ಸ್ಪಿರಿಚುವಲ್ ಟೂರಿಸಂನಲ್ಲಿ ಭಾರತ ಟಾಪ್
ಭಾರತದ ಈ ಯಶಸ್ಸಿಗೆ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳೇ ಪ್ರಮುಖ ಕಾರಣ. ವಾರಾಣಸಿಯ ಕಾಶಿ ವಿಶ್ವನಾಥ ಧಾಮ, ಅಯೋಧ್ಯೆಯ ರಾಮ ಮಂದಿರ, ಚಾರ್ ಧಾಮ್ ಯಾತ್ರಾ ಮಾರ್ಗಗಳ ಅಭಿವೃದ್ಧಿ ಮತ್ತು ಉಜ್ಜಯಿನಿಯ ಮಹಾಕಾಲ ಲೋಕದಂಥ ಯೋಜನೆಗಳು ಪ್ರವಾಸಿಗರ ಅನುಭವವನ್ನು ಉತ್ತಮಪಡಿಸಿವೆ.
ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮ 2026ನೇ ಸಾಲಿನ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರಸ್ಥಾನ ಗಳಿಸಿದೆ. ಏಷ್ಯಾದ ಎಲ್ಲಾ ಪ್ರಮುಖ ದೇಶಗಳನ್ನು ಹಿಂದಿಕ್ಕಿರುವ ಭಾರತ, ತನ್ನ ಅಪ್ರತಿಮ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಆಕರ್ಷಣೆಗಳ ಮೂಲಕ ಪ್ರವಾಸೋದ್ಯಮದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಚೀನಾ, ಜಪಾನ್ ಮತ್ತು ಥೈಲ್ಯಾಂಡ್‌ನಂಥ ಬಲಿಷ್ಠ ಪ್ರವಾಸಿ ಮಾರುಕಟ್ಟೆಗಳಿಗಿಂತ ಭಾರತವು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ವಿದೇಶಿ ಪ್ರವಾಸಿಗರು ಶಾಂತಿ, ಯೋಗ ಮತ್ತು ಸಾಂಪ್ರದಾಯಿಕ ಭಾರತೀಯ ಜೀವನಶೈಲಿಯ ಅನ್ವೇಷಣೆಯಲ್ಲಿ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: ವರ್ಚುವಲ್ ಟೂರಿಸಂ: ಸಂಚಾರದ ಹೊಸ ಅಧ್ಯಾಯ..!
ಭಾರತದ ಈ ಯಶಸ್ಸಿಗೆ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳೇ ಪ್ರಮುಖ ಕಾರಣ. ವಾರಾಣಸಿಯ ಕಾಶಿ ವಿಶ್ವನಾಥ ಧಾಮ, ಅಯೋಧ್ಯೆಯ ರಾಮ ಮಂದಿರ, ಚಾರ್ ಧಾಮ್ ಯಾತ್ರಾ ಮಾರ್ಗಗಳ ಅಭಿವೃದ್ಧಿ ಮತ್ತು ಉಜ್ಜಯಿನಿಯ ಮಹಾಕಾಲ ಲೋಕದಂಥ ಯೋಜನೆಗಳು ಪ್ರವಾಸಿಗರ ಅನುಭವವನ್ನು ಉತ್ತಮಪಡಿಸಿವೆ. ರಸ್ತೆ, ರೈಲು ಮತ್ತು ವಿಮಾನಯಾನ ಸಂಪರ್ಕದ ಸುಧಾರಣೆಯು ಪ್ರವಾಸಿಗರಿಗೆ ಕಠಿಣ ಹಾದಿಗಳನ್ನು ಸುಲಭಗೊಳಿಸಿದೆ.
ಭಾರತದ ಪುರಾತನ ಸಂಪ್ರದಾಯಗಳು, ಹಬ್ಬಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೃಷಿಕೇಶ, ಹರಿದ್ವಾರ ಮತ್ತು ಬೋಧಗಯಾದಂತಹ ಸ್ಥಳಗಳು ಅಂತರರಾಷ್ಟ್ರೀಯ ಆಧ್ಯಾತ್ಮಿಕ ತಾಣಗಳಾಗಿ ರೂಪಾಂತರಗೊಂಡಿವೆ. ಸರಕಾರದ 'ಪ್ರಸಾದ್' ಮತ್ತು 'ಸ್ವದೇಶ್ ದರ್ಶನ್' ನಂಥ ಯೋಜನೆಗಳು ಯಾತ್ರಾ ಸ್ಥಳಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ.