ವ್ಯವಹಾರ ಪ್ರವಾಸ ಕೈಗೊಳ್ಳುವವರಿಗೆ ವಿಮಾನ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ixigo ‘ixigo for work’ ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ixigo ಆ್ಯಪ್‌ನಲ್ಲೇ ಲಭ್ಯವಿರುವ ಈ ವೈಶಿಷ್ಟ್ಯದ ಮೂಲಕ ಪ್ರತ್ಯೇಕ ಬ್ಯುಸಿನೆಸ್ ಖಾತೆ ತೆರೆಯುವ ಅಗತ್ಯವಿಲ್ಲದೆ ದೇಶೀಯ ವಿಮಾನಗಳ ಅರ್ಹ ಕಾರ್ಪೊರೇಟ್ ದರಗಳನ್ನು ಬಳಕೆದಾರರು ಪಡೆಯಬಹುದು.

ದೇಶೀಯ ವಿಮಾನಗಳಿಗಾಗಿ ಹುಡುಕಾಟ ಆರಂಭಿಸುವ ಮುನ್ನ ‘ixigo for work’ ಅನ್ನು ಸಕ್ರಿಯಗೊಳಿಸಬಹುದು. ಬಳಿಕ ಅರ್ಹ ಕಾರ್ಪೊರೇಟ್ ದರಗಳನ್ನು ಸಾಮಾನ್ಯ ದರಗಳೊಂದಿಗೆ ಒಂದೇ ಬುಕಿಂಗ್ ಇಂಟರ್‌ಫೇಸ್‌ನಲ್ಲಿ ಹೋಲಿಕೆ ಮಾಡಿ ಆಯ್ಕೆ ಮಾಡಬಹುದಾಗಿದೆ. ಕಾರ್ಪೊರೇಟ್ ದರಗಳಲ್ಲಿ ಕಡಿಮೆ ರದ್ದತಿ ಮತ್ತು ಮರುನಿಗದಿಪಡಿಸುವ ಶುಲ್ಕ, ಉಚಿತ ಸೀಟ್ ಆಯ್ಕೆ ಹಾಗೂ ಊಟದಂಥ ಪ್ರಯೋಜನಗಳು ದೊರೆಯುತ್ತವೆ.

ಇದಲ್ಲದೆ, ಬಳಕೆದಾರರು ತಮ್ಮ ಕಂಪನಿಯ GSTIN ಅನ್ನು ixigo ಆ್ಯಪ್‌ನಲ್ಲಿ ಉಳಿಸಿಕೊಳ್ಳಬಹುದು. ಇದರಿಂದ ಅನ್ವಯವಾಗುವ GST ಇನ್‌ಪುಟ್ ಕ್ರೆಡಿಟ್ ಪಡೆಯಲು ಅನುಕೂಲವಾಗಲಿದೆ. ಬುಕಿಂಗ್ ಸಂದರ್ಭದಲ್ಲಿ ‘Assured’ ಸೌಲಭ್ಯವನ್ನೂ ಆಯ್ಕೆ ಮಾಡಬಹುದಾಗಿದ್ದು, ರದ್ದತಿಯ ಸಂದರ್ಭದಲ್ಲಿ ತಕ್ಷಣ ಪೂರ್ಣ ಮರುಪಾವತಿ ಸೇರಿದಂತೆ ಪ್ರಯಾಣ ವಿಮೆ, ವಿಮಾನ ನಿಲ್ದಾಣ ಕ್ಯಾಬ್ ಮತ್ತು ವಿಮಾನ ವಿಳಂಬ ರಕ್ಷಣೆಯಂಥ ಸೇವೆಗಳನ್ನು ಪಡೆಯಬಹುದು.