Wednesday, February 4, 2026
Wednesday, February 4, 2026

ಹೆಸರೆಲ್ಲ ಹೀಗಿದ್ದರೆ ಹೇಗೆ?

ಬಯಲುಸೀಮೆಯಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ತೆಂಗಿನಕಾಯಿ ಹೀಗೆ ಎಂಥೆಂಥ ಸರ್ನೇಮುಗಳನ್ನು ಹೆಮ್ಮೆಯಿಂದ ಕ್ಯಾರಿ ಮಾಡುತ್ತಾರೆ. ಹೀಗೆ ಊರಿನ ಹೆಸರುಗಳು ಕೂಡ ಅವು ಫನ್ನಿ ಇದ್ದರೂ ಅವುಗಳನ್ನು ಉಳಿಸಿಕೊಳ್ಳಬೇಕೇ ಹೊರತು ಬದಲಿಸುವ ನಿರ್ಧಾರಕ್ಕೆ ಮುಂದಾಗಬಾರದು. ಉತ್ತರ ಭಾರತದಲ್ಲಿ ಸಚಿವರೊಬ್ಬರ ಸರ್ನೇಮ್ ಮುಂಡೆ ಅಂತ ಇದ್ದದ್ದು ನಿಮಗೆ ನೆನಪಿರಬಹುದು. ಅದೇ ರೀತಿ ಹುಬ್ಬಳ್ಳಿಯವರೊಬ್ಬರ ಮನೆತನದ ಹೆಸರು ಮಂಗ್ಸುಳೆ ಎಂದಿತ್ತು.

ಊರಿನ ಹೆಸರುಗಳು ಮತ್ತು ಮನೆತನ ಅಥವಾ ಸಮುದಾಯದ ಹೆಸರುಗಳು ಕೆಲವೊಮ್ಮೆ ವಿಚಿತ್ರವೆನಿಸುವಂತೆ ಇರುತ್ತವೆ. ಆದರೆ ಅವರವರ ಊರುಗಳ ಮನೆತನದ ಹೆಸರು ಅವರಿಗೆ ಹೆಮ್ಮೆಯೇ. ಅದನ್ನು ಅನ್ಯಥಾ ನೋಡಕೂಡದು. ಅವು ಮುಜುಗರ ತರಕೂಡದು. ಇತರರೂ ಅವರನ್ನು ಮುಜುಗರಕ್ಕೀಡುಮಾಡಬಾರದು. ಆದರೆ ಮೊದಲ ಸಲ ಅಂಥ ಹೆಸರು ಕೇಳಿದಾಗ ಆ ಕ್ಷಣಕ್ಕೆ ಬೇಡವೆಂದರೂ ನಗು ಬರುವುದು ಅಥವಾ ಹಾಸ್ಯದ ವಸ್ತು ಆಗುವುದು ಅಷ್ಟೇ ಸಹಜ.

ಬಯಲುಸೀಮೆಯಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ತೆಂಗಿನಕಾಯಿ ಹೀಗೆ ಎಂಥೆಂಥ ಸರ್ನೇಮುಗಳನ್ನು ಹೆಮ್ಮೆಯಿಂದ ಕ್ಯಾರಿ ಮಾಡುತ್ತಾರೆ. ಹೀಗೆ ಊರಿನ ಹೆಸರುಗಳು ಕೂಡ ಅವು ಫನ್ನಿ ಇದ್ದರೂ ಅವುಗಳನ್ನು ಉಳಿಸಿಕೊಳ್ಳಬೇಕೇ ಹೊರತು ಬದಲಿಸುವ ನಿರ್ಧಾರಕ್ಕೆ ಮುಂದಾಗಬಾರದು. ಉತ್ತರ ಭಾರತದಲ್ಲಿ ಸಚಿವರೊಬ್ಬರ ಸರ್ನೇಮ್ ಮುಂಡೆ ಅಂತ ಇದ್ದದ್ದು ನಿಮಗೆ ನೆನಪಿರಬಹುದು. ಅದೇ ರೀತಿ ಹುಬ್ಬಳ್ಳಿಯವರೊಬ್ಬರ ಮನೆತನದ ಹೆಸರು ಮಂಗ್ಸುಳೆ ಎಂದಿತ್ತು. ಹಾಗಂತ ಅದರ ಬಗ್ಗೆ ಅವರು ನಾಚುವ ಅಗತ್ಯವಿಲ್ಲ. ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕು.

