ಉತ್ತರ ಬಂಗಾಳ ಪ್ರವಾಸೋದ್ಯಮ ಪಾಲುದಾರರ ಈಸ್ಟ್ರನ್‌ ಇಂಡಿಯಾ ಟ್ರಾವೆಲ್‌ ಹಾಗೂ ಟೂರ್‌ ಆಪರೇಟರ್ಸ್‌ ಸಂಘವು ಜನವರಿ 9ರಿಂದ 11ರವರೆಗೆ 9ನೇಯ ʻಬಂಗಾಳ ಟ್ರಾವೆಲ್‌ ಮಾರ್ಟ್‌ʼ (ಬಿಟಿಎಂ) ಅನ್ನು ಸಿಲಿಗುರಿಯ ಹೊಟೇಲ್‌ ಒಂದರಲ್ಲಿ ಆಯೋಜಿಸಿದೆ.

ಇದು ಪಶ್ಚಿಮ ಬಂಗಾಳದ ಅತಿದೊಡ್ಡ ಪ್ರದರ್ಶನವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು ಉತ್ತರ ಬಂಗಾಳ ಮತ್ತು ಸಿಕ್ಕಿಂನ ಗ್ರಾಮೀಣ ಪ್ರವಾಸವನ್ನು ಉತ್ತೇಜಿಸುವ ಮತ್ತು ನೆರೆಯ ನೇಪಾಳ ಭೂತಾನ್‌ಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಬಿಟಿಎಂ ಅಧ್ಯಕ್ಷ ಸಂದೀಪನ್ ಘೋಷ್ ಹೇಳಿದ್ದಾರೆ.

BTM1

ಸಂಘವು ಪೂರ್ವ ಮತ್ತು ಈಶಾನ್ಯ ಭಾರತಗಳಲ್ಲಿ 400ಕ್ಕೂ ಹೆಚ್ಚು ಸದಸ್ಯರನ್ನು ಹಾಗೂ ಹೊರದೇಶಗಳಲ್ಲೂ ಪ್ರತಿನಿಧಿಗಳನ್ನೂ ಹೊಂದಿದೆ. ಪ್ರದರ್ಶನದ ಮೂಲಕ ಪ್ರವಾಸೋದ್ಯಮದ ಹೊಸ ಮಾರ್ಗಗಳನ್ನು ಪರಿಚಯಿಸಲು ಮತ್ತು ಸ್ಥಳೀಯ ಸಹಭಾಗಿತ್ವವನ್ನು ಬಲಪಡಿಸಲು ಪ್ರಯತ್ನಿಸುತ್ತಿರುವುದಾಗಿಯೂ ಅಧ್ಯಕ್ಷ ಸಂದೀಪನ್ ಘೋಷ್ ತಿಳಿಸಿದ್ದಾರೆ.

ಈ ಹಿಂದೆ ಅಂದರೆ 2015ರಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು ಭೂತಾನ್‌ಗೆ ಭೇಟಿ ನೀಡಿದ್ದಾಗ ಈ ಟ್ರಾವೆಲ್‌ ಮಾರ್ಟ್‌ ಅನ್ನು ಪರಿಚಯಿಸಿದ್ದರು. ಅವರ ಭೇಟಿಯ ನಂತರ, ಪ್ರವಾಸೋದ್ಯಮ ಪಾಲುದಾರರು, ಆಗಿನ ರಾಜ್ಯ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್ ಅವರ ನೇತೃತ್ವದಲ್ಲಿ, 2016ರಲ್ಲಿ ಟ್ರಾವೆಲ್ ಮಾರ್ಟ್ ಆಯೋಜಿಸಲು ಕ್ರಮ ಕೈಗೊಂಡರು ಎಂದು ಪ್ರವಾಸೋದ್ಯಮ ವೃತ್ತಿಪರ ಮತ್ತು ಕಾರ್ಯಕ್ರಮದ ಸಲಹೆಗಾರ ರಾಜ್ ಬಸು ಹೇಳಿದರು.

ಈ ಟ್ರಾವೆಲ್‌ ಮಾರ್ಟ್‌ ಆಯೋಜನೆಯು ಕೇವಲ ಪೂರ್ವ ಭಾರತ ಮತ್ತು ಈಶಾನ್ಯ ಭಾರತದ ರಾಜ್ಯಗಳನ್ನು ಮಾತ್ರವಲ್ಲದೇ ನೆರೆಯ ಭೂತಾನ್‌, ನೇಪಾಳ, ಮ್ಯಾನ್ಮರ್‌ ರಾಷ್ಟ್ರಗಳಿಗೂ ಪ್ರಮುಖ ಪ್ರವಾಸ ಮಾರ್ಗವಾಗಲಿದೆ ಎಂದು ಅವರು ಹೇಳಿದ್ದಾರೆ.