ವಿಮಾನ ನಿಲ್ದಾಣ ಶುಲ್ಕದಲ್ಲಿ ಶೇ. 25ರಷ್ಟು ಕಡಿತ
ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆಂತರಿಕ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಸದೃಢವಾಗಿಡಲು ಇದು ಅತ್ಯಗತ್ಯವಾಗಿತ್ತು.
ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ವಿಮಾನ ನಿಲ್ದಾಣದ ವಿವಿಧ ಶುಲ್ಕಗಳಲ್ಲಿ ಶೇಕಡಾ 25ರಷ್ಟು ಕಡಿತ ಘೋಷಿಸುವ ಮೂಲಕ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಕೇಂದ್ರ ಸರಕಾರ ಸಮಾಧಾನ ನೀಡಿದೆ.
ಇದನ್ನೂ ಓದಿ: ಭಾರತದಲ್ಲಿ ವಿಮಾನ ಇಂಧನ ದರ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಮಾನ ಇಂಧನ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಹೆಚ್ಚಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ವಿಮಾನ ದರಗಳು ದುಬಾರಿಯಾದರೆ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುವ ಆತಂಕವಿತ್ತು.
ವಿಮಾನಯಾನ ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಇಂಧನ ವೆಚ್ಚವೇ ಶೇ. 40ರಷ್ಟಿರುತ್ತದೆ. ಹೀಗಾಗಿ, ಸರಕಾರವು ವಿಮಾನ ನಿಲ್ದಾಣದ ಶುಲ್ಕಗಳನ್ನು ಕಡಿತಗೊಳಿಸುವ ಮೂಲಕ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿದೆ.