Saturday, April 11, 2026
Saturday, April 11, 2026

ಮಧ್ಯಪ್ರಾಚ್ಯ ಉದ್ವಿಗ್ನತೆ: ಸೇವಾ ವಲಯ, MSME ಹಾಗೂ ಪ್ರವಾಸೋದ್ಯಮ ರಕ್ಷಣೆಗೆ ತುರ್ತು ಕ್ರಮ ಅಗತ್ಯ

ಭಾರತದ ತಟಸ್ಥ ವಿದೇಶಾಂಗ ನೀತಿ, ಹಿಂದು ಮಹಾಸಾಗರ ಹಾಗೂ ಅರಬ್ಬೀ ಸಮುದ್ರ ಪ್ರದೇಶಗಳಲ್ಲಿ ಶಾಂತಿ ಕಾಪಾಡುವ ಪ್ರಯತ್ನ ಹಾಗೂ ರಾಜತಾಂತ್ರಿಕ ಮಾತುಕತೆಗಳ ಮೂಲಕ ಯುದ್ಧ ವಿಸ್ತಾರವಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದೇಶದ ಆರ್ಥಿಕ ಸ್ಥಿರತೆ ಹಾಗೂ ಉದ್ಯೋಗಗಳ ರಕ್ಷಣೆಗಾಗಿ ಸರಕಾರ, ವಾಣಿಜ್ಯ ಮಂಡಳಿಗಳು ಹಾಗೂ ಉದ್ಯಮ ವಲಯ ಒಟ್ಟಾಗಿ ಕೈಜೋಡಿಸುವುದು ಕಾಲದ ಅಗತ್ಯವಾಗಿದೆ.

ಕೆ ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು , ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಯುದ್ಧದ ಆತಂಕ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಸರಬರಾಜಿಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾದರೆ ಇಂಧನ ಬೆಲೆ ಏರಿಕೆ, ಸಾಗಣೆ ವೆಚ್ಚ ಹೆಚ್ಚಳ ಮತ್ತು ಇತರ ವಾಣಿಜ್ಯ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀಳಬಹುದು. ಭಾರತವು ಹೆಚ್ಚಿನ ಪ್ರಮಾಣದಲ್ಲಿ ತೈಲ ಆಮದು ಮಾಡುವ ದೇಶವಾಗಿರುವುದರಿಂದ ಇಂಥ ಪರಿಸ್ಥಿತಿ ದೇಶದ ಆರ್ಥಿಕತೆಗೆ ಹೊಡೆತ ನೀಡುವ ಸಾಧ್ಯತೆ ಇದೆ.

ಭಾರತ ಮೂರನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗುವ ದಾರಿಯಲ್ಲಿ ಸಾಗುತ್ತಿರುವಾಗ Self Employment, MSME ಹಾಗೂ Service Industry ಕ್ಷೇತ್ರಗಳು ದೇಶದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ. ಕೋವಿಡ್ ನಂತರ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಅನೇಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಜಾಗತಿಕ ಸಂಘರ್ಷ ಮತ್ತೊಂದು ಸವಾಲಾಗಬಹುದು.

ಇದನ್ನೂ ಓದಿ: ಅಳುವ ಮಗುವಿಗೆ ಹೊಟ್ಟೆತುಂಬ ಹಾಲು : ಕರ್ನಾಟಕ ರಾಜ್ಯ ಬಜೆಟ್ 2026–27

ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀಳುವ ಸಾಧ್ಯತೆ ಇದೆ. ಪ್ರವಾಸಿ ವಾಹನ ಮಾಲೀಕರು, ಟೂರಿಸ್ಟ್ ವಾಹನಗಳು ಹಾಗೂ ಟ್ರಾವೆಲ್ಸ್ ಉದ್ಯಮಿಗಳಿಗೆ ಇದು ದೊಡ್ಡ ಹೊಡೆತವಾಗಬಹುದು. ಪ್ರವಾಸೋದ್ಯಮ ಕುಗ್ಗಿದರೆ ದೇಶದ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ಸುಮಾರು 10% ಕಾರ್ಮಿಕರ ಆದಾಯದ ಮೇಲೆ ನೇರ ಪರಿಣಾಮ ಬೀಳುತ್ತದೆ. ಬುಕಿಂಗ್ ಕಡಿಮೆಯಾಗುವುದು, ಇಂಧನ ವೆಚ್ಚ ಹೆಚ್ಚಾಗುವುದು ಮತ್ತು ಪ್ರಯಾಣಿಕರ ಸಂಖ್ಯೆ ಇಳಿಯುವುದು ಸಾವಿರಾರು ಕುಟುಂಬಗಳ ಜೀವನೋಪಾಯದ ಮೇಲೆ ಪರಿಣಾಮ ಉಂಟುಮಾಡಬಹುದು.

Untitled design - 2026-04-11T115847.125

Self Employment, MSME ಹಾಗೂ Service Industry ಕ್ಷೇತ್ರಗಳ ಉಳಿವಿಗಾಗಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವಾಣಿಜ್ಯ ಮಂಡಳಿಗಳು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಉದ್ಯಮಿಗಳ ಸಮಸ್ಯೆಗಳು, ಸಾಲ ಸೌಲಭ್ಯ, ತೆರಿಗೆ ರಿಯಾಯಿತಿ, ಇಂಧನ ವೆಚ್ಚ ನಿಯಂತ್ರಣ, ಪ್ರವಾಸೋದ್ಯಮ ಉತ್ತೇಜನ ಕ್ರಮಗಳು ಮುಂತಾದ ವಿಷಯಗಳಲ್ಲಿ ಸರಕಾರದೊಂದಿಗೆ ಸಮನ್ವಯ ಸಾಧಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಭಾರತದ ತಟಸ್ಥ ವಿದೇಶಾಂಗ ನೀತಿ, ಹಿಂದು ಮಹಾಸಾಗರ ಹಾಗೂ ಅರಬ್ಬೀ ಸಮುದ್ರ ಪ್ರದೇಶಗಳಲ್ಲಿ ಶಾಂತಿ ಕಾಪಾಡುವ ಪ್ರಯತ್ನ ಹಾಗೂ ರಾಜತಾಂತ್ರಿಕ ಮಾತುಕತೆಗಳ ಮೂಲಕ ಯುದ್ಧ ವಿಸ್ತಾರವಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದೇಶದ ಆರ್ಥಿಕ ಸ್ಥಿರತೆ ಹಾಗೂ ಉದ್ಯೋಗಗಳ ರಕ್ಷಣೆಗಾಗಿ ಸರಕಾರ, ವಾಣಿಜ್ಯ ಮಂಡಳಿಗಳು ಹಾಗೂ ಉದ್ಯಮ ವಲಯ ಒಟ್ಟಾಗಿ ಕೈಜೋಡಿಸುವುದು ಕಾಲದ ಅಗತ್ಯವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?