣುತ್ತದೆ. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಲ್ಲಿ ನೀರಿನ ಹೊಂಡಗಳು ಕಾಣುತ್ತವೆ. ಅದೇ ವಾಟರಿಂಗ್ ಹೋಲ್ ನ ಕಾನ್ಸೆಪ್ಟ್ ಮತ್ತು ಆ ಹೆಸರಿನ ಮೂಲ. ನೀರಿನ ಹೊಂಡ ಎಂದರೆ ನೀವಂದುಕೊಂಡಂತಲ್ಲ. ಅದೊಂದು ಪೂಲ್ ಸೈಡ್ ಕೂತ ಅನುಭವ, ಅಕ್ವೇರಿಯಂ ಪಕ್ಕದಲ್ಲಿರುವ ಭಾವ. ಭಿನ್ನ ಭಿನ್ನ ಜಾತಿಯ ಸುಂದರವಾದ ಮೀನುಗಳೇ ನಿಮ್ಮನ್ನು ಸ್ವಾಗತಿಸುತ್ತವೆ. ಸಂಪೂರ್ಣ ಹವಾ ನಿಯಂತ್ರಿತವಾದ ಈ ರೆಸ್ಟೋರೆಂಟ್ ನಲ್ಲಿ. ವಾಟರಿಂಗ್ ಹೋಲ್ ಗಳ ಪಕ್ಕ ಕೂತು ಬೇಕಾದರೂ ಆಹಾರ ಮತ್ತು ಮದ್ಯ ಸೇವಿಸಬಹುದು. ನಮಗೆ ರೂಫ್ ಟಾಪ್ ಬೇಕು ಅಂದರೆ ಅದೂ ಇಲ್ಲಿ ಲಭ್ಯವಿದೆ. ಇನ್ನು ಕ್ರಿಕೆಟ್ ಇಲ್ಲದ ದಿನ ನಿಮಗಾಗಿ ನೆಚ್ಚಿನ ಸಂಗೀತ ಆಕರ್ಷಿಸುತ್ತದೆ. ಕುಣಿದು ಕುಪ್ಪಳಿಸೋವ್ರಿಗೂ, ಶಾಂತವಾಗಿ ಲೈಟ್ ಮ್ಯೂಸಿಕ್ ಕೇಳ್ತಾ ಮೈಮರೆಯೋಣ ಎನ್ನುವವರಿಗೂ ಈ ಜಾಗ ಸೂಕ್ತ. ಕುಟುಂಬ ಸಮೇತ ಬರುವವರಿಗೂ -ಗೆಳೆಯಗೆಳತಿಯರೊಂದಿಗೆ ಬರುವವರಿಗೂ ಈ ವಾಟರಿಂಗ್ ಹೋಲ್ ಆಪ್ತವೆನಿಸುವ ಜಾಗ. ತಿಳಿ ಸಂಜೆಯ ನಂತರದ ಸಮಯ ಇದು ಇನ್ನಷ್ಟು ಆಕರ್ಷಕ ಅನಿಸುತ್ತದೆ. ಸ್ನೇಹಿತರ ಜೊತೆ ಕೂಟ, ಕಾರ್ಪೊರೇಟ್ ಮೀಟಿಂಗ್, ಹುಟ್ಟುಹಬ್ಬ, ಕ್ಯಾಂಡಲ್ ಲೈಟ್ ಡಿನ್ನರ್ ಯಾವುದಕ್ಕೂ ಸೈ ಅನಿಸಿಕೊಳ್ಳುತ್ತದೆ ವಾಟರಿಂಗ್ ಹೋಲ್.

ಜಗತ್ತಿನ ರುಚಿಗಳು ಒಂದೇ ಸ್ಥಳದಲ್ಲಿ

ಈ ರೆಸ್ಟೋರೆಂಟ್‌ನ ಮೆನು ಬಹಳ ವೈವಿಧ್ಯಮಯವಾಗಿದೆ. ಇಲ್ಲಿ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಶೈಲಿಯ ಆಹಾರಗಳನ್ನು ಸವಿಯಬಹುದು. ನಾರ್ತ್ ಇಂಡಿಯನ್, ಮಘ್ಲಾಯಿ, ಚೈನೀಸ್, ಕಾಂಟಿನೆಂಟಲ್, ಥಾಯ್, ಬಿರಿಯಾನಿ ಡೆಸರ್ಟ್ ಮತ್ತು ವಿವಿಧ ಪಾನೀಯಗಳು

ಗ್ರಾಹಕರ ಫೇವರಿಟ್ ಏನು?

