ಗ್ರೂಪ್ ಬುಕಿಂಗ್ ಸುಲಭಗೊಳಿಸಲು 'ಲಾಬಿ'
ಜಾಗತಿಕ ಪ್ರವಾಸೋದ್ಯಮವು ಕೋವಿಡ್ ನಂತರ ವೇಗವಾಗಿ ಬೆಳೆಯುತ್ತಿದ್ದು, ಗ್ರೂಪ್ ಬುಕಿಂಗ್ ಕ್ಷೇತ್ರದಲ್ಲಿ ಇಂಥ ಡಿಜಿಟಲ್ ಬದಲಾವಣೆಗಳು ಅನಿವಾರ್ಯವಾಗಿವೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ಪ್ರವಾಸಿಗರ ಗ್ರೂಪ್ ಬುಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ಮುಂದಾಗಿರುವ 'ಲಾಬಿ' ಎಂಬ ಸ್ಟಾರ್ಟ್-ಅಪ್ ಸಂಸ್ಥೆಯು 2.2 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 18 ಕೋಟಿ ರು. ಮೊತ್ತವನ್ನು ಸಂಗ್ರಹಿಸಿದೆ.
ಇದನ್ನೂ ಓದಿ: ʻಅಮೇರಿಕಾದಲ್ಲಿ ಗೊರೂರುʼ ಅಮೆರಿಕ ಪ್ರವಾಸಿಗರಿಗೆ ಅತ್ಯಾಪ್ತವಾಗುವ ಪುಸ್ತಕ
ಸಾಮಾನ್ಯವಾಗಿ ದೊಡ್ಡ ಗುಂಪಿನ ಪ್ರಯಾಣಕ್ಕಾಗಿ ಹೊಟೇಲ್ ಮತ್ತು ವಿಮಾನ ಟಿಕೆಟ್ ಬುಕ್ ಮಾಡುವುದು ಅತ್ಯಂತ ಸಂಕೀರ್ಣವಾದ ಕೆಲಸ. ಇದನ್ನು ಎಐ ಸಹಾಯದಿಂದ ಅತ್ಯಂತ ಸರಳ ಮತ್ತು ವೇಗವಾಗಿ ಮಾಡಲು ಲಾಬಿ ಸಂಸ್ಥೆ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ.
ಹೊಟೇಲ್‌ಗಳಲ್ಲಿ ಹತ್ತಾರು ರೂಮ್‌ಗಳನ್ನು ಒಟ್ಟಿಗೆ ಬುಕ್ ಮಾಡುವಾಗ ದರಗಳ ಹೊಂದಾಣಿಕೆ ಮತ್ತು ಲಭ್ಯತೆಯ ಬಗ್ಗೆ ದೊಡ್ಡ ಮಟ್ಟದ ಮಾತುಕತೆಗಳು ನಡೆಯಬೇಕಾಗುತ್ತದೆ. ಲಾಬಿ ಸಂಸ್ಥೆಯ ಈ ಎಐ ಪ್ಲಾಟ್‌ಫಾರ್ಮ್, ಹೊಟೇಲ್‌ಗಳು ಮತ್ತು ಟ್ರಾವೆಲ್ ಏಜೆಂಟ್‌ಗಳ ನಡುವೆ ನೇರ ಸಂಪರ್ಕ ಕಲ್ಪಿಸಿ, ರಿಯಾಯಿತಿ ದರಗಳನ್ನು ತಕ್ಷಣವೇ ಪಡೆಯಲು ಸಹಾಯ ಮಾಡುತ್ತದೆ.