ಸಮುದ್ರತೀರದ ಪ್ರದೇಶವೆಂದಮೇಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಮುರುಡೇಶ್ವರದಂಥ ಪ್ರದೇಶಗಳಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿರುವುದರಿಂದ ಇಲ್ಲಿನ ಕಡಲ ತೀರಗಳಲ್ಲಿ ಲೆಕ್ಕವಿಲ್ಲದಷ್ಟು ರೆಸಾರ್ಟ್‌, ರೆಸ್ಟೋರೆಂಟ್ಸ್‌ ತಲೆ ಎತ್ತಿವೆ. ಆದರೆ ಅವುಗಳಲ್ಲಿ ಯಾವುದು ಬೆಸ್ಟ್‌ ಎಂದು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಈ ಗೊಂದಲ ಅನೇಕರಿಗಿರುತ್ತದೆ. ಇದಕ್ಕೆ ಉತ್ತರವೆಂಬಂತೆ ಮುರುಡೇಶ್ವರ ದೇವಸ್ಥಾನದಿಂದ 1 ಕಿಮೀ. ದೂರದಲ್ಲಿರುವ ಶಿವಾನಿ ಸನ್‌ಸೆಟ್‌ ಬೇ ಬೀಚ್‌ ರೆಸಾರ್ಟ್‌.

ಹೆಸರೇ ಹೇಳುವಂತೆ ಇದೊಂದು ಬೀಚ್‌ ರೆಸಾರ್ಟ್‌, ಪ್ರೈವೇಟ್‌ ಬೀಚ್‌ ಪ್ರಾಪರ್ಟಿಯಾಗಿರುವುದರಿಂದ ಇಲ್ಲಿನ ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವ ಮಂದಿಯ ಹೊರತಾಗಿ ಇನ್ಯಾವ ಪ್ರವಾಸಿಗನಿಗೂ ಇಲ್ಲಿಗೆ ಪ್ರವೇಶವಿಲ್ಲ. ಆದ್ದರಿಂದಲೇ ಇದು ಸ್ವಚ್ಛ ಹಾಗೂ ಸುಂದರವಾಗಿಯೇ ಉಳಿದುಕೊಂಡಿದೆ. ಅದ್ದೂರಿತನ, ಆಡಂಬರಕ್ಕೆ ಇಲ್ಲಿ ಅವಕಾಶವಿಲ್ಲ, ಬದಲಾಗಿ ಸರಳ, ಸುಂದರವಾಗಿರುವ ಈ ಸ್ಟೇ ಕಡಲು ಪ್ರೇಮಗಳಿಗೆ ಬಲುಬೇಗನೆ ಹತ್ತಿರವಾಗಿಬಿಡುತ್ತದೆ.

New Project (78)

ಸಮುದ್ರ ಸ್ನಾನವೇ ಹೈಲೈಟ್‌

ಇಲ್ಲಿ ಟು ಶೇರಿಂಗ್‌, ಫೋರ್‌ ಶೇರಿಂಗ್‌ ರೂಮ್ಸ್‌ಗಳಿದ್ದು, ಕಡಲಿಗೆ ತೆರೆದುಕೊಂಡಿರುವ ರೂಮುಗಳಿಗಂತೂ ಹೆಚ್ಚಿನ ಬೇಡಿಕೆಯಿದೆ. ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ ಪೀಠೋಪಕರಣಗಳು, ಬಾಲ್ಕನಿ ವ್ಯೂ ಇಲ್ಲಿನ ಸ್ಟೇಯ ಪ್ರಮುಖ ಭಾಗ. ಇನ್ನು ಕಡಲಿನ ಉಪ್ಪು ನೀರಿನಲ್ಲಿ ಮನಬಂದಷ್ಟು ಹೊತ್ತು ಆಟವಾಡಿ ದಣಿದರೆ ರೆಸಾರ್ಟ್‌ನಲ್ಲೇ ಇರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಒಂದಷ್ಟು ಹೊತ್ತು ಕಾಲ ಕಳೆಯುವ ಅವಕಾಶವೂ ಇದೆ.

ಇದನ್ನೂ ಓದಿ: ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ಮುರುಡೇಶ್ವರದ ಸುತ್ತಲಲ್ಲೇ ಇರುವ ಈ ರೆಸಾರ್ಟ್‌ ಬರಿಯ ಸ್ಟೇಗಷ್ಟೇ ಅಲ್ಲದೆ ಆಹಾರದ ವಿಚಾರದಲ್ಲೂ ಅತಿಥಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಇಲ್ಲಿ ವೆಜ್‌ ಹಾಗೂ ನಾನ್‌ವೆಜ್‌ ಊಟ-ತಿಂಡಿಯಿದ್ದು, ದಿನವೂ ಮೆನುವಿನಲ್ಲಿ ವಿವಿಧತೆಯಿರುತ್ತದೆ. ಸಂಜೆಯಾಗುತ್ತಲೇ ಹೈ ಟೀ, ರೂಮಿನಲ್ಲಿದ್ದು ಬೇಸರವಾದರೆ ಥ್ರೋ ಬಾಲ್‌, ಬಾಸ್ಕೆಟ್‌ ಬಾಲ್‌ನಂಥ ಔಟ್‌ ಡೋರ್‌ ಗೇಮ್ಸ್‌ ಆಡುತ್ತಲೇ ಎಂಜಾಯ್‌ ಮಾಡಬಹುದು.

New Project (79)

ನೈಟ್‌ ವ್ಯೂ ಮಿಸ್‌ ಮಾಡದಿರಿ

ಹಗಲಿಗಿಂತಲೂ ಇಲ್ಲಿ ರಾತ್ರಿಯ ವೇಳೆಯನ್ನು ಕಳೆಯುವುದೇ ಖುಷಿ. ಕಡಲ ತೀರದಲ್ಲಿ ಕುಳಿತು ಸುಂದರ ವಾತಾವರಣವನ್ನು ನೋಡುತ್ತಾ, ವಿಶೇಷವಾಗಿ ಅಲಂಕಾರಗೊಂಡ ರೆಸಾರ್ಟ್‌ನ್ನು ನೋಡುವುದು ಕಣ್ಣಿಗೆ ಹಬ್ಬವನ್ನೇ ಸೃಷ್ಟಿಸುತ್ತದೆ. ಇದರ ನಡುವೆ ಬಾನ್‌ ಫೈರ್‌ ಬೇಕೆನ್ನುವವರಿಗೂ ಪ್ರತ್ಯೇಕ ಜಾಗವನ್ನು ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ಮುರುಡೇಶ್ವರದಲ್ಲಿ ಬೀಚ್‌ ಮುಂಭಾಗದಲ್ಲಿ ಹೋಮ್‌ಸ್ಟೇ ಅಥವಾ ರೆಸಾರ್ಟ್‌ ಹುಡುಕುವವರು ನೀವಾದರೆ, ಇದು ನಿಮ್ಮ ಮೊದಲ ಆಯ್ಕೆಯಾಗಿರಲಿ.

ಮುರುಡೇಶ್ವರದ ಸಮೀಪದಲ್ಲಿಯೇ ಇರುವ ಶಿವಾನಿ ರೆಸಾರ್ಟ್‌ಗೆ ಭೇಟಿ ನೀಡುವ ಅತಿಥಿಗಳನ್ನು ಇಲ್ಲಿ ವಿಶೇಷವಾಗಿ ಆದರಿಸಿ, ಕಾಳಜಿ ತೋರುತ್ತಾರೆ. ಬೀಚ್‌ ಸೈಡ್‌ನಲ್ಲಿರುವ ರೆಸಾರ್ಟ್‌ ಆಗಿರುವುದರಿಂದ ಕಣ್ಣಿಗೂ, ಮನಸಿಗೂ ಹಬ್ಬದೂಟವೇ ಸರಿ. ಇತ್ತೀಚೆಗಷ್ಟೇ ಈ ರೆಸಾರ್ಟ್‌ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಜಲಕ್ರೀಡೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
- ರಜತ್‌ ಕಿಶನ್‌, ನಟ, ಬಿಗ್‌ ಬಾಸ್‌ ಸ್ಪರ್ಧಿ

ವಿಳಾಸ:

ಶಿವಾನಿ ಸನ್‌ಸೆಟ್‌ ಬೇ ಬೀಚ್ ರೆಸಾರ್ಟ್, ಬಸ್ತಿಮಕ್ಕಿ, ಮುರುಡೇಶ್ವರ, ಕರ್ನಾಟಕ 581350

ದೂರವಾಣಿ: 077470 61777