ವಿಮಾನದೊಳಗಿನ ವಾತಾವರಣ
ಇಂದು ನಾವು 40 ಸಾವಿರ ಅಡಿಗಳ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಆರಾಮವಾಗಿ ಕುಳಿತು, ಟಿವಿ ನೋಡುತ್ತೇವೆ, ಸ್ನಾನ ಮಾಡುತ್ತೇವೆ, ಓದುತ್ತೇವೆ, ಬರೆಯುತ್ತೇವೆ, ಊಟ ಮಾಡುತ್ತೇವೆ, ನಿದ್ರಿಸುತ್ತೇವೆ... ಇವೆಲ್ಲವೂ ನಮಗೆ ಸಾಧ್ಯವಾಗುತ್ತಿದೆ. ಆದರೆ ಬಾಹ್ಯ ವಾತಾವರಣದಲ್ಲಿ ಆಗುವ ತಾಪಮಾನದ ಬಗ್ಗೆ ಯೋಚಿಸಿ ದರೆ, ಒಮ್ಮೆ ಎಂಥವರಿಗಾದರೂ ಆಶ್ಚರ್ಯವಾಗುತ್ತದೆ.
ವಿಮಾನಯಾನದ ತಂತ್ರಜ್ಞಾನ ನಿಜಕ್ಕೂ ಅದ್ಭುತವೇ. ಎಷ್ಟೋ ಸಲ ವೈಜ್ಞಾನಿಕವಾಗಿ ವಿವರಿಸಿ ದರೂ ನಂಬುವುದು ಕಷ್ಟ. ಮಾನವ ಪ್ರಗತಿಯ ಇತಿಹಾಸದಲ್ಲಿ, ಕೆಲವೊಂದು ಸಾಧನೆಗಳು ಅಚ್ಚರಿ ಮೂಡಿಸುವಂತಿವೆ. ಅದಕ್ಕೆ ಒಂದು ಉದಾಹರಣೆಯೆಂದರೆ ವಿಮಾನಯಾನ.

ಇಂದು ನಾವು 40 ಸಾವಿರ ಅಡಿಗಳ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಆರಾಮವಾಗಿ ಕುಳಿತು, ಟಿವಿ ನೋಡುತ್ತೇವೆ, ಸ್ನಾನ ಮಾಡುತ್ತೇವೆ, ಓದುತ್ತೇವೆ, ಬರೆಯುತ್ತೇವೆ, ಊಟ ಮಾಡುತ್ತೇವೆ, ನಿದ್ರಿಸುತ್ತೇವೆ... ಇವೆಲ್ಲವೂ ನಮಗೆ ಸಾಧ್ಯವಾಗುತ್ತಿದೆ. ಆದರೆ ಬಾಹ್ಯ ವಾತಾವರಣದಲ್ಲಿ ಆಗುವ ತಾಪಮಾನದ ಬಗ್ಗೆ ಯೋಚಿಸಿದರೆ, ಒಮ್ಮೆ ಎಂಥವರಿಗಾದರೂ ಆಶ್ಚರ್ಯವಾಗುತ್ತದೆ. ವಿಮಾನಗಳು ಸಾಮಾನ್ಯವಾಗಿ ಸಮತಲ ವಾತಾವರಣದ (Cruising Altitude) ಸಮಯದಲ್ಲಿ ಸುಮಾರು 40 ಸಾವಿರ ಅಡಿಗಳ ಎತ್ತರದಲ್ಲಿ ಹಾರುತ್ತವೆ. ಈ ಎತ್ತರದಲ್ಲಿ ಬಾಹ್ಯ ತಾಪಮಾನ ಮೈನಸ್ 70 ಡಿಗ್ರಿ ಸೆಂಟಿಗ್ರೇಡ್ (-94KF ) ವರೆಗೆ ಇಳಿಯಬಹುದು. ಇದು ಅತಿ ತೀವ್ರ ಚಳಿಯ ವಾತಾವರಣ.