ಇದನ್ನೂ ಓದಿ: ಮೇಲ್ ಕಳ್ಸಿದ್ದು ನಾನೇ !

ಉತ್ತರಕನ್ನಡದ ಮಂಕಿ ಎಂಬ ಊರಿನ ಕುರಿತು ಯಾರೋ ಅಪಹಾಸ್ಯ ಮಾಡಬಹುದು. ಆದರೆ ಆ ಊರಿನವರಿಗೆ ಅವರ ಊರಿನ ಹೆಸರೊಂದು ಹೆಮ್ಮೆ ಮತ್ತು ಐಡೆಂಟಿಟಿ. ಉತ್ತರ ಕನ್ನಡದ ಹಾದಿಯಲ್ಲಿ ಸಾಲಾಗಿ ಮೂರು ಊರುಗಳು ಸಿಗುತ್ತವೆ. ಬಾರೆ, ಸೀರೆ, ಕಳಚೆ ಎಂದು. ಹಾಗೆ ಬದಲಿಸೋದೇ ಆದ್ರೆ ಇಲ್ಲಿ ಯಾರು ಊರಿನ ಹೆಸರು ಬದಲಿಸಬೇಕು? ಸೀರೆ ಬದಲಿಸಬೇಕು ಅನ್ನಬೇಡಿ! ಫಾರ್ಟಾಬಾದ್ ಅಂತೊಂದು ಊರಿದೆ. ಅದನ್ನೇನು ಮಾಡೋಣ? ಮಹಾರಾಷ್ಟ್ರದಲ್ಲಿ ಬಾಸ್ಟರ್ಡ್ ವಾಡಿ ಎಂಬ ಊರಿದೆ. ಮುಂಬಯಿಯಲ್ಲಿ ಚಿಂಚುಪೋಕ್ಲಿ ಎಂಬ ಜಾಗವೊಂದಿದೆ. ಇಂಥದ್ದನ್ನೆಲ್ಲ ಯೋಗಿಯೇ ಆದರೂ ಬದಲಿಸಬಾರದು. ಮಹಾರಾಷ್ಟ್ರದಲ್ಲಿ ಭೋಸರಿ ಎಂಬ ಊರಿದೆ. ಉತ್ತರಪ್ರದೇಶದಲ್ಲೂ ಅದೇ ಹೆಸರಿನ ಊರಿದೆಯಂತೆ. ಅಲ್ಲಿನ ಬಸ್ ನಲ್ಲಿ ಪ್ರಯಾಣಿಸುವ ಮಂದಿಗೆ ಅವರ ಊರು ಬಹಳ ಇರಿಸಮುರಿಸು ತಂದಿದೆಯಂತೆ. ಪ್ರತಿ ಬಾರಿ ಊರು ಬಂದಾಗ ಕಂಡಕ್ಟರ್ ಭೋಸರಿವಾಲೋ ಜಲ್ದೀ ಉತರ್ ಜಾವ್ ಅಂತ ಹೇಳಿದರೆ ಕಿವಿಮುಚ್ಚಿಕೊಂಡು ಶಿವಶಿವಾ ಅನ್ನುತ್ತಾರಂತೆ! ದಯವಿಟ್ಟು ನಮ್ಮ ಊರ ಹೆಸರು ಬದಲಿಸಿ ಎಂದು ಅಹವಾಲೂ ಸಲ್ಲಿಸಿದ್ದಾರಂತೆ. ಹೆಸರುಗಳು ಎಂಥೆಂಥ ಫಜೀತಿ ತರುತ್ತವೆ ನೋಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!