• ಜಯಂತ್‌ ದೇಸಾಯಿ

ಸೇಡಂನ ಮಾಣಿಕೇಶ್ವರ ದೇವಸ್ಥಾನದ ಆವರಣದಲ್ಲಿರುವ ‘ಬಾಣಂತಿ ಕಂಬ’ ಸಾವಿರ ವರ್ಷಗಳ ಇತಿಹಾಸ, ವಾಸ್ತುಶಿಲ್ಪದ ವೈಶಿಷ್ಟ್ಯ ಹಾಗೂ ಜನಪದ ಕಥೆಗಳ ಸಂಗಮವಾಗಿದೆ. ಒಂದೇ ಶಿಲೆಯಲ್ಲಿ ನಿರ್ಮಾಣಗೊಂಡ 52 ಅಡಿ ಎತ್ತರದ ಈ ಕಂಬವು ತನ್ನ ವಿಶಿಷ್ಟ ರಚನೆಯಿಂದ ಇಂದಿಗೂ ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ.

ಅದೆಷ್ಟು ಚಂದ ಹೆಸರು ʼಬಾಣಂತಿ ಕಂಬʼ. ಈ ಕಂಬ ಬರೋಬ್ಬರಿ 52 ಅಡಿ ಉದ್ದದ ಒಂದೇ ಶಿಲೆಯ ಕಲ್ಲಿನಲ್ಲಿ ನಿರ್ಮಾಣವಾದ ʼಏಕಶಿಲಾ ಕಂಬವಿದುʼ. 12ನೆಯ ಶತಮಾನದಷ್ಟು ಪುರಾತನವಾದ, ಸರಿಸುಮಾರು 600 ರಿಂದ 1008 ವರ್ಷಗಳ ಹಳೆಯ, ಕಲ್ಯಾಣ ಚಾಲುಕ್ಯ ಕಾಲದ ಐತಿಹಾಸಿಕ ಕಂಬವಿದು.

ಇದನ್ನೂ ಓದಿ: ಮೆಮರೀಸ್ ಆಫ್ ಬಾರ್ಸಾ

ಕಲ್ಯಾಣ ಚಾಲುಕ್ಯ ವಂಶದ ರಾಜನೊಬ್ಬ ತನ್ನ ದಂಡಯಾತ್ರೆ ದಿಗ್ವಿಜಯದ ಸಂಕೇತವಾಗಿ ಇದನ್ನು ನಡೆಸಿದ ಅನ್ನುವ ಮಾತು ಕೂಡ ಇದರ ಇತಿಹಾಸ. ಹಾಗಾಗಿ ಈ ಕಂಬವನ್ನು ವಿಜಯಸ್ತಂಭವೆಂದು ಹಿಂದೆ ಕರೆಯುತ್ತಿದ್ದರು.

ಇದರ ವಿಶೇಷ ಅಂದ್ರೆ ಈ ಶೀಲಾ ಕಂಬ ನಿಂತಿರುವುದು ಗಾಳಿಯಲ್ಲಿ ಅನ್ನೋದು ಇದರ ರಚನೆಯ ಹಿಂದಿನ ದೈವಿಕತೆ ಹಾಗೂ ನಿರ್ಮಾಣ ಕೌಶಲ, ಒಂದಿಡೀ ಬಟ್ಟೆಯನ್ನು ಇದರ ಬುಡದಲ್ಲಿ ಹಾಕಿ ಎಳೆಯಬಹುದು, ಆಕಡೆ ಇಂದ ಈ ಕಡೆಗೆ ಸಲೀಸಾಗಿ ಸೀರೆ/ಬಟ್ಟೆ ಬಂದು ಬಿಡುತ್ತದೆ.

ಸ್ವಾರಸ್ಯ ಅಂದ್ರೆ ಹೆಸರಿನದು ಹಾಗೂ ಇದು ನಿಂತ ರೀತಿಯಲ್ಲಿ ಇರೋದು, ಸ್ವಾರಸ್ಯ ಕಥೆಯೆಂದರೆ ಸಾವಿರ ವರ್ಷಗಳ ಹಿಂದೆ ಬಾಣಂತಿ ಒಬ್ಬಳು ತನ್ನ ಕಿರುಬೆರಳಿನಲ್ಲಿ ಈ ಕಂಬವನ್ನು ಎತ್ತಿಕೊಂಡು ಬರುವಾಗ ಅರ್ಧ ಕಂಬ ಮುರಿದು ಒಂದೂರಲ್ಲಿ ಬಿದ್ದು ಅದು ಕಲ್ಲು ಕಂಬವಾಗಿ ಕ್ರಮೇಣ ಕಲ್ಕಂಬ ಊರಾಗಿ ಇಂದಿಗೂ ಅದೇ ಊರು ಇಲ್ಲಿಯೇ ಹತ್ತಿರದಲ್ಲಿ ಇದೆ, ಇನ್ನರ್ಧ ಕಂಬ ಈ ಸ್ಥಳದಲ್ಲಿ ಬಿದ್ದು ಬಾಣಂತಿ ಕಂಬವಾಗಿದೆ ಅನ್ನು ಮಾತು ಇಲ್ಲಿನ ಜನರದ್ದು.

