ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನೆ ನೀಡಲು ಸೌದಿ ಅರೇಬಿಯಾ ಹೊಸ ‘ಪ್ಯಾಕೇಜ್ ವೀಸಾ’ (Package Visa) ವ್ಯವಸ್ಥೆಯನ್ನು ಆರಂಭಿಸಿದೆ. ಈ ಹೊಸ ಡಿಜಿಟಲ್ ಸೇವೆಯ ಮೂಲಕ ಪ್ರವಾಸಿಗರು ವಿಮಾನ ಟಿಕೆಟ್, ಹೊಟೇಲ್ ವಾಸ್ತವ್ಯ, ಪ್ರವಾಸಿ ವೀಸಾ ಮತ್ತು ಪ್ರವಾಸಿ ಅನುಭವಗಳನ್ನು ಒಂದೇ ಬುಕ್ಕಿಂಗ್‌ನಲ್ಲಿ ಪಡೆಯಬಹುದಾಗಿದೆ.

ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಜೋರ್ಡಾನ್, ಈಜಿಪ್ಟ್ ಮತ್ತು ಮೆಕ್ಸಿಕೋ ಸೇರಿದಂತೆ ಆಯ್ದ ದೇಶಗಳಲ್ಲಿ ಜಾರಿಗೆ ತರಲಾಗಿದೆ. ನಂತರ ಇದನ್ನು ಇತರ ದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ.

Untitled design (44)

ಈ ಸೇವೆಯನ್ನು ಅಧಿಕೃತವಾದ ಪ್ರವಾಸ ಸಂಸ್ಥೆಗಳ ಮೂಲಕ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ಒದಗಿಸಲಾಗುತ್ತಿದ್ದು , ಪ್ರವಾಸಿಗರು ಪ್ರತ್ಯೇಕವಾಗಿ ವೀಸಾ, ಹೊಟೇಲ್ ಮತ್ತು ವಿಮಾನ ಬುಕ್ ಮಾಡುವ ಅಗತ್ಯವಿಲ್ಲ. ಇದರಿಂದ ವಿದೇಶಿ ಪ್ರವಾಸಿಗರಿಗೆ ಸುಲಭ ಮತ್ತು ವೇಗವಾದ ಪ್ರಯಾಣ ಅನುಭವ ಸಿಗಲಿದೆ. ಈ ಹೊಸ ಕ್ರಮವು ಸೌದಿ ಅರೇಬಿಯಾದ ವಿಷನ್ 2030 ಯೋಜನೆಯ ಭಾಗವಾಗಿದ್ದು, ತೈಲ ಆಧಾರಿತ ಆರ್ಥಿಕತೆಯಿಂದ ಹೊರಬಂದು ಪ್ರವಾಸೋದ್ಯಮವನ್ನು ಪ್ರಮುಖ ಆದಾಯ ಮೂಲವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.

ಪ್ಯಾಕೇಜ್‌ನಲ್ಲಿ ಏನೆಲ್ಲಾ ಲಭ್ಯ?

ಈ ಪ್ಯಾಕೇಜ್‌ಗಳು 4,000 ಸೌದಿ ರಿಯಾಲ್‌ (SAR) ನಿಂದ ಆರಂಭವಾಗುತ್ತಿದ್ದು, ಇದರಲ್ಲಿ ವಿಮಾನ ಪ್ರಯಾಣ, ಹೊಟೇಲ್ ವಾಸ್ತವ್ಯ, ಪ್ರವಾಸಿ ವೀಸಾ ಪ್ರಕ್ರಿಯೆ, ಆಯ್ದ ಪ್ರವಾಸಿ ಅನುಭವಗಳು (Guided Tours, ಸಾಂಸ್ಕೃತಿಕ ಕಾರ್ಯಕ್ರಮಗಳು) ಸೇರಿವೆ.