ಗೊಂದಲಗಳ ನಡುವೆ ಮೈಸೂರಿಗೆ ಪ್ರವಾಸಿಗರ ಭೇಟಿ
ಬನ್ನೇರುಘಟ್ಟ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ಅರಣ್ಯಗಳಲ್ಲಿ ಸಫಾರಿಗೆ ನಿರ್ಬಂಧ ಹೇರಲಾಗಿದೆ. ಮೈಸೂರಿನಲ್ಲೂ ಅರಮನೆ ಆವರಣದಲ್ಲೇ ಸಿಲಿಂಡರ್ ಸ್ಪೋಟವಾಗಿ ಹೊಸವರ್ಷಾಚರಣೆಯ ಕುರಿತು ಗೊಂದಲಗಳು ಮೂಡಿದ್ದವು. ಇಂಥ ಹಲವು ವಿಷಯಗಳಿಂದ ಮೈಸೂರಿಗೆ ಹರಿದು ಬರಬೇಕಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡು ಬರಬಹುದು ಎಂದು ಅಂಕಿಅಂಶಗಳೂ ಹೊರಬಿದ್ದಿದ್ದವು. ಆದರೆ, ಈ ಅಂಕಿ ಅಂಶಗಳು ಸದ್ಯ ಉಲ್ಟಾ ಹೊಡೆದಿವೆ.
ಮೈಸೂರು ಅರಮನೆ ಆವರಣದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಪೋಟದಿಂದಾಗಿ ಅರಮನೆ ಆವರಣದಲ್ಲಿ 2026ರ ಹೊಸವರ್ಷಾಚರಣೆ ನಡೆಯುವ ಬಗ್ಗೆ ಗೊಂದಲಗಳಿದ್ದವು. ಕಡೆಗೆ ಅರಮನೆ ಮಂಡಳಿ ಈ ಗೊಂದಲಗಳಿಗೆ ತೆರವು ನೀಡಿ, ಹೊಸವರ್ಷದ ಆಚರಣೆಗೆ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಂತೆ ಆಯಾ ಕಾರ್ಯಕ್ರಮಗಳ ಜರುಗಿವೆ.
ವರ್ಷಾಂತ್ಯ ಆರಂಭದಲ್ಲೇ ಜನಸಂಖ್ಯೆ ಅಧಿಕ
ಸರಕಾರಿ ಅಂಕಿ ಅಂಶಗಳ ಪ್ರಕಾರ 2025ರ ಅಂತಿಮ ಹತ್ತು ದಿನಗಳು ಮತ್ತು 2026ರ ಆರಂಭಿಕ ದಿನಗಳಲ್ಲೇ ಮೈಸೂರಿಗೆ ಪ್ರವಾಸಿಗಳ ಸಂಖ್ಯೆ ಅಧಿಕವಾಗಿತ್ತು. ಜನರು ಹೊಸವರ್ಷವನ್ನು ಆಚರಿಸಲು ಮೈಸೂರಿಗೆ ಬಂದಿದ್ದು, ಇತ್ತೀಚೆಗೆ ಸಂಭವಿಸಿದ್ದ ಸಿಲಿಂಡರ್ ಸ್ಪೋಟ ಮತ್ತು ಅರಣ್ಯ ಸಫಾರಿಗಳ ಮೇಲೆ ಏರಿರುವ ನಿರ್ಬಂಧಗಳು ಯಾವ ಪರಿಣಾಮ ಬೀರಿಲ್ಲದಿರುವುದು ಕಂಡುಬಂದಿದೆ.
ಅರಮನೆ ಮತ್ತು ಮೃಗಾಲಯದ ಮಧ್ಯೆ ಜಟಾಪಟಿ
ಅಂಕಿಅಂಶಗಳ ಪ್ರಕಾರ ಡಿಸೆಂಬರ್ 21ರಿಂದ 31ರವರೆಗೆ ಮೈಸೂರಿನ ಅಂಬಾ ವಿಲಾಸ ಅರಮನೆಗೆ 2.11ಲಕ್ಷ ಜನರು ಭೇಟಿ ನೀಡಿದ್ದಾರೆ. ಮತ್ತು ಜಯ ಚಾಮರಾಜೇಂದ್ರ ಮೃಗಾಲಯಕ್ಕೆ 2.27ಲಕ್ಷ ಜನರು ಭೇಟಿ ನೀಡಿದ್ದಾರೆ