Untitled design (92)

ಪೌರಾಣಿಕವಾಗಿ ಇನ್ನೊಂದು ಕಥೆಯೂ ಮಹಾಭಾರತಕ್ಕೆ ಬೆಸೆದುಕೊಂಡಿದೆ, ಹಿಡಿಂಬೆ ತಾನು ಗರ್ಭಾವತಿಯಾದಾಗ ಅವಳ ಕಿರು ಬೆರಳು ಅರ್ಧ ಮುರಿದು ಬಿದ್ದದ್ದು ಈ ಸ್ಥಳದಲ್ಲಿ ಅದು ಬಿದ್ದು ಬೆರಳೇ ಬಾಣಂತಿ ಕಂಬವಾಗಿದೆ ಅನ್ನೋದು ಕೂಡ ಇಲ್ಲಿನ ಇತಿಹಾಸ. ಕಥೆಗಳು ಏನಾದ್ರೂ ಇದ್ದರೂ ಇದು ಮಾತ್ರ ರಾಷ್ಟ್ರಕೂಟರ, ಹೊಯ್ಸಳ, ಹಾಗೂ ಕಲ್ಯಾಣ ಚಾಲುಕ್ಯ ರಾಜ್ಯಗಳಾಡಳಿತವನ್ನು ಸಾಕ್ಷಿಯಾಗಿ ನಿಂತು ಭವ್ಯ ಇತಿಹಾಸದ ಭಾಗವಾಗಿ ಇಂದಿಗೂ ಅದೇ ಗತ್ತಿನಲ್ಲಿ ನಿಂತಿದೆ.

ಈ ದೇವಸ್ಥಾನವು ಅದೆಷ್ಟು ಸೊಗಸಾಗಿ ಇದೆ ಅಂದರೆ ಎಲ್ಲ ದೇವಸ್ಥಾನಗಳು ಅಗಲವಾಗಿ ಇದ್ದು ಮಧ್ಯ ಗರ್ಭಗುಡಿಯಾದರೆ, ಈ ದೇವಸ್ಥಾನ ಇರೋದು ಉದ್ದವಾಗಿ ಉದ್ದಕೂ ಇರುವ ಸುಂದರ ಸಾಲುಗಂಬಗಳು, ಉದ್ದದ ಸುಂದರ ಸಾಲುಗಂಬಳ ಮಧ್ಯೆ ಗರ್ಭ ಗುಡಿ, ಗರ್ಭಗುಡಿಯಲ್ಲಿ ನೆಲೆಸಿರುವವನೇ ʼಶಿವ ಪರಮಾತ್ಮʼ ಅರ್ಥಾತ್ 'ಪ್ರಭು ಮಾಣಿಕೇಶ್ವರ'.

ಕಲ್ಯಾಣ ಚಾಲುಕ್ಯ ಶೈಲಿಯ ಈ ದೇವಸ್ಥಾನ ಆವರಣದ ಎಡಭಾಗದಲ್ಲಿ ಇರೋದೇ ʼಬಾಣಂತಿ ಕಂಬʼ, ಸೇಡಂ ನಗರಾಡಳಿತ ಈ ಕಂಬದ ಇತಿಹಾಸಕ್ಕೆ ಇಲ್ಲಿನ ಪ್ರಾಚೀನ್ಯಕ್ಕೆ ನಗರ ಕೇಂದ್ರ ವೃತ್ತದಲ್ಲಿ ಬಾಣಂತಿ ಕಂಬದ ಮಾದರಿ ರೂಪವನ್ನು ನಿಲ್ಲಿಸಿ ವೃತ್ತವನ್ನಾಗಿ ಮಾಡಿದೆ. ನಗರದ ಅಲ್ಲಲ್ಲಿ ಗೋಡೆಗಳಲ್ಲಿ ಬಾಣಂತಿ ಕಂಬದ ಚಿತ್ರ, ಜತೆಗೆ ಪಂಚ ಲಿಂಗೇಶ್ವರ ದೇವಸ್ಥಾನ ಚಿತ್ರ, ಜೈನ ಬಸದಿ ಚಿತ್ರ ಬಿಡಿಸಿ ನಗರದ ಸೌಂದರ್ಯ ಹೆಚ್ಚಿಸಿದೆ.