ಮುನ್ನಾರ್ನಲ್ಲಿ ಪ್ರಕೃತಿ ಧ್ಯಾನ
ವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಮಯೂರದಲ್ಲಿ ಮನಮೋಹಿಸುವ ವಾತಾವರಣವಿರುತ್ತದೆ. ಕೆಎಸ್‌ಟಿಡಿಸಿ ನಿಮಗೆ ಅಲ್ಲಿ ಉಳಿದುಕೊಳ್ಳಲು ವಾಸ್ತವ್ಯ ಅವಕಾಶ ಕಲ್ಪಿಸಿಕೊಡುತ್ತದೆ. ಕರ್ನಾಟಕ ಪ್ರವಾಸೋದ್ಯಮ ನಿಗಮದ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದು ಮಹಾನ್ ಅನುಭವಿಯ ಜತೆಗೆ ಪ್ರವಾಸ.
ಪ್ರವಾಸ ಪ್ರಯಾಸವನ್ನು ಕಳೆಯುತ್ತದೆ. ಬದುಕಿಗೆ ನೆಮ್ಮದಿ ತರುತ್ತದೆ. ನೂರಾರು ಒತ್ತಡಗಳ ಮಧ್ಯೆಯೂ ಪ್ರವಾಸವು ತಂಗಾಳಿಯಂತೆ ಬೀಸಿ ಹೋಗುತ್ತದೆ. ನಮ್ಮ ಬದುಕಿನ ಎಲ್ಲ ಜಂಜಡಗಳಿಂದ ಮುಕ್ತಿ ಪಡೆಯುವುದು ಕಷ್ಟ. ಆದರೆ ವಾರಪೂರ್ತಿ ಒತ್ತಡ ಮತ್ತು ಆಫೀಸಿನ ಕಿರಿಕಿರಿಗಳಿಗೆ ತಾತ್ಕಾಲಿಕವಾಗಿಯಾದರೂ ಗುಡ್ ಬಾಯ್ ಹೇಳಬಹುದು. ನಗರದ ಗಲಭೆ, ಗದ್ದಲಗಳು ನಗುವನ್ನು ಮರೆಸುತ್ತವೆ. ಹಾಗಾಗಿ ಶಾಂತಿ ಸಿಗುವ ತಾಣಗಳಲ್ಲಿ ನಾವು ಓಡಾಡಬೇಕು. ದೇವಾಲಯ, ಕಾಡು-ಮೇಡುಗಳ ಪ್ರವಾಸ ಮನಸಿನ ಭಾರವನ್ನು ಇಳಿಸಿ, ಪ್ರತಿದಿನದ ಸಂಕಟಗಳನ್ನು ಮರೆಸಿ ಜೀವನಪ್ರೀತಿಯನ್ನು ಹುಟ್ಟಿಸುತ್ತದೆ. ಮನಶ್ಶಾಂತಿಗಾಗಿ ದೇಶ-ವಿದೇಶಗಳತ್ತ ಪ್ರವಾಸ ಮಾಡುತ್ತಿರುವವರು ಸಾಕಷ್ಟು ಜನರಿದ್ದಾರೆ. ಅವರನ್ನೊಮ್ಮೆ ಕೇಳಿ, ವರ್ಷಪೂರ್ತಿ ಪ್ರವಾಸ ಹೋಗುವ ನಿಮಗೆ ಬೇಸರವಾಗುವುದಿಲ್ಲವೇ ಎಂದು; ಉಹೂಂ, ಅಂಥವರಿಗೆ ಪ್ರವಾಸ ಹೋಗದೆ ಇದ್ದಾಗ ಬೇಸರವಾಗುತ್ತದೆ. ಹೊಸತನವನ್ನು ನೋಡುವಾಗ ಮತ್ತು ಕೇಳಿ, ಸವಿಯುವಾಗಲೇ ಮನಸಿನಲ್ಲಿನ ಹಳೆಯ ನೋವುಗಳು ಮರೆಯಾಗುತ್ತವೆ. ಅಂಥ ಹೊಸತನಗಳನ್ನು ಪ್ರವಾಸ ಪೂರೈಸಬಲ್ಲದು. ಏನಿಲ್ಲದಿದ್ದರೂ ಮನೆಯನ್ನು, ಆಫೀಸ್ ಅನ್ನು ಬಿಟ್ಟು ಒಂದಷ್ಟು ಕಡೆ ವಿಹಾರ ಹೋಗಿ ಬಂದರೆ ಸಾಕು.
