ಸಾಮಾನ್ಯವಾಗಿ ನಗರ ಜೀವನ ಸಾಕೆನಿಸಿದಾಗ, ಕೆಲಸದಿಂದ ಒಂದೆರಡು ದಿನ ಬಿಡುವು ಮಾಡಿಕೊಂಡು ವಿಶ್ರಾಂತಿ ಪಡೆಯುವುದಕ್ಕಾಗಿ ರೆಸಾರ್ಟ್‌ಗಳ ಮೊರೆ ಹೋಗುವವರನ್ನು ಕಾಣುತ್ತೇವೆ. ಆದರೆ ಇನ್ನೊಂದಷ್ಟು ಜನ ಇದೆಲ್ಲದರ ಜತೆಗೆ ಮಸ್ತಾಗಿರುವ ಫನ್‌ ಗೇಮ್ಸ್‌, ಇನ್‌ಡೋರ್‌ ಗೇಮ್ಸ್‌ ಅಷ್ಟೇ ಅಲ್ಲದೆ ವಿಭಿನ್ನವಾಗಿರುವ ಔಟ್‌ಡೋರ್‌ ಗೇಮ್ಸ್‌ಗಳಿಗಾಗಿಯೂ ರೆಸಾರ್ಟ್‌ಗಳನ್ನು ಹುಡುಕಾಡುವುದಿದೆ. ಅಂಥವರಿಗಾಗಿ ದಿ ಬೆಸ್ಟ್‌ ರೆಸಾರ್ಟ್‌ ರಾವಿಶಿಂಗ್‌ ರಿಟ್ರೀಟ್‌.

Untitled design (43)

ಬೆಂಗಳೂರಿನಿಂದ ಸುಮಾರು 40ಕಿಮೀ. ದೂರದಲ್ಲಿ ಹಾಗೂ ರಾಮನಗರದಿಂದ 10 ಕಿಮೀ ದೂರದಲ್ಲಿರುವ ರಾವಿಶಿಂಗ್‌ ರಿಟ್ರೀಟ್‌ ಎಲ್ಲ ರೆಸಾರ್ಟ್‌ ಗಳಂತೆ ಗ್ರಾಹಕರಿಗೆ ಉಳಿದುಕೊಳ್ಳಲು ವಿಶೇಷ ಸೌಕರ್ಯವಿರುವ ಕಾಟೇಜ್‌ಗಳು ಹಾಗೂ ಟೆಂಟ್‌ ಹೌಸ್‌ ಗಳನ್ನೂ ಕಲ್ಪಿಸಿಕೊಟ್ಟಿದೆ. ಸ್ಟೇಗೆ ಅವಕಾಶವಿರುವುದಷ್ಟೇ ಅಲ್ಲದೆ ಡೇ ಔಟ್‌ ಪ್ಯಾಕೇಜ್‌ ಗಳಿಗಾಗಿ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚೇ ಇದೆ. ಬರಿಯ 999 ರು. ನಿಂದಲೇ ಇಲ್ಲಿ ಡೇ ಔಟ್‌ ಪ್ಯಾಕೇಜುಗಳು ಲಭ್ಯವಿದ್ದು, ಹೆಚ್ಚುವರಿ ಗೇಮ್ಸ್‌ ಗಳು ಬೇಕಾದಲ್ಲಿ ಉಳಿದ ಮೊತ್ತವನ್ನು ತೆರಬೇಕಾಗುತ್ತದೆ.

