ಕಾಳಿ ನದಿ ರಿವರ್ ರಾಫ್ಟಿಂಗ್ ಹಾಗೂ ಜಲಕ್ರೀಡೆ ಚಟುವಟಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸರಕಾರಿ ಜಂಗಲ್ ರೆಸಾರ್ಟ್ ಗಳ ಮತ್ತು ಖಾಸಗಿ ಆಪರೇಟರ್‌ಗಳ ನಡುವೆ ಸಂಘರ್ಷ ಉಂಟಾಗಿದ್ದು, ಇದು ದಾಂಡೇಲಿ–ಜೋಯಿಡಾ ಭಾಗದ ಪ್ರವಾಸೋದ್ಯಮಕ್ಕೆ ಮುಳುವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸರಕಾರ ಅರಣ್ಯ ಇಲಾಖೆ ವಿರುದ್ಧ ಆತಿಥ್ಯ ವಲಯದ ಅಸಮಾಧಾನ!

ಅಷ್ಟಕ್ಕೂ ಈ ಸಮಸ್ಯೆಗೆ ಮೂಲ ಕಾರಣ, ಈ ಬಾರಿ ಜಂಗಲ್ ಲಾಡ್ಜ್ ಸಂಸ್ಥೆ ರಾಫ್ಟಿಂಗ್ ನಡೆಸಲು ಟೆಂಡರ್ ಆಹ್ವಾನಿಸಿ, ಖಾಸಗಿ ಸಂಸ್ಥೆಯೊಂದು ಈ ಟೆಂಡರ್ ಪಡೆದುಕೊಂಡಿರುವುದು. ಈಗ ಟೆಂಡರ್ ಪಡೆದಿರುವ ಸಂಸ್ಥೆ ಇತರ ಖಾಸಗಿ ಆಪರೇಟರ್ ಗಳಿಗೆ ರಾಫ್ಟಿಂಗ್ ಅವಕಾಶ ನೀಡದಂತೆ ಜಿಲ್ಲಾಡಳಿತದ ಮೊರೆ ಹೋಗಿದೆ. ಆದರೆ, ದಾಂಡೇಲಿ ಹಾಗೂ ಜೋಯಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಈ ಜಲಕ್ರೀಡೆಗಳ ಆದಾಯದ ಮೇಲೆ ಅವಲಂಬಿತವಾಗಿವೆ. ಈ ವಿವಾದ ಹೀಗೆ ಮುಂದುವರೆದರೆ ಸ್ಥಳೀಯರ ಬದುಕಿಗೆ ಸಂಕಷ್ಟ ಎದುರಾಗಬಹುದು. ಹೀಗಾಗಿ ಜಿಲ್ಲಾಡಳಿತ ಈ ವಿವಾದವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿ ಎಂದು ಖಾಸಗಿ ರೆಸಾರ್ಟ್ ಮಾಲೀಕರ ಸಂಘ ಹಾಗೂ ಆಪರೇಟರ್ ಗಳು ಮನವಿ ಮಾಡಿದ್ದಾರೆ.