ಬೆಂಗಳೂರು ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಇಲ್ಲಿನ ಸುಂದರ ವಾತಾವರಣ ಮತ್ತು ವಿಶೇಷವಾದ ಆಹಾರ ಸಂಸ್ಕೃತಿ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ದಕ್ಷಿಣ ಭಾಗದ ರಾಜರಾಜೇಶ್ವರಿನಗರ ಸಿಲಿಕಾನ್‌ ಸಿಟಿಯ ಅತ್ಯಂತ ಪ್ರಮುಖ ಆಹಾರ ತಾಣವಾಗಿ ಹೊರಹೊಮ್ಮುತ್ತಿದೆ. ಅತ್ಯುತ್ತಮ ಬಾರ್ ಮತ್ತು ರುಚಿಕರವಾದ ತಿನಿಸುಗಳನ್ನು ಹುಡುಕುವವರಿಗೆ ಇಲ್ಲಿನ ‘ಐವರಿ ಬೈ ದಿ ಲೇಕ್’ ರೆಸ್ಟೋ-ಬಾರ್ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ: ಕ್ರಿಕೆಟ್‌ನ ಕಿಕ್ ಹೆಚ್ಚಿಸುವ ರೆಸ್ಟೋ ಬಾರ್

ಆರ್‌ಆರ್‌ ನಗರದ ಕೆಂಚನಹಳ್ಳಿ ಸರೋವರದ ಬಳಿ ಇರುವ ಈ ರೆಸ್ಟೋ-ಬಾರ್, ನಗರದ ಗದ್ದಲದಿಂದ ಒಂದಷ್ಟು ದೂರದಲ್ಲಿದ್ದು, ಸಂಜೆಯನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ.

ಮೋಡಿಮಾಡುವ ಅಂಬಿಯನ್ಸ್

‘ಐವರಿ ಬೈ ದಿ ಲೇಕ್’ ಹೆಸರಿಗೆ ತಕ್ಕಂತೆ ಸರೋವರದ ಸುಂದರ ನೋಟವನ್ನು ಒದಗಿಸುತ್ತದೆ. ಇಲ್ಲಿನ ವಿನ್ಯಾಸವನ್ನು ನೋಡಿದವರಂತೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಈ ರೆಸ್ಟೋ-ಬಾರ್ ಡ್ಯುವಲ್‌ ಫ್ಲೋರ್‌ ವಿನ್ಯಾಸವನ್ನು ಹೊಂದಿದ್ದು, ಎರಡನೇ ಮಹಡಿಯಲ್ಲಿ ಪ್ರಶಾಂತವಾದ ಒಳಾಂಗಣ ಆಸನ ವ್ಯವಸ್ಥೆ ಹಾಗೂ ಮೂರನೇ ಮಹಡಿಯಲ್ಲಿ ಓಪನ್-ಏರ್ ರೂಫ್‌ಟಾಪ್ ವ್ಯವಸ್ಥೆಯಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿನ ಲೈಟಿಂಗ್ ಮತ್ತು ಹಿತಕರವಾದ ಸಂಗೀತವು ಆಹಾರ ಪ್ರಿಯರ ಮನಸ್ಸನ್ನು ಹಗುರಗೊಳಿಸುತ್ತದೆ.