ಇದನ್ನೂ ಓದಿ: ಏಳು ಸುತ್ತಿನ ಕೋಟೆಯಲ್ಲಿ ಒಂದು ಸುತ್ತು……
ಪ್ರತಿಸಲವೂ ಓದಿದ್ದನ್ನೇ ಓದಿ ಕಂಠಪಾಠವಾದಂತೆ, ನೀವು ಎಲ್ಲ ಕಡೆ ಕಲ್ಲು, ಮಣ್ಣು ನೋಡಿದರೂ ಅದರಲ್ಲಿ ಬರಿಯ ಕಲ್ಲು ಮಣ್ಣುಗಳೇ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಅವುಗಳಲ್ಲಿ ನಂಬಿಕೆ, ಇತಿಹಾಸ, ಕಲೆ, ಸಂಸ್ಕೃತಿಗಳು ಅಡಕವಾಗಿರುತ್ತವೆ. ಹಾಗಾಗಿ ಇವುಗಳ ಮಾಹಿತಿ ನಿಮಗಿಲ್ಲದಿದ್ದರೆ ನಿಮ್ಮ ಪ್ರವಾಸ ವ್ಯರ್ಥವಾಗುತ್ತದೆ. ಇದಕ್ಕೆ ಪರಿಹಾರವಿದೆ. ಹೌದು, ಅನುಭವಿ ಪ್ರವಾಸಿಗನ ಜತೆಗೆ ಪ್ರವಾಸ ಹೋಗಬೇಕು. ನಮ್ಮ ನಾಡಿನ ಪ್ರವಾಸೋದ್ಯಮ ನಿಗಮವೇ ಈ ಎಲ್ಲ ಅವಕಾಶಗಳನ್ನು ನೀಡುತ್ತಿದೆ. ಕೈಗೆಟುಕುವ ದರದಲ್ಲಿ ಪ್ರವಾಸ ಮಾಡಿಸಲು ಸಜ್ಜಾಗಿದೆ. ನಮ್ಮ ರಾಜ್ಯದ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ.

ಇದರಿಂದ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನವನ್ನು ನಿಮ್ಮಲ್ಲಿ ತುಂಬಿಕೊಂಡಂತಾಗುತ್ತದೆ. ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಮಯೂರದಲ್ಲಿ ಮನಮೋಹಿಸುವ ವಾತಾವರಣವಿರುತ್ತದೆ. ಕೆಎಸ್‌ಟಿಡಿಸಿ ನಿಮಗೆ ಅಲ್ಲಿ ಉಳಿದುಕೊಳ್ಳಲು ವಾಸ್ತವ್ಯ ಅವಕಾಶ ಕಲ್ಪಿಸಿಕೊಡುತ್ತದೆ. ಕರ್ನಾಟಕ ಪ್ರವಾಸೋದ್ಯಮ ನಿಗಮದ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದು ಮಹಾನ್ ಅನುಭವಿಯ ಜತೆಗೆ ಪ್ರವಾಸ. ಕೆಎಸ್‌ಟಿಡಿಸಿ ಇದೀಗ ಬೇರೆ ರಾಜ್ಯದ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆದು ಮೈಕೊಡವಿ ನಿಂತಿದೆ. ಇಂಥ ಕೆಎಸ್‌ಟಿಡಿಸಿ ಈಗ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಆರು ದಿನಗಳ ಮುನ್ನಾರ್ ಮತ್ತು ಅಲೆಪ್ಪಿ ಪ್ರವಾಸಕ್ಕೆ ಕರೆದೊಯ್ಯುತ್ತಿದೆ. ಹೇಳಿ ಕೇಳಿ ಕೇರಳ ದೇವರ ನಾಡು. ಪ್ರಕೃತಿ ಪ್ರಿಯರ ಸ್ವರ್ಗ. ಮನಸಿನ ಅಲಮಾರನ್ನು ತೆರೆದು ಕೇರಳಕ್ಕೆ ಹೋಗಿ. ಅಲ್ಲಿ ದಕ್ಕುವ ಅನುಭವಗಳನ್ನು ನಿಮ್ಮೊಳಗೆ ತುಂಬಿಕೊಳ್ಳಿ.
ಪ್ಯಾಕೇಜ್
------------
ತೆಕ್ಕಡಿ - ಅಲೆಪ್ಪಿ ಬೋಟ್ ಹೌಸ್ - ಮುನ್ನಾರ್ ಪ್ರವಾಸ
ದಿನ 1
ಸಂಜೆ 7.00 ಗಂಟೆಗೆ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ.
