ದಕ್ಷಿಣ ಭಾರತದ ಪ್ರವಾಸಿ ತಾಣಗಳತ್ತ ದಿ ಹಾಸ್ಟೆಲ್ಲರ್ ಚಿತ್ತ
ಭಾರತದ ಬ್ಯಾಕ್‌ಪ್ಯಾಕರ್ ಹಾಸ್ಟೆಲ್ ಸರಣಿಯಾದ ದಿ ಹಾಸ್ಟೆಲ್ಲರ್ (The Hosteller) ತನ್ನ ಮುಂದಿನ ಬೆಳವಣಿಗೆಯ ಹಂತದಲ್ಲಿ ದಕ್ಷಿಣ ಭಾರತದ ವಿರಾಮ (Leisure) ಪ್ರವಾಸಿ ತಾಣಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ.
ಭಾರತದ ಬ್ಯಾಕ್‌ಪ್ಯಾಕರ್ ಹಾಸ್ಟೆಲ್ ಸರಣಿಯಾದ ದಿ ಹಾಸ್ಟೆಲ್ಲರ್ (The Hosteller) ತನ್ನ ಮುಂದಿನ ಬೆಳವಣಿಗೆಯ ಹಂತದಲ್ಲಿ ದಕ್ಷಿಣ ಭಾರತದ ವಿರಾಮ (Leisure) ಪ್ರವಾಸಿ ತಾಣಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೊಸ ಹಾಸ್ಟೆಲ್‌ಗಳನ್ನು ಆರಂಭಿಸುವ ಮೂಲಕ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಲು ಸಂಸ್ಥೆ ಯೋಜಿಸಿದೆ. ಕಂಪನಿಯ ಪ್ರಕಾರ, ದಕ್ಷಿಣ ಭಾರತದಲ್ಲಿ ದೇಶೀಯ ಹಾಗೂ ಯುವ ಪ್ರವಾಸಿಗರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದರಿಂದ ಈ ಪ್ರದೇಶವು ಬೆಳವಣಿಗೆಗೆ ಉತ್ತಮ ಅವಕಾಶ ಒದಗಿಸುತ್ತಿದೆ.
ಇತ್ತೀಚೆಗೆ ಸಂಸ್ಥೆ 150 ಕೋಟಿ ರು. ಸರಣಿ-ಬಿ (Series B) ಹೂಡಿಕೆಯನ್ನು ಪಡೆದುಕೊಂಡಿದ್ದು, ಈ ಮೊತ್ತವನ್ನು ಹೊಸ ಆಸ್ತಿಗಳ ಆರಂಭ, ತಂತ್ರಜ್ಞಾನ ಅಭಿವೃದ್ಧಿ, ಕಾರ್ಯಾಚರಣೆ ಬಲಪಡಿಸುವುದು ಹಾಗೂ ಬ್ರ್ಯಾಂಡ್ ವಿಸ್ತರಣೆಗೆ ಬಳಸಲಿದೆ. ಮುಂದಿನ 24–30 ತಿಂಗಳಲ್ಲಿ 150ಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ಸ್ಥಾಪಿಸಿ, ಮೂರು ವರ್ಷಗಳಲ್ಲಿ ದೇಶಾದ್ಯಂತ 25,000 ಹಾಸಿಗೆಗಳ ಸಾಮರ್ಥ್ಯ ತಲುಪುವ ಗುರಿಯನ್ನು ಕಂಪನಿ ಹೊಂದಿದೆ. ಜತೆಗೆ ವಸತಿ, ಆಹಾರ, ಸಂಚಾರ ಮತ್ತು ಸ್ಥಳೀಯ ಅನುಭವಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಟ್ರಾವೆಲ್ ಸೂಪರ್ ಆಪ್ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಪ್ರಕಟಿಸಿದೆ.