ಭಾರತದ ಅಸಂಘಟಿತ ವಲಯದ ವ್ಯವಹಾರಗಳು ಅತ್ಯಂತ ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿವೆ. ಅಂದರೆ, ಕಂಪೆನಿಗಳ ಕಾಯ್ದೆಯಡಿ ನೋಂದಾಯಿಸದ ಸಣ್ಣ ಕಿರಾಣಿ ಅಂಗಡಿಗಳು, ಬೀದಿ ವ್ಯಾಪಾರಿಗಳು, ಸಣ್ಣ ಉತ್ಪಾದನಾ ಘಟಕಗಳು ಮತ್ತು ಸ್ಥಳೀಯ ಸೇವಾ ಕೇಂದ್ರಗಳು ಹೆಚ್ಚು ಡಿಜಿಟಲ್‌ ಸೌಲಭ್ಯ ಬಳಸುತ್ತಿವೆ. ಸರಕಾರದ ಇತ್ತೀಚಿನ ದತ್ತಾಂಶಗಳ ಪ್ರಕಾರ, ಈ ವಲಯದ ಸುಮಾರು ಅರ್ಧದಷ್ಟು ಸಂಸ್ಥೆಗಳು ಈಗ ಇಂಟರ್ನೆಟ್ ಬಳಸುತ್ತಿವೆ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅಸಂಘಟಿತ ವಲಯದ ಸಂಸ್ಥೆಗಳಲ್ಲಿ ಇಂಟರ್ನೆಟ್ ಬಳಕೆಯ ಪ್ರಮಾಣವು 2025ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 48ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಶೇ. 39 ಇತ್ತು.

ಇದನ್ನೂ ಓದಿ: ಡಿಜಿಟಲ್ ಭೂತಾನ್!

ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕಂಡುಬಂದ ಏರಿಕೆಗೆ ಹಬ್ಬದ ಸೀಸನ್ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ. ಈ ಸಮಯದಲ್ಲಿ ಸಣ್ಣ ವ್ಯಾಪಾರಿಗಳು, ಬೀದಿ ಬದಿ ಮಾರಾಟಗಾರರು ಮತ್ತು ನೆರೆಹೊರೆಯ ಸೇವಾ ಪೂರೈಕೆದಾರರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಿಜಿಟಲ್ ಪಾವತಿ ಮತ್ತು ಆನ್‌ಲೈನ್ ವಹಿವಾಟುಗಳನ್ನು ಹೆಚ್ಚಾಗಿ ಬಳಸಿದ್ದಾರೆ.