ಅಡ್ವೆಂಚರ್ನಿಂದ ಅಧ್ಯಾತ್ಮದವರೆಗೆ ತೇಜಸ್ವಿನಿ ಪ್ರವಾಸ
ನಮ್ಮದೊಂದು ಫ್ರೆಂಡ್ಸ್ ಗ್ಯಾಂಗ್ ಇದೆ. ಅವರ ಜತೆಗೆ ಪ್ರವಾಸ ಹೋಗುವುದೆಂದರೆ ನನಗೆ ಬಹಳ ಇಷ್ಟ. ಇತ್ತೀಚೆಗೆ ಅವರ ಜತೆ ಮಾಲ್ಡೀವ್ಸ್ ಹೋಗಿದ್ದೆ. ಅದು ಬಹಳ ಮಜವಾದ ಪ್ರವಾಸವಾಗಿತ್ತು. ನನಗೆ ಪ್ರೆಂಡ್ ಒಮ್ಮೆ ಒತ್ತಾಯ ಮಾಡಿ ಟ್ರೆಕ್ಕಿಂಗ್ ಕರೆದುಕೊಂಡು ಹೋಗಿದ್ದರು. ಟ್ರೆಕ್ಕಿಂಗ್ ಮಾಡುವ ಸಾಮರ್ಥ್ಯ ನನಗಿಲ್ಲ ಅಂದುಕೊಂಡಿದ್ದೆ. ಆದರೆ, ಆ ಟ್ರೆಕ್ ಬಳಿಕ ಬಹಳ ಇಷ್ಟವಾಯಿತು.
ಫುಲ್ ಮೀಲ್ಸ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ತೇಜಸ್ವಿನಿ ಶರ್ಮಾ ಸದ್ಯ ಹೊಸ ಸಿನಿಮಾದಲಿ ಮಿಂಚಲು ರೆಡಿ ಆಗಿದ್ದಾರೆ. ಈ ಬಾರಿ ವಿಶೇಷವಾಗಿ ಖಾಕಿ ಧರಿಸಿ ಪೊಲೀಸ್ ಪಾತ್ರದಲ್ಲಿ ಜನರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರ ಜತೆಗೆ ಹಲವು ಸಿನಿಮಾಗಳನ್ನು ಕೇಳುತ್ತಿರುವ ಅವರು ಟ್ರಾವೆಲ್ ಫ್ರೀಕ್ ಕೂಡ ಹೌದು. ಅವರ ಟ್ರಾವೆಲ್ ಜೀವನದ ಬಗ್ಗೆ ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮೌನದ ಸಮುದ್ರ ಲೋಕದಲ್ಲಿ ಸಂಗೀತಾ
ಟ್ರಾವೆಲ್ ಫ್ರೀಕ್
ಕೋವಿಡ್ ಮುಂಚೆ ಬಹಳ ಟ್ರಾವೆಲ್ ಮಾಡುತ್ತಿದ್ದೆ. ಮೊದಲಿಗೆ ಹೊಗಿದ್ದು ಥೈಲ್ಯಾಂಡ್‌ಗೆ ಹೋಗಿದ್ದೆ. ನಮ್ಮ ನೆಂಟರು ಅಲ್ಲಿದ್ದರು. ಎಂಜಿನಿಯರಿಂಗ್ ಸಮಯದಲ್ಲಿ ಥೈಲ್ಯಾಂಡ್ ಹೋಗಿದ್ದೆ. ಬಳಿಕ ಮಾಡೆಲಿಂಗ್ ಶುರು ಮಾಡಿದಮೇಲೆ ನೇಪಾಳ್, ಮಕಾವ್, ಶ್ರೀಲಂಕಾ ಸೇರಿದಂತೆ ಹಲವು ವಿದೇಶ ಪ್ರವಾಸಗಳನ್ನು ಮಾಡಿದ್ದೇನೆ. ಕೋವಿಡ್ ಬಳಿಕ ಬಹಳಷ್ಟು ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಿದ್ದೇನೆ. ನನಗೆ ದೇವಸ್ಥಾನಗಳಿಗೆ ಭೇಟಿ ನೀಡುವುದು ಹಾಗೂ ಯಾವುದೋ ಶಾಂತ ಸ್ಥಳದಲ್ಲಿರುವ ರೆಸಾರ್ಟ್‌ಗೆ ಹೋಗಿ ಚಿಲ್ ಮಾಡುವುದು ಎರಡೂ ಬಹಳ ಇಷ್ಟ. ಎರಡೂ ವಿಭಿನ್ನ ಅನುಭವ.

ಮನೆಗೆ ಹೋಗುವುದೂ ಪ್ರವಾಸ!
ನನ್ನ ಮನೆ ಇರುವುದು ಕೂರ್ಗ್. ಅಲ್ಲಿಗೆ ಹೋಗುವುದೇ ನನಗೊಂದು ಪ್ರವಾಸ ಇದ್ದ ಹಾಗೆ. ಯಾವುದಾದರು ಒಂದು ಸಣ್ಣ ಪ್ರವಾಸಕ್ಕೆ ಹೋಗಬೇಕು ಎಂದೆನಿಸಿದ ಕೂಡಲೇ ಬೆಳಗ್ಗೆ ಕಾರ್ ಹತ್ತಿ ಸೋಲೋ ಡ್ರೈವ್ ಹೋಗುತ್ತೇನೆ. ಯಾವುದಾದರೂ ಒಳ್ಳೆಯ ಪಾಡ್‌ಕಾಸ್ಟ್ ಹಾಕಿಕೊಂಡು ಕೂರ್ಗ್ ಡ್ರೈವ್ ಹೋಗುವುದೆಂದರೂ ನನಗೆ ಬಹಳ ಇಷ್ಟ.
ನೆನಪಲ್ಲಿರುವ ಪ್ರವಾಸ
ನನ್ನ ಟ್ರಾವೆಲ್ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಒಮ್ಮೆ ಫ್ರೆಂಡ್ಸ್ ಜತೆಗೆ ಹೋಗುತ್ತೇನೆ. ಇನ್ನೊಮ್ಮೆ ಕುಟುಂಬದವರ ಜತೆಗೆ, ಇನ್ನೂ ಕೆಲವೊಮ್ಮೆ ಒಬ್ಬಳೇ ಹೋಗುತ್ತೇನೆ. ನನಗೆ ಎಲ್ಲವೂ ಇಷ್ಟ. ಎಲ್ಲವನ್ನೂ ಎಂಜಾಯ್ ಮಾಡುತ್ತೇನೆ. ಒಮ್ಮೆ ಫ್ರೆಂಡ್ಸ್ ಜತೆ ಕಬಿನಿ ಸಫಾರಿಗೆ ಹೋಗಿದ್ದೆ. ಆ ಪ್ರವಾಸ ಅದ್ಭುತವಾಗಿತ್ತು. ಹಾಗೇ ಮಾಡೆಲಿಂಗ್ ಮಾಡುವಾಗ ದಕ್ಷಿಣ ಏಷ್ಯಾ ಪ್ರತಿನಿಧಿಸುತ್ತಾ ಮಕಾವ್‌ಗೆ ಹೋಗಿದ್ದೆ. ಆಗ ಏನೂ ಗೊತ್ತಿರಲಿಲ್ಲ. ಅಲ್ಲಿಗೆ ಹೋದಾಗ ಬೇರೆ ಬೇರೆ ದೇಶಗಳಿಂದ ಬಂದ ಜನರನ್ನು ಭೇಟಿ ಮಾಡಿ, ಮಾತನಾಡಿ, ಅವರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ಚೈನೀಸ್ ಭಾಷೆ ಕೂಡ ಗೊತ್ತಿರಲಿಲ್ಲ. ಅದನ್ನು ಕಲಿತು ಸಂವಹನ ಮಾಡಬೇಕಾಗಿತ್ತು. ಒಟ್ಟಾರೆ ಮಜ ಇತ್ತು. ಹಾಗೇ ವಾರಾಣಸಿ ಕೂಡ ನೆನಪಿನಲ್ಲಿರುವ ಪ್ರವಾಸ. ಪುರಿ ಕೂಡಬಹಳ ಇಷ್ಟವಾದ ಜಾಗ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಮಡಿಕೇರಿ ಇಷ್ಟ.

ಇಲ್ಲಿಗೆ ಹೋಗ್ಬೇಕು
ನನಗೆ ಬಹಳ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡಬೇಕು ಎಂಬ ಆಸೆಯಿದೆ. ಪ್ರಪಂಚದಲ್ಲಿ ನೋಡಬೇಕಾದ ಸ್ಥಳಗಳು ಸಾಕಷ್ಟಿವೆ. ಎಲ್ಲವೂ ಕುತೂಹಲ ಮೂಡಿಸುತ್ತವೆ. ಕೇದಾರನಾಥಕ್ಕೆ ಹೋಗಲೇಬೇಕು ಎಂಬ ಕನಸಿದೆ. ಅದರ ಜತೆಗೆ ಯುರೋಪ್‌ಗೆ ಒಂದು ಪ್ರವಾಸ ಹೋಗಿ ಬರಬೇಕು ಎಂಬ ಆಸೆಯಿದೆ. ಜತೆಗೆ ದ್ವಾರಕಾ ಕೂಡ ನೋಡಬೇಕು ಎಂದುಕೊಂಡಿದ್ದೇನೆ.