ಮಟನ್ ಪೆಪ್ಪರ್ ಡ್ರೈ

ಪನೀರ್ ಟಿಕ್ಕಾ

ಕ್ರಿಸ್ಪಿ ಕಾರ್ನ್

ಚಿಲ್ಲಿ ಪ್ರಾನ್ಸ್

ಚೀಸ್ ಕಾರ್ನ್ ಬಾಲ್ಸ್

ಪನೀರ್ ಲಬಾಬ್ದಾರ್

ನೀರ್ ದೋಸೆ ಮತ್ತು ಪ್ರಾನ್ಸ್ ಸುಕ್ಕಾ

ಕ್ರಾಫ್ಟ್ ಬಿಯರ್

ಸ್ಪೆಷಲ್ ಕಾಕ್‌ಟೇಲ್‌ಗಳು

“ನಮ್ಮಲ್ಲಿ ಊಟ ಎನ್ನುವುದು ಕೇವಲ ಆಹಾರವಲ್ಲ, ಅದು ಒಂದು ಅನುಭವ. ಅತಿಥಿಗಳು ಇಲ್ಲಿ ಬಂದಾಗ ಎರಡುಮೂರು ಗಂಟೆಗಳು ಎಲ್ಲವನ್ನೂ ಮರೆತು ಖುಷಿಯಾಗಿದ್ದು ಹೋಗಬೇಕೆಂಬುದು ನಮ್ಮ ಉದ್ದೇಶ. ಪ್ರತಿ ಆಹಾರವನ್ನೂ ಗ್ರಾಹಕರಿಗೆ ತಕ್ಕಂತೆ ವಿಶೇಷವಾಗಿ ರೂಪಿಸಿ ಕೊಡುತ್ತೇವೆ.”
-ಸಿಬ್ಬಂದಿ
“RR ನಗರದಲ್ಲಿ ಅತ್ಯಂತ ಸುಂದರವಾದ ರೆಸ್ಟೋರೆಂಟ್‌ಗಳಲ್ಲಿ ಇದೂ ಒಂದು. ಲೇಕ್ ಸೈಡ್ ಕೂತಂತೆ ಅನುಭವ, ಹಸಿರು ವಾತಾವರಣ ಮತ್ತು ಉತ್ತಮ ಆಹಾರ—all together make it a memorable place.”
- ಶರಣ್ ರಂಗನಾಥ್
“ಇದು ಒಂದು ಹಿಡ್‌ಡನ್ ಜೆಮ್. ಅಂಬಿಯನ್ಸ್ ತುಂಬಾ ಕಂಫರ್ಟೆಬಲ್. ಸ್ನೇಹಿತರ ಜೊತೆ ಅಥವಾ ಡೇಟ್‌ಗೆ ಪರಿಪೂರ್ಣ ಸ್ಥಳ.”
-ಸಹನಾ ಆರ್
“ಇಲ್ಲಿನ ಮಟನ್ ಪೆಪ್ಪರ್ ಡ್ರೈ ಬಹಳ ರುಚಿಯಾಗಿರುತ್ತದೆ. ಮಟನ್ ಪೆಪ್ಪರ್ ಡ್ರೈ ತಿನ್ನಬೇಕು ಅನಿಸಿದಾಗೆಲ್ಲ ಇಪ್ಪತ್ತು ಕಿಮೀ ಡ್ರೈವ್ ಮಾಡಿ ಬರುತ್ತೇನೆ.
- ರಾಘವ್ ಎಂ. ಎಸ್.

ವಾಟರಿಂಗ್ ಹೋಲ್ ಯಾಕೆ ಸ್ಪೆಷಲ್?

New Project (6)

ಲೇಕ್ ಸೈಡ್ ಅನಿಸುವ ಆಂಬಿಯೆನ್ಸ್

ಮ್ಯೂಸಿಕ್ ಮತ್ತು ಸ್ಪೋರ್ಟ್ಸ್ ಸ್ಕ್ರೀನಿಂಗ್

ಕ್ಯಾಂಡಲ್ ಲೈಟ್ ದಿನ್ನರ್ ವ್ಯವಸ್ಥೆ

ಕುಟುಂಬ ಮತ್ತು ಸ್ನೇಹಿತರ ಕೂಟಗಳಿಗೆ ದೊಡ್ಡ ಸೀಟಿಂಗ್

ಪೆಟ್ ಫ್ರೆಂಡ್ಲಿ ವಾತಾವರಣ

ಕ್ರಾಫ್ಟ್ ಬಿಯರ್ ಮತ್ತು ಕಾಕ್ ಟೇಲ್‌ಗಳು

ವಿಶಾಲ ಪಾರ್ಕಿಂಗ್ ವ್ಯವಸ್ಥೆ