ಬೆಂಗಳೂರು: ಮನೆ ಬಾಗಿಲಿಗೇ ಬರಲಿದೆ ಬ್ಯಾಗೇಜ್ ಸೇವೆ!
ವಿಮಾನ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹೊಸ ಸೇವೆಗಳನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.
ವಿಮಾನ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹೊಸ ಸೇವೆಗಳನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.
‘ಕೇರ್ ಬೈ ಬಿಎಲ್‌ಆರ್’ ಕಾರ್ಯಕ್ರಮದಡಿ ಪ್ರಯಾಣಿಕರ ಮನೆಗಳಿಂದಲೇ ಬ್ಯಾಗೇಜ್ ಸಂಗ್ರಹಿಸಿ, ಅವರು ವಿಮಾನ ನಿಲ್ದಾಣ ತಲುಪುವ ಮುನ್ನವೇ ಚೆಕ್‌ಇನ್ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವ ಯೋಜನೆ ಇದೆ. ಈ ಸೇವೆಯೊಂದಿಗೆ ಪ್ರಯಾಣಿಕರಿಗೆ ಬೆಳಗ್ಗೆ ಎಬ್ಬಿಸುವ ಕರೆ ಹಾಗೂ ಚಾಲಕನೊಂದಿಗೆ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವ್ಯವಸ್ಥೆಯೂ ಇರಲಿದೆ.
ಭದ್ರತಾ ತಪಾಸಣೆಗೆ ಕೊಂಡೊಯ್ಯಲು ಸಾಧ್ಯವಾಗದ ಕೆಲವು ವಸ್ತುಗಳನ್ನು ಕೊರಿಯರ್ ಮೂಲಕ ಕಳುಹಿಸುವ ಮತ್ತೊಂದು ಸೇವೆಯನ್ನೂ ಯೋಜಿಸಲಾಗಿದೆ. ‘ಕೇರ್ ಬೈ ಬಿಎಲ್‌ಆರ್’ ಈಗಾಗಲೇ ಮೀಟ್ ಆ್ಯಂಡ್ ಅಸಿಸ್ಟ್, ಲೌಂಜ್ ಪ್ರವೇಶ, ಲಗೇಜ್ ಸಂಗ್ರಹ, ವ್ಯಾಲೆಟ್ ಪಾರ್ಕಿಂಗ್, ಪೋರ್ಟರ್ ನೆರವು, ಬ್ಯಾಗೇಜ್ ರ‍್ಯಾಪಿಂಗ್ ಸೇರಿದಂತೆ 10 ಸೇವೆಗಳನ್ನು ಒದಗಿಸುತ್ತಿದೆ.
ಇದರ ಜತೆಗೆ BMW, Audi, Mercedes ಮತ್ತು Rolls-Royce ಸೇರಿದಂತೆ ಐಷಾರಾಮಿ ಕಾರುಗಳಲ್ಲಿ ಲಿಮೋಸಿನ್ ಸೇವೆಯೂ ಲಭ್ಯವಿದೆ. ಇದರ ಆರಂಭಿಕ ದರ ಸುಮಾರು ₹4,500 ಆಗಿದ್ದು, Rolls-Royce ಸೇವೆ ಸುಮಾರು ₹50,000ರಿಂದ ಆರಂಭವಾಗುತ್ತದೆ.