ಇಂಥ ವಾತಾವರಣದಲ್ಲಿ ಮನುಷ್ಯನಿಗೆ ಬದುಕುವುದು ಅಸಾಧ್ಯ. ಇಷ್ಟು ಶೀತ ಪ್ರದೇಶದಲ್ಲಿ ಎರಡು ನಿಮಿಷ ಸಹ ಇರಲು ಸಾಧ್ಯವಿಲ್ಲ. ಇಷ್ಟು ಕಡಿಮೆ ತಾಪಮಾನದಲ್ಲಿ ಉಸಿರಾಟಕ್ಕೆ ಆಮ್ಲಜನಕ ಸಾಕಾಗುವುದಿಲ್ಲ. ಮನುಷ್ಯನ ದೇಹದ ತಾಪಮಾನ ಕೆಲವು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಚರ್ಮ ಮತ್ತು ಉಸಿರಾಟದ ಅಂಗಗಳು ತಕ್ಷಣಕ್ಕೆ ಹಾನಿಗೊಳಗಾಗುತ್ತವೆ. ಹೀಗಾಗಿ, ಈ ತಾಪಮಾನದಲ್ಲಿ ಮನುಷ್ಯನಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲದಿದ್ದರೆ ಅವನು ಅತ್ಯಲ್ಪ ಸಮಯದಲ್ಲಿ ಅಚೇತನನಾಗಿ ಬಿಡುತ್ತಾನೆ ಮತ್ತು ಕೊನೆಗೆ ಸಾವು ಸಂಭವಿಸುತ್ತದೆ.
ಇದನ್ನು ಓದಿ ವಿಮಾನದ ಇಂಧನ ಲೆಕ್ಕಾಚಾರ
ಆದರೆ ಹೊರಗೆ ಅಷ್ಟು ಶೀತವಿದ್ದರೂ, ನಾವು ವಿಮಾನದ ಒಳಗೆ ಹೇಗೆ ಚಳಿಯಿಂದ ತಪ್ಪಿಸಿಕೊಳ್ಳುತ್ತೇವೆ? ಇದರ ಉತ್ತರ ಒಂದು ಪದದಲ್ಲಿದೆ. ಅದೇನೆಂದರೆ, ಕ್ಯಾಬಿನ್ ಪ್ರೆಸ್ಸರೈಸೇಶನ್. ಇಲ್ಲಿ ನಾವು ವಿಮಾನವನ್ನು ವಿಶಿಷ್ಟವಾಗಿ ರೂಪಿಸಿರುವುದನ್ನು ಗಮನಿಸಬೇಕು. ವಿಮಾನದಲ್ಲಿ ಬಾಹ್ಯ ವಾತಾವರಣವನ್ನು ಸಂಪೂರ್ಣ ಬಂದ್ ಮಾಡಿ, ಒಳಗಿನ ತಾಪಮಾನವನ್ನು ಮಾನವನಿಗೆ ಅನುಕೂಲವಾಗುವಂತೆ ಇಡಲಾಗುತ್ತದೆ.

ವಿಮಾನದ ಒಳಗಿನ ಭಾಗ, ಅಂದರೆ ಕ್ಯಾಬಿನ್‌ನಲ್ಲಿ ಸಾಮಾನ್ಯವಾಗಿ 22 ಡಿಗ್ರಿ ಸೆಂಟಿಗ್ರೇಡ್‌ನಿಂದ 24 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ಇರುತ್ತದೆ. ಅಂದರೆ ನಮ್ಮ ಮನೆಯಂತೆ ಹಿತವಾಗಿರುತ್ತದೆ. ಈ ಸಹಜತೆಯನ್ನು ಸಾಧ್ಯವಾಗಿಸೋದು ವಿಮಾನ ಎಂಜಿನಿಯರಿಂಗ್ ತಂತ್ರಜ್ಞಾನ. ಕ್ಯಾಬಿನ್ ಪ್ರೆಸ್ಸರೈಸೇಶನ್ ಹೇಗೆ ಕೆಲಸ ಮಾಡುತ್ತದೆ? ವಿಮಾನದ ಎಂಜಿನ್‌ಗಳು ಹಗುರವಾದ ಗಾಳಿಯನ್ನು ಸೆಳೆದು ಅದನ್ನು ಉಷ್ಣಗೊಳಿಸಿ, ಗಾತ್ರವನ್ನೂ, ಒತ್ತಡವನ್ನೂ ಹೆಚ್ಚಿಸುತ್ತವೆ.
ಎಂಜಿನ್ ಗಳಿಂದ ಹಾರುವ ಉಷ್ಣಗೊಳ್ಳದ ಗಾಳಿಯನ್ನು Bleed Air ಎನ್ನುತ್ತಾರೆ. ಈ ಗಾಳಿಯನ್ನು ವಿಶೇಷ ಹವಾಮಾನ ನಿಯಂತ್ರಣ ವ್ಯವಸ್ಥೆ ( Air Conditioning System) ಮೂಲಕ ಫಿಲ್ಟರ್ ಮಾಡಲಾಗುತ್ತದೆ. ಆಮೇಲೆ, ಈ ಗಾಳಿಯನ್ನು ವಿಮಾನದ ಒಳಗೆ ಹರಡಲಾಗುತ್ತದೆ. ವಿಮಾನದ ಒಳಗಿನ ಒತ್ತಡವನ್ನು 8000 ಅಡಿಗಳ ಸಮುದ್ರ ಮಟ್ಟಕ್ಕೆ ಸಮಾನವಾಗುವಂತೆ ಇಡಲಾಗುತ್ತದೆ.
ಅದು ಮನುಷ್ಯನಿಗೆ ಸುರಕ್ಷಿತ. ಈ ವಿಧಾನದಿಂದ, ವಿಮಾನವು ಹೊರಗಿನ ಮೈನಸ್ 70 ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿದ್ದರೂ ಒಳಗೆ ಮನುಷ್ಯನಿಗೆ ಬೇಕಾದ ತಾಪಮಾನ, ಆಮ್ಲಜನಕ ಹಾಗೂ ಒತ್ತಡವನ್ನು ನೀಡುತ್ತದೆ. ವಿಮಾನದ ರಚನೆ ಇದೆಯಲ್ಲ, ಅದು ಬಾಹ್ಯ ಜಗತ್ತಿನಿಂದ ನಮ್ಮನ್ನು ರಕ್ಷಿಸುವ ವಜ್ರಕವಚ! ವಿಮಾನ ತಯಾರಿಕೆಗೆ ಅಲ್ಯೂಮಿನಿಯಂ ಮಿಶ್ರಲೋಹ (Aluminium Alloy ) ಅಥವಾ ಕಾರ್ಬನ್ ಫೈಬರ್ ಕಾಂಪೋಸಿಟ್ ಅನ್ನು ಬಳಸಲಾಗುತ್ತದೆ.

ಇವು ಸ್ವಲ್ಪ ತೂಕದ್ದಿದ್ದರೂ, ಭಾರಿ ಒತ್ತಡ ಸಹಿಸುವ ಸಾಮರ್ಥ್ಯವನ್ನು ಹೊಂದಿವೆ. ವಿಮಾನದ ಕ್ಯಾಬಿನ್ ಅನ್ನು ಸೀಲ್ಡ್ ಮಾಡಲಾಗುತ್ತದೆ. ಅಂದರೆ ಯಾವುದೇ ಗಾಳಿಯೂ ಹೋಗುವುದಿಲ್ಲ. ಪ್ರತಿಯೊಂದು ಕಿಟಕಿ, ಬಾಗಿಲುಗಳು ಬಹುಪದರ ಶಕ್ತಿಶಾಲಿ ಗಾಜಿನಿಂದ ಮಾಡಲ್ಪಟ್ಟಿರುತ್ತವೆ. ವಿಮಾನದಲ್ಲಿ ಎಲ್ಲ ವ್ಯವಸ್ಥೆಗಳೂ ಅತ್ಯಾಧುನಿಕ ಗಣಕಯಂತ್ರಗಳ ( Computers) ಮೂಲಕ ನಿಯಂತ್ರಿತವಾಗಿವೆ.
ಉದಾಹರಣೆಗೆ, ತಾಪಮಾನ ಹೆಚ್ಚಿದರೆ ಅಥವಾ ಕಡಿಮೆಯಾದರೆ ತಕ್ಷಣ ಸರಿಪಡಿಸಲಾಗುತ್ತದೆ. ಒತ್ತಡ ಬದಲಾದರೆ, ಆಮ್ಲಜನಕದ ಪ್ರಮಾಣವನ್ನು ಸರಿಹೊಂದಿಸಲಾಗುತ್ತದೆ. ತುರ್ತು ಸಂದರ್ಭಗಳಿಗೆ ಆಮ್ಲಜನಕ ಮಾಸ್ಕ್‌ಗಳು ಏರ್ ಡ್ರಾಪ್ ಆಗುತ್ತವೆ. ಈ ಎಲ್ಲವುಗಳು ನಮ್ಮ ಜೀವದ ರಕ್ಷಣೆಗೆ ಬದ್ಧವಾಗಿರುವ ತಂತ್ರಜ್ಞಾನದ ಫಲಗಳಾಗಿವೆ.