ಸಖತ್ತಾಗಿದೆ ಅಡ್ವೆಂಚರಸ್‌ ಗೇಮ್ಸ್‌

ನೇಚರ್‌ ನಡುವೆ ಇರುವ ಈ ಬಜೆಟ್‌ ಫ್ರೆಂಡ್ಲೀ ರೆಸಾರ್ಟ್‌ನಲ್ಲಿ ಸ್ಮಾಲ್‌ ಜಿಪ್‌ ಲೈನ್‌, ಜಿಪ್‌ ಸೈಕ್ಲಿಂಗ್‌, ಜಿಪ್‌ ಸರ್ಫಿಂಗ್‌, ಆರ್ಚರಿ, ಬಾಟಲ್‌ ಶೂಟಿಂಗ್‌, ಡಾಟ್‌ ಪಿನ್‌, ವಾಟರ್‌ ರೋಲರ್‌, ಬೇಬಿ ಸೈಕ್ಲಿಂಗ್‌, 360ಡಿಗ್ರಿ ಸೈಕ್ಲಿಂಗ್‌, ಹೈ ರೋಪ್‌ ಕೋರ್ಸ್‌, ಕ್ವಾಡ್‌ ಸ್ವಿಂಗ್‌ ಹೀಗೆ 20ಕ್ಕೂ ಹೆಚ್ಚು ಬಗೆಯ ವಿಭಿನ್ನ ಕ್ರೀಡೆಗಳಿವೆ. ಎಲ್ಲದಕ್ಕೂ ವಿಶೇಷವಾಗಿ ಹಾರ್ಸ್‌ ರೈಡಿಂಗ್‌ ಇಷ್ಟ ಪಡುವವರಿದ್ದರೆ ಸಿಬ್ಬಂದಿಯ ನೆರವಿನೊಂದಿಗೆ ಸವಾರಿಗೆ ಹೋಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಫನ್‌ ಗೇಮ್ಸ್‌ ಬೇಕು ಎನ್ನುವವರಿಗೆ ಬುಲ್‌ ರೈಡಿಂಗ್‌ ಬೆಸ್ಟ್‌ ಆಪ್ಶನ್.‌ ಇವೆಲ್ಲದರ ಕೊನೆಯಲ್ಲಿ ಫಿಶ್‌ ಸ್ಪಾ ಮಾಡಿಸಿಕೊಳ್ಳುವುದನ್ನು ಮರೆಯಲೇಬೇಡಿ. ಕುಟುಂಬದ ಜತೆಗೆ ಈ ರೆಸಾರ್ಟ್‌ ಗೆ ಹೋದಾಗ ಮಕ್ಕಳನ್ನು ಖುಷಿಪಡಿಸುವುದು ಹೇಗೆ ಎಂಬ ಚಿಂತೆಯೇ ನಿಮಗೆ ಬೇಕಿಲ್ಲ. ಯಾಕೆಂದರೆ ಮಕ್ಕಳಿಗೆ ಹೊಂದುವಂತೆ ಇಲ್ಲಿ ಅನೇಕ ಕ್ರೀಡೆಗಳಿಗೆ ಅವಕಾಶವಿದ್ದು, ಮೈಂಡ್‌ ಗೇಮ್ಸ್‌ ಬೇಕೆನ್ನುವವರಿಗೂ ಸೈ ಎನ್ನುತ್ತಾರೆ ರೆಸಾರ್ಟ್‌ ಮಂದಿ.

Untitled design (44)

ಅತಿ ಉದ್ದನೆಯ ಜಿಪ್‌ ಲೈನ್‌ ಸರ್ವಿಸ್‌

ರಾವಿಶಿಂಗ್‌ ರಿಟ್ರೀಟ್‌ ರೆಸಾರ್ಟ್‌ನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ಕರ್ನಾಟಕದಲ್ಲಿಯೇ ಅತಿ ಉದ್ದನೆಯ ಜಿಪ್‌ ಲೈನ್‌ ಸೇವೆಯನ್ನು ಗ್ರಾಹಕರಿಗಾಗಿ ನೀಡಿದ್ದಾರೆ. ಇದು ನಿಮ್ಮ ಪ್ಯಾಕೇಜ್‌ ನಲ್ಲಿ ಸೇರ್ಪಡೆಗೊಳ್ಳದೆ, ಪ್ರತ್ಯೇಕವಾಗಿ 500 ರು. ನೀಡಿ ಈ ವಿಶೇಷ ಅನುಭವವನ್ನು ಪಡೆದುಕೊಳ್ಳಬಹುದು. ಇದಷ್ಟೇ ಅಲ್ಲದೆ ಎಟಿವಿ ಕ್ವಾಡ್‌ ಬೈಕ್‌, ರಾಜೆಟ್‌ ಎಜೆಕ್ಟರ್‌, ವಿಆರ್‌ ಗೇಮ್ಸ್‌ ಹಾಗೂ ದಿ ಬಜ್‌ ಸೇರಿ ಇನ್ನೂ ಹಲವು ಗೇಮ್ಸ್‌ ಆಡುವುದಕ್ಕೆ ಹೆಚ್ಚುವರಿ ಹಣವನ್ನು ನೀಡಬೇಕು.

ಗೇಮ್ಸ್‌ಗಳನ್ನಾಡಿ ದಣಿದು ಬಂದರೆ ಮಧ್ಯಾಹ್ನ ವೆಜ್‌ ಹಾಗೂ ನಾನ್‌ ವೆಜ್‌ ಪ್ರಿಯರಿಗಾಗಿಯೇ ಪ್ರತ್ಯೇಕ ಊಟದ ವ್ಯವಸ್ಥೆ ಇಲ್ಲಿದೆ. ಅನ್‌ ಲಿಮಿಡೆಟ್‌ ಬಫೆಟ್‌ ಆಗಿದ್ದರೂ ಆಯ್ಕೆಗಳಿಗೇನೂ ಕೊರತೆಯೂ ಇಲ್ಲ. ಸ್ಟಾರ್ಟರ್ಸ್‌, ಮೈನ್‌ ಕೋರ್ಸ್‌, ಡೆಸರ್ಟ್ಸ್‌ ಹೀಗೆ ಎಲ್ಲದರಲ್ಲೂ ಆಯ್ಕೆಗಳು ಹಲವಿದ್ದು, ಲೈವ್‌ ಕೌಂಟರ್ಸ್‌, ಚಾಟ್ಸ್‌ ಕೌಂಟರ್‌ ಗಳನ್ನೂ ಮಿಸ್‌ ಮಾಡಿಕೊಳ್ಳಬೇಡಿ.

ಕೂಲ್‌ ಕೂಲ್‌ ಸ್ವಿಮ್ಮಿಂಗ್‌ ಪೂಲ್‌

ಈ ಪ್ರಾಪರ್ಟಿಯಲ್ಲಿ ಒಟ್ಟು 3 ಸ್ವಿಮ್ಮಿಂಗ್‌ ಪೂಲ್‌ಗಳಿದ್ದು, ಎಲ್ಲವೂ ಕ್ಲೀನ್‌ ಹಾಗೂ ಹೈಜೀನ್‌ ಆಗಿವೆ. ಲಕ್ಸುರಿ ಸ್ಟೇ ಬುಕ್‌ ಮಾಡಿಕೊಂಡಿದ್ದರೆ ಪ್ರೈವೇಟ್‌ ಪೂಲ್‌ ಸೌಲಭ್ಯವೂ ಸಿಗಲಿದೆ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬಿದ್ದು-ಎದ್ದು ಬಂದ ನಂತರ ಬಟ್ಟೆ ಬದಲಾಯಿಸಿಕೊಳ್ಳುವ ಸಮಸ್ಯೆಗೆ ಇಲ್ಲಿ ಪರಿಹಾರವಿದ್ದು ಪೂಲ್‌ ಪಕ್ಕದಲ್ಲೇ ಚೇಂಜಿಂಗ್ ರೂಮ್‌ ಕೂಡ ಇದೆ. ಇನ್ನು ರೇನ್‌ ಡ್ಯಾನ್ಸ್‌ ಮೆಚ್ಚಿಕೊಳ್ಳುವವರು ನೀವಾದರೆ ಸಖತ್ತಾಗಿರುವ ರೇನ್‌ ಡ್ಯಾನ್ಸ್‌ ಅವಕಾಶವೂ ಇಲ್ಲಿದೆ. ಮಳೆ, ಹಾಡು ಹೀಗೆ ಒಳ್ಳೆಯ ಸಮಯವನ್ನು ಇಲ್ಲಿ ಕಳೆಯಬಹುದು.

ಒಟ್ಟಿನಲ್ಲಿ ಸ್ನೇಹಿತರು, ಕುಟುಂಬದವರು, ಕಾರ್ಪೊರೆಟ್‌ ಟೀಂ ಹೀಗೆ ಯಾರ ಜತೆಗಾದರೂ ನಿಮ್ಮ ದಿನವನ್ನು ಉತ್ತಮವಾಗಿ ಕಳೆಯಬೇಕೆಂದುಕೊಂಡರೆ ತಪ್ಪದೇ ರಾಮನಗರ ಸಮೀಪವಿರುವ ರಾವಿಶಿಂಗ್‌ ರಿಟ್ರೀಟ್‌ ಗೆ ಭೇಟಿ ಕೊಡಿ.

Untitled design (47)

ಪೇಯ್ಡ್‌ ಗೇಮ್ಸ್‌ ದುಬಾರಿಯೇನಿಲ