Untitled Design - 2026-11-25T183829.223

ಫುಡ್‌ ಮೇನಿಯಾ

ಇಲ್ಲಿನ ಕಿಚನ್‌ನಲ್ಲಿ ದೇಶ-ವಿದೇಶಗಳ ಪ್ರಸಿದ್ಧ ರುಚಿಗಳನ್ನು ತಯಾರಿಸುತ್ತಾರೆ. ನಾರ್ಥ್ ಇಂಡಿಯನ್‌, ಏಷ್ಯನ್, ಇಟಾಲಿಯನ್, ಕಾಂಟಿನೆಂಟಲ್ ಹಾಗೂ ಚೈನೀಸ್ ಶೈಲಿಯ ತಿನಿಸುಗಳು ಇಲ್ಲಿ ಲಭ್ಯವಿವೆ. ಇಲ್ಲಿ ಸಿಗುವ ಸುಶಿ, ವೆಜ್ ಹಾಗೂ ನಾನ್-ವೆಜ್ ಬಾವೊ ಬನ್ಸ್, ಡಂಪ್ಲಿಂಗ್ಸ್ , ಪಾಸ್ತಾ ಮತ್ತು ವಿವಿಧ ಶೈಲಿಯ ಪಿಜ್ಜಾಗಳು ಗ್ರಾಹಕರ ನೆಚ್ಚಿನ ಖಾದ್ಯಗಳಾಗಿವೆ.

ತಂದೂರಿ ಸ್ಟಾರ್ಟರ್‌ಗಳು, ಸೀಫುಡ್ ಖಾದ್ಯಗಳು ಹಾಗೂ ನಾಲಿಗೆಯ ರುಚಿ ಹೆಚ್ಚಿಸುವ ಡೆಸರ್ಟ್‌ಗಳು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಆಹಾರಪ್ರಿಯನೂ ಮೆಚ್ಚಿಕೊಳ್ಳಲೇ ಬೇಕಿರುವ ಆಯ್ಕೆಗಳು.

ಕಿಕ್‌ ನೀಡುವ ಕಾಕ್‌ಟೇಲ್ಸ್

ಈ ರೆಸ್ಟೋ-ಬಾರ್‌ನ ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಪಾನೀಯಗಳು. 'ಐವರಿ ಬೈ ದಿ ಲೇಕ್' ತನ್ನ ವಿಶಿಷ್ಟ ಕಾಕ್‌ಟೇಲ್‌ಗಳು ಹಾಗೂ ಮಾಕ್‌ಟೇಲ್‌ಗಳಿಗೆ ಹೆಸರಾಗಿದೆ. ನಗರದ ಪ್ರಸಿದ್ಧ ಮಿಕ್ಸಾಲಜಿಸ್ಟ್‌ಗಳು ಸಿದ್ಧಪಡಿಸುವ 'ಸಿಗ್ನೇಚರ್ ಕಾಕ್‌ಟೇಲ್‌ಗಳು' ಮತ್ತು ತಂಪಾದ ಡ್ರಾಫ್ಟ್ ಬೀರ್‌ಗಳು ಸಂಜೆಯ ಮೂಡ್‌ಗೆ ಹೊಸ ಚೈತನ್ಯ ನೀಡುತ್ತವೆ. ಆಲ್ಕೋಹಾಲ್ ಬೇಡವೆನ್ನುವವರಿಗಾಗಿಯೇ ವಿಧ ವಿಧವಾದ ಮಾಕ್‌ಟೇಲ್ ಹಾಗೂ ಫ್ರೆಶ್ ಜ್ಯೂಸ್ ಲಭ್ಯವಿದೆ.

Untitled Design - 2026-11-25T183701.713

ಲೈವ್ ಮ್ಯೂಸಿಕ್ ಟ್ರೆಂಡ್‌

ವಾರಾಂತ್ಯಗಳಲ್ಲಿ ಇಲ್ಲಿ ಲೈವ್ ಮ್ಯೂಸಿಕ್ ಬ್ಯಾಂಡ್‌ಗಳ ಕಾರ್ಯಕ್ರಮಗಳು, ಡಿಜೆ ನೈಟ್‌ಗಳು ಮತ್ತು ಕ್ರೀಡಾ ಪ್ರೇಮಿಗಳಿಗಾಗಿ ದೊಡ್ಡ ಸ್ಕ್ರೀನ್‌ಗಳಲ್ಲಿ ಲೈವ್ ಮ್ಯಾಚ್ ಸೌಲಭ್ಯಗಳೂ ಇವೆ.

