ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಯಾವಾಗ? ತಲುಪುವುದು ಹೇಗೆ?
ಪದ್ಮ ಪುರಾಣದ ಪ್ರಕಾರ ಈ ಸ್ನಾನದಿಂದ ಮೋಕ್ಷ ಲಭಿಸುತ್ತದೆ ಎನ್ನಲಾಗಿದೆ. ಹಾಗಾಗಿ ಅನೇಕ ಸಂತರು, ಭಕ್ತರು ಈ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಈ ಮೇಳ ಪ್ರತಿ ವರ್ಷ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗುತ್ತದೆ, ಮಹಾಶಿವರಾತ್ರಿಯ ದಿನದಂದು ಸ್ನಾನದೊಂದಿಗೆ ಕೊನೆಗೊಳ್ಳುತ್ತದೆ. ಇಷ್ಟು ಮಹತ್ವದ ಈ ಸಂಗಮದ ಸ್ನಾನಕ್ಕೆ ನೀವೂ ಹೋಗಲು ಬಯಸಿದರೆ ಪ್ರಯಾಣಕ್ಕೆ ಉತ್ತಮ ಮಾರ್ಗ ತಿಳಿದಿರುವುದು ಬಹಳ ಮುಖ್ಯ.
ಪ್ರಯಾಗ್‌ರಾಜ್, ಹಿಂದೂ ಧಾರ್ಮಿಕ ಮಹತ್ವದ ಕೇಂದ್ರ. ಈ ಹಿಂದೆ ನಡೆದ ಮಹಾ ಕುಂಭಮೇಳದಲ್ಲಿ ನೆರೆದ ಭಕ್ತರ ಸಂಖ್ಯೆಯಿಂದ ದಾಖಲೆ ಬರೆದಿತ್ತು. ಈಗ ಇದೇ 2026ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ಮಾಘ ಮೇಳ ಮತ್ತೆ ಜನರ ಗಮನ ಸೆಳೆಯುತ್ತಿದೆ.
ಪ್ರಯಾಗ್‌ರಾಜ್, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದ ತಾಣ. ಈ ನದಿಗಳ ಸಂಗಮ ತಾಣಕ್ಕೆ ತ್ರಿವೇಣಿ ಸಂಗಮ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ, 12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ಮತ್ತು ಪ್ರತಿ 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳಗಳು ನಡೆಯುತ್ತವೆ. ಈ ಹಿಂದೆ ಅಂದರೆ 2025ರ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆದ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ದೇಶ-ವಿದೇಶದ ಜನರ ಪಾವನ ಸ್ನಾನಕ್ಕೆ ಸಾಕ್ಷಿಯಾಗಿತ್ತು. ಆದರೆ,ಈ ಮಾಘ ಮೇಳವು ಪ್ರತಿ ವರ್ಷ ನಡೆಯುವ ಮೇಳವಾಗಿದ್ದು, 2026ರ ಜನವರಿ 3ರಂದು ಆರಂಭವಾಗಲಿದೆ.

ಈ ಮೇಳಕ್ಕೂ ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ. ಈ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಪದ್ಮ ಪುರಾಣದ ಪ್ರಕಾರ ಈ ಸ್ನಾನದಿಂದ ಮೋಕ್ಷ ಲಭಿಸುತ್ತದೆ ಎನ್ನಲಾಗಿದೆ. ಹಾಗಾಗಿ ಅನೇಕ ಸಂತರು, ಭಕ್ತರು ಈ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಈ ಮೇಳ ಪ್ರತಿ ವರ್ಷ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗುತ್ತದೆ. ಮಹಾಶಿವರಾತ್ರಿಯ ದಿನದಂದು ಸ್ನಾನದೊಂದಿಗೆ ಕೊನೆಗೊಳ್ಳುತ್ತದೆ. ಇಷ್ಟು ಮಹತ್ವದ ಈ ಸಂಗಮದ ಸ್ನಾನಕ್ಕೆ ನೀವೂ ಹೊಗಲು ಬಯಸಿದರೆ ಪ್ರಯಾಣಕ್ಕೆ ಉತ್ತಮ ಮಾರ್ಗ ತಿಳಿದಿರುವುದು ಬಹಳ ಮುಖ್ಯ.
ರೈಲು ಪ್ರಯಾಣ

ಪ್ರಯಾಗ್‌ರಾಜ್‌ಗೆ ಉತ್ತಮ ರೈಲು ಸಂಪರ್ಕವಿದೆ. ಬಹುತೇಕ ದೇಶದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲಿನ ಮೂಲಕ ಬರಬಹುದು. ಈ ಪ್ರಯಾಣ ನಿಮಗೆ ಬಜೆಟ್‌ಸ್ನೇಹಿಯಾಗಿಯೂ ಇರಲಿದೆ. ನೇರವಾದ ರೈಲು ಸಂಪರ್ಕ ಹೊಂದಿದ್ದು ಮಾಘ ಮೇಳಕ್ಕೆ ಸುಲಭವಾಗಿ ಪ್ರವೇಶಿಸಬಹುದು. ಮಾಘ ಮೇಳಕ್ಕೆಂದೇ ವಿಶೇಷವಾಗಿ ಹೆಚ್ಚುವರಿ ರೈಲು ಸಂಪರ್ಕವನ್ನೂ ರೈಲ್ವೆ ಒದಗಿಸಿದ್ದು, ಓಡಾಟ ಇನ್ನೂ ಸುಲಭವಾಗಿರಲಿದೆ. ಆದರೆ, ಮುಂಚಿತವಾಗಿ ಟಿಕೆಟ್‌ಗಳನ್ನು ಬುಕ್ ಮಾಡುವುದು ಉತ್ತಮ.
ಬೆಂಗಳೂರಿನಿಂದ ನೀವೇನಾದರು ಪ್ರಯಾಗ್‌ರಾಜ್‌ಗೆ ತೆರಳಲು ನೀವು ಬಯಸಿದರೆ ರೈಲು ಟಿಕೆಟ್ ದರ ಸ್ಲೀಪರ್ ಕೋಚ್‌ಗೆ ಪ್ರತಿ ವ್ಯಕ್ತಿಗೆ 700-850 ರುಪಾಯಿ, 3ಎಸಿ ಕೋಚ್‌ಗೆ 2,200-3000 ರುಪಾಯಿ, 2ಎಸಿ ಕೋಚ್‌ಗೆ 3000-4000 ರುಪಾಯಿ, 1ಎಸಿ ಕೋಚ್‌ಗೆ 5560 ರುಪಾಯಿಗಳು ಇರುತ್ತದೆ. ನೀವು ನೇರವಾಗಿ ಪ್ರಯಾಗ್‌ರಾಜ್ ತಲುಪಬಹುದು.
ವಿಮಾನ ಪ್ರಯಾಣ

ವಿಮಾನ ಪ್ರಯಾಣ ನಿಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ. ಕೇವಲ 3-4 ಗಂಟೆಗಳಲ್ಲಿ ಸಂಗಮ ತಾಣವನ್ನು ತಲುಪಬಹುದು ಅಲ್ಲಿಂದ ಮರಳಲೂ ಅಷ್ಟೇ ಸಮಯ ಹಿಡಿಯುತ್ತದೆ. ಬಜೆಟ್ ಸ್ನೇಹಿ ಅಲ್ಲದಿದ್ದರೂ ಐಷಾರಾಮಿ ಮತ್ತು ಅಲ್ಟ ಸಮಯ ಹಿಡಿಯುವ ಪ್ರಯಾಣವಾಗಿರುತ್ತದೆ. ಪ್ರಯಾಗ್‌ರಾಜ್‌ನ ಪಕ್ಷಿನೋಟವನ್ನೂ ನೋಡಬಹುದು.
9,000-12,000 ರುಪಾಯಿಗಳು ಇದಕ್ಕೆ ಖರ್ಚಾಗಬಹುದು. ಹತ್ತಿರದ ವಿಮಾನ ನಿಲ್ದಾಣ ಬಮ್ರೌಲಿಯ ಪ್ರಯಾಗ್‌ರಾಜ್ ವಿಮಾನ ನಿಲ್ದಾಣ.