ದಿನ 2
ಬೆಳಗ್ಗೆ 6.00 ರಿಂದ 8.00 ರವರೆಗೆ ತೇಣಿಯಲ್ಲಿ ತಿಂಡಿ ಮತ್ತು ಉಪಾಹಾರ
ಬೆಳಗ್ಗೆ 9.30 ರಿಂದ 12.30 ರವರೆಗೆ ತೇಕ್ಕಡಿ ಅರಣ್ಯಕ್ಕೆ ಭೇಟಿ
ಮಧ್ಯಾಹ್ನ 1.00 ರಿಂದ 2.00 ರವರೆಗೆ ಊಟ
ಮಧ್ಯಾಹ್ನ 2.00 ರಿಂದ 4.00 ರವರೆಗೆ ಸ್ಪೈಸಸ್ ಗಾರ್ಡನ್ಸ್‌ಗೆ ಭೇಟಿ
ಸಂಜೆ 4.30 ರವರೆಗೆ ಕುಮಿಲಿಯಲ್ಲಿ ಹೊಟೇಲ್‌ನಲ್ಲಿ ವಾಸ್ತವ್ಯ

ದಿನ 3
ಬೆಳಗ್ಗೆ 5.30 ಕುಮಿಲಿಯಿಂದ ಹೊರಡಲಾಗುತ್ತದೆ
ಬೆಳಗ್ಗೆ 8.00 - 9.00 ಉಪಾಹಾರ
ಮಧ್ಯಾಹ್ನ 12.00 - 4.00 ಕುಮಾರ್ಕಮ್ ಮತ್ತು ಅಲೆಪ್ಪಿಯಲ್ಲಿ ಬೋಟ್ ವ್ಯೂವ್
ದಿನ 4
ಬೆಳಗ್ಗೆ 6.00 ಗಂಟೆಗೆ ಬೋಟ್ ಹೌಸ್ ನಿಂದ ಹೊರಡುವುದು
ಬೆಳಗ್ಗೆ 8.00 - 8.45 ಉಪಹಾರ
ಮಧ್ಯಾಹ್ನ 1.00 - 1.45 ಮುನ್ನಾರ್ ನಲ್ಲಿರುವ ಬ್ಲಾಸಮ್ ಪಾರ್ಕ್ಗೆ ಭೇಟಿ
ಮಧ್ಯಾಹ್ನ 2.00 - 2.30 ಗಂಟೆಗೆ ಊಟ
ಮಧ್ಯಾಹ್ನ 3.00 - 5.00 ಗಂಟೆಗೆ ರಾಜಮಲೈ ಅರಣ್ಯಕ್ಕೆ ಭೇಟಿ
ಸಂಜೆ 5.30 ಗಂಟೆಗೆ ಮುನ್ನಾರ್ ಕಡೆಗೆ
ದಿನ 5
ಬೆಳಗ್ಗೆ 8.00 ಉಪಾಹಾರ
ಬೆಳಗ್ಗೆ 8.30 - ಮಧ್ಯಾಹ್ನ 3.30 ಮುನ್ನಾರ್ ವ್ಯೂವ್ ಮಡುಪಟ್ಟಿ ಅಣೆಕಟ್ಟು, ಇಕೋ ಪಾಯಿಂಟ್‌ಗಳು, ಟಾಟಾ ಟೀ ಎಸ್ಟೇಟ್, ಕುಂಡಲಿ ಅಣೆಕಟ್ಟು ವೀಕ್ಷಣೆ ಮತ್ತು ಊಟ
3.30 - ಸಂಜೆ 4.00 ಮುನ್ನಾರ್ ಸಿಟಿ ಸುತ್ತಾಟ
ಸಂಜೆ 4.00 ಮುನ್ನಾರ್‌ನಿಂದ ಹೊರಡಲಾಗುತ್ತದೆ
ದಿನ 6
ಬೆಳಗ್ಗೆ 6.00 ಗಂಟೆಗೆ ಬೆಂಗಳೂರಿಗೆ ಹಿಂತಿರುಗುವುದು
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಊಟಿಯಲ್ಲಿ ಹೆರಿಟೇಜ್ ಮಯೂರ ಆತಿಥ್ಯ
ಕೆಎಸ್‌ಟಿಡಿಸಿ ಜತೆಗೆ ಪ್ರವಾಸಕ್ಕೆ ಹೋದಮೇಲೆ ಮಯೂರ ಹೊಟೇಲ್‌ನಲ್ಲಿ ಉಳಿಯದಿದ್ದರೆ ಹೇಗೆ? ಮಯೂರ ಆತಿಥ್ಯಕ್ಕೆ ಹೇಳಿ ಮಾಡಿಸಿದ ಹೊಟೇಲ್. ಅಲ್ಲಿನ ಅತಿಥಿ ಗೃಹ ನಂಬರ್ ಒನ್. ಆರಾಮವಾಗಿ ಅಲ್ಲಿ ವಾಸ್ತವ್ಯ ಹೂಡಿ ಕಾಲ ಕಳೆಯಬಹುದು. ನೀವು ಊಟಿಯ ಕಡೆಗೆ ಹೋದಾಗ ದುಬಾರಿ ಹೊಟೇಲ್, ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಉಳಿಯುವ ಅವಶ್ಯಕತೆಯಿಲ್ಲ. ಅಲ್ಲಿ ಮಯೂರ ಹೆರಿಟೇಜ್ ಇದೆ. ಊಟಿ ಮೈಸೂರಿನಿಂದ 3 ಗಂಟೆಗಳ ಪ್ರಯಾಣ. ಪ್ರವಾಸಿಗರಿಗೆ ಇದು ಒಂದು ಜನಪ್ರಿಯ ತಾಣವಾಗಿದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿಯು ಸುಂದರವಾದ ಸರೋವರಗಳು, ಜಲಪಾತಗಳು, ವಿಶಾಲವಾದ ಸಸ್ಯೋದ್ಯಾನ, ನಿತ್ಯಹರಿದ್ವರ್ಣ ಕಾಡು ಮತ್ತು ಕಣಿವೆಗಳಿಗೆ ಸಾಕಷ್ಟು ಹೆಸರುವಾಸಿಯಾಗಿದೆ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ರಿಲ್ಯಾಕ್ಸ್ ಮೂಡ್‌ನಲ್ಲಿ ತುಂಬಿದ ರಜಾದಿನವನ್ನು ಕಳೆಯಲು ಸೂಕ್ತವಾದ ಸ್ಥಳವೆಂದರೆ ಅದು ಮಯೂರ ರಾಯಲ್ ಹೆರಿಟೇಜ್ ಹೊಟೇಲ್. ಊಟಿಯು ಫರ್ನ್ ಬೆಟ್ಟದ ಹಸಿರು ಪರಿಸರದಲ್ಲಿದೆ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಹೆರಿಟೇಜ್ ಹೊಟೇಲ್ ತಲುಪಬಹುದು.

ಲಭ್ಯವಿರುವ ಸೌಲಭ್ಯಗಳು:
• ವೆರೈಟಿ ಫುಡ್ ರೆಸ್ಟೋರೆಂಟ್
• ಕರ್ನಾಟಕ ತೋಟಗಾರಿಕಾ ಉದ್ಯಾನಕ್ಕೆ ಉಚಿತ ಪ್ರವೇಶ.
• ಸ್ಥಳೀಯ ದೃಶ್ಯವೀಕ್ಷಣೆ ಮತ್ತು ಪ್ರವಾಸ
ಗಮನಿಸಿ - ತಮಿಳುನಾಡು ಸರಕಾರವು ಸ್ವಂತ ವಾಹನಗಳೊಂದಿಗೆ ಊಟಿಗೆ ಪ್ರವೇಶಿಸಲು ಇ-ಪಾಸ್ ಅನ್ನು ಕಡ್ಡಾಯಗೊಳಿಸಿದೆ, ಸಾರ್ವಜನಿಕ ಸಾರಿಗೆಗೆ ಪಾಸ್ ಅಗತ್ಯವಿಲ್ಲ. ಇ-ಪಾಸ್‌ಗಾಗಿ https://epass.tnega.org/home
ಇದನ್ನೂ ಓದಿ: ಮಾದೇವ ಬಾರಯ್ಯಾ ನೀನು ದರುಶನವ ನೀಡಯ್ಯಾ! ಬಿಳಿಗಿರಿ ರಂಗನ ಬೇಡಿರಿ….
ನೀವು ಮಯೂರ ಹೆರಿಟೇಜ್‌ನಲ್ಲಿ ಉಳಿಯುವುದಾದರೆ?
ಅಪ್ಪರ್ ಭವಾನಿ ಸರೋವರ
ಅವಲಾಂಚೆ ಸರೋವರ
ಸರ್ಕಾರಿ ಸಸ್ಯೋದ್ಯಾನ
ಸೇಂಟ್ ಸ್ಟೀಫನ್ಸ್ ಚರ್ಚ್
ದೊಡ್ಡಬೆಟ್ಟ
ಲ್ಯಾಂಬ್ಸ್ ರಾಕ್
ಕೂನೂರು ಸಿಮ್ಸ್ ಪಾರ್ಕ್
ಪಾಯ್ಕಾರ ಜಲಪಾತ
ಕೂನೂರು ರೈಲು ನಿಲ್ದಾಣ
ಈ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ತಪ್ಪದೇ ಭೇಟಿನೀಡಿ. ಹಾಂ, ನಿಮ್ಮ ಮುಂದಿನ ವಾಸ್ತವ್ಯ ಊಟಿ ಮಯೂರ ಹೆರಿಟೇಜ್ ಎಂಬುದನ್ನು ಮರೆಯಬೇಡಿ!
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org