ಭೇಟಿ ನೀಡುನ ಮುನ್ನ

ಸ್ಥಳ: ಆರ್‌ಆರ್ ನಗರದ ರೆಮ್‌ಕೋ ಬಿಹೆಚ್‌ಇಎಲ್ ಲೇಔಟ್‌ನಲ್ಲಿರುವ 'ಪ್ರಕೃತಿ ಲೇಕ್ ವ್ಯೂ' ಕಟ್ಟಡ (2ನೇ ಮತ್ತು 3ನೇ ಮಹಡಿ), ಕೆಂಚೇನಹಳ್ಳಿ ಸರೋವರದ ಬಳಿ.

ಸಮಯ: ಮಧ್ಯಾಹ್ನ 12:00 ರಿಂದ ರಾತ್ರಿ 11:59 ರವರೆಗೆ ತೆರೆದಿರುತ್ತದೆ.

ಸಲಹೆ: ವಾರಾಂತ್ಯದ ಸಂಜೆಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಮೊದಲೇ ಟೇಬಲ್ ಬುಕ್ ಮಾಡಿಕೊಳ್ಳುವುದು ಸೂಕ್ತ.

ವಿಶೇಷ ಆಫರ್‌ಗಳು

ವಂಡರ್ ವುಮನ್ – ಪ್ರತಿ ಮಂಗಳವಾರ ಮಹಿಳೆಯರಿಗೆ ಒಂದು ಮಾಕ್‌ಟೇಲ್ ಅಥವಾ ಕಾಕ್‌ಟೇಲ್ ಉಚಿತ!

ಥರ್ಸ್ಟಿ ಥರ್ಸ್‌ಡೇ – ಪ್ರತಿ ಗುರುವಾರ ಯಾವುದೇ ಮದ್ಯವನ್ನು ಕೊಂಡುಕೊಂಡರೂ ಶೇ. 50ರಷ್ಟು ರಿಯಾಯಿತಿ!

ಹ್ಯಾಪಿ ಅವರ್ಸ್ – ಸೋಮವಾರದಿಂದ ಶುಕ್ರವಾರದವರೆಗೆ, ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಬಿಯರ್ ಖರೀದಿಯ ಮೇಲೆ 1+1 ಆಫರ್!

ಸೆಲೆಬ್ರಿಟಿ ಶೆಫ್‌ ಸೋನಾ ಗಣೇಶ್‌ ನಾಯಕ್‌ ಅವರ ಮಗ ಅರ್ಜುನ್‌ ನಾಯಕ್‌ ಅವರ ಕನಸಿನ ಕೂಸು ʻಐವರಿ ಬೈ ದಿ ಲೇಕ್‌ʼ ಪ್ರಾರಂಭವಾಗಿ ಒಂದೂವರೆ ವರ್ಷವೇ ಕಳೆದಿದೆ. ಖುದ್ದು ಶೆಫ್‌ ಆಗಿರುವ ಅವರು, ಹೊಸತನದ ಈ ರೆಸ್ಟೋ ಬಾರ್‌ ನಿರ್ಮಾಣ ಮಾಡಿದ್ದಾರೆ. ಇದು ಮಲ್ಟಿ ಕ್ಯುಸಿನ್‌ ರೆಸ್ಟೋರೆಂಟ್‌ ಆಗಿದ್ದು, ಯುರೋಪಿಯನ್‌, ಪಾನ್‌ ಏಷ್ಯನ್‌, ಇಂಡಿಯನ್‌ ಹಾಗೂ ಕಾಂಟಿನೆಂಟಲ್‌ ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವೀಕೆಂಡ್‌ ಲೈವ್‌ ಮ್ಯೂಸಿಕ್‌, ಬ್ಯಾಂಡ್ಸ್‌ ಇರುವುದರಿಂದ ಆಹಾರದ ಜತೆಗೆ ಮನರಂಜನೆಯೂ ಲಭ್ಯವಾಗಲಿದೆ.
- ಅಜಯ್‌ ವಿಕ್ರಂ, ಶೆಪ್‌ ಹಾಗೂ ಜನರಲ್‌ ಮ್ಯಾನೇಜರ್‌