ನಟನೆ ಮತ್ತು ಪ್ರವಾಸ
ನಟರು ಹೆಚ್ಚು ಗಮನಿಸುವ ಶಕ್ತಿ ಹೊಂದಿದ್ದರೆ ಅದು ನಟನೆ ಮೇಲೂ ಪರಿಣಾಮ ಬೀರುತ್ತದೆ ಅನಿಸುತ್ತದೆ. ಯಾರನ್ನೋ ಭೇಟಿಯಾದಾಗ ಏನಾದರು ಕಲಿಯುವ ಅವಕಾಶವಿರುತ್ತದೆ. ನಾನು ಎಕ್ಸ್ಟ್ರೊವರ್ಟ್. ಜನರ ಜತೆ ಸುಲಭವಾಗಿ ಮಾತನಾಡುತ್ತೇನೆ. ಅವರಿಂದ ಏನಾದರು ಒಂದು ವಿಷಯ ಕಲಿಯಲು ಸಿಗುತ್ತದೆ. ಕೆಲವೊಮ್ಮೆ ಅದು ನಟನೆಗೆ ಸಹಾಯ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಆ ಕಲಿಕೆ ಜೀವನಕ್ಕಂತೂ ಸಹಾಯವಾಗುತ್ತದೆ. ನನಗೆ ಹೆಚ್ಚು ಔಟ್‌ಡೋರ್ ಶೂಟ್ ಇಷ್ಟ.
ಟ್ರೆಕ್ ಮತ್ತು ಬೀಚ್
ನಮ್ಮದೊಂದು ಫ್ರೆಂಡ್ಸ್ ಗ್ಯಾಂಗ್ ಇದೆ. ಅವರ ಜತೆಗೆ ಪ್ರವಾಸ ಹೋಗುವುದೆಂದರೆ ನನಗೆ ಬಹಳ ಇಷ್ಟ. ಇತ್ತೀಚೆಗೆ ಅವರ ಜತೆ ಮಾಲ್ಡೀವ್ಸ್ ಹೋಗಿದ್ದೆ. ಅದು ಬಹಳ ಮಜವಾದ ಪ್ರವಾಸವಾಗಿತ್ತು. ನನಗೆ ಪ್ರೆಂಡ್ ಒಮ್ಮೆ ಒತ್ತಾಯ ಮಾಡಿ ಟ್ರೆಕ್ಕಿಂಗ್ ಕರೆದುಕೊಂಡು ಹೋಗಿದ್ದರು. ಟ್ರೆಕ್ಕಿಂಗ್ ಮಾಡುವ ಸಾಮರ್ಥ್ಯ ನನಗಿಲ್ಲ ಅಂದುಕೊಂಡಿದ್ದೆ. ಆದರೆ, ಆ ಟ್ರೆಕ್ ಬಳಿಕ ಬಹಳ ಇಷ್ಟವಾಯಿತು. ನನಗೆ ಟ್ರೆಕ್ ಇಷ್ಟವಾಗಲ್ಲ ಅಂತ ಅಂದುಕೊಂಡಿದ್ದೆ. ಆದರೆ, ಅದು ಕೂಡ ಬಹಳ ಮಜ ಬಂದಿತ್ತು. ಇನ್ನೂ ಸಾಕಷ್ಟು ಟ್ರೆಕ್ ಮಾಡುವ ಆಸೆಯಿದೆ. ಬೀಚ್ ಅಲ್ಲಿ ನೀರಿಗಿಳಿಯುವುದಕ್ಕಿಂತಲೂ ಸುಮ್ಮನೇ ದಡದಲ್ಲಿ ಕುಳಿತು ಅಲೆಗಳನ್ನು ನೋಡುತ್ತಾ ಕಾಲಕಳೆಯಲು ಬಹಳ ಇಷ್ಟ. ಏನಾದರು ಬರೆಯುತ್ತಾ ಅಥವಾ ಏನಾದರೂ ಕೇಳುತ್ತಾ ಸುಮ್ಮನೇ ಕೂರುವುದು ಹೆಚ್ಚು ಸಮಾಧಾನ ನೀಡುತ್ತದೆ. ಅಲೆಗಳ ಸದ್ದು ಬಹಳ ಇಷ್ಟ.

ಲೋಕಲ್ ತಿಂಡಿ
ಇಲ್ಲಿದ್ದಾಗ ಡಯಟ್ ಅಂದುಕೊಂಡು ಕಡಿಮೆ ತಿನ್ನುತ್ತಾ ಸೆಲೆಕ್ಟೆಡ್ ಆಹಾರ ಮಾತ್ರ ಸೇವನೆ ಮಾಡುತ್ತಿರುತ್ತೇವೆ. ಆದರೆ, ಟ್ರಿಪ್ ಹೋದಾಗ ಆ ರೀತಿ ಕಡಿವಾಣ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ. ಸ್ಥಳೀಯ ಆಹಾರವನ್ನು ಸವಿಯುವುದು ನನಗೆ ಬಹಳ ಖುಷಿ ಕೊಡುತ್ತದೆ. ಇತ್ತೀಚೆಗೆ ಫ್ರೆಂಡ್ಸ್ ಜತೆಗೆ ಊಟಿ ಡ್ರೈವ್ ಹೋದಾಗಲೂ ಅಲ್ಲಿ ಲೋಕಲ್ ಫುಡ್, ಟೀ, ಚಾಕೊಲೆಟ್ ಎಲ್ಲವನ್ನೂ ತಿಂದಿದ್ದೆ. ವಾರಾಣಸಿಯ ಚಾಟ್ಸ್ ಎಲ್ಲವನ್ನೂ ಟ್ರೈ ಮಾಡಿದ್ದೆ. ಪುರಿ ಜಗನ್ನಾಥ್ ಅಲ್ಲಿ 56 ಬಗೆಯ ನೈವೇದ್ಯ ಮಾಡುತ್ತಾರೆ. ಅಲ್ಲಿ ಮಾಲ್ಪೋವ, ಖೋವಾ ಎಲ್ಲ ಇರುತ್ತದೆ. ಅವುಗಳನ್ನು ನೆನಪಿಸಕೊಂಡರೆ ಈಗಲೂ ತಿನ್ನಬೇಕು ಅನಿಸುತ್ತದೆ. ಬೀದಿ ಬದಿಯಲ್ಲಿರುವ ಆಹಾರ ಸೇವನೆ ಮಾಡುವುದು, ಸುಮ್ಮನೇ ಯಾವುದಾದರು ಸ್ಥಳವನ್ನು ಹುಡುಕಿ ಹೋಗುವುದೆಲ್ಲ ನನಗೆ ಬಹಳ ಇಷ್ಟ. ಎರಡು ವರ್ಷಗಳ ಹಿಂದೆ ವಾರಾಣಸಿಗೆ ಹೋಗಿದ್ದೆ. ಅಲ್ಲಿನ ವಾತಾವರಣ, ಆಹಾರ ಎಲ್ಲವೂ ಬಹಳ ಇಷ್ಟವಾಗಿತ್ತು. ಅಲ್ಲಿನ ಘಾಟ್ ಪಕ್ಕದಲ್ಲಿ ಕುಳಿತು ಧ್ಯಾನ ಮಾಡಿದ್ದೆ. ಪುರಿ ಜಗನ್ನಾಥ್ ಹಾಗೂ ದಕ್ಷಿಣ ಭಾರತದಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ.
ಕಬಿನಿ ಹುಲಿ
ಕಬಿನಿಗೆ ಸಫಾರಿ ಹೋಗಿದ್ದೆ. ಅಲ್ಲಿ ಹುಲಿ ಕಂಡಿತ್ತು. ಝೂ ಅಲ್ಲಿ ಪ್ರಾಣಿಗಳನ್ನು ನೋಡುವುದಕ್ಕಿಂತಲೂ ಈ ರೀತಿ ಅವುಗಳನ್ನು ನೋಡುವುದು ಖುಷಿಯಾಗುತ್ತದೆ. ಕಬಿನಿಯಲ್ಲಿ ಮಳೆಗಾಲದಲ್ಲಿ ಹೋಗಿದ್ದು. ಬಹಳ ನೆಮ್ಮದಿಯಿತ್ತು. ಇನ್ನು ನನಗೆ ಮಸೈಮಾರಗೆ ಹೋಗಲೇಬೆಕು ಎಂಬ ಆಸೆಯಿದೆ. ಅಪ್ಪ ಅಮ್ಮನನ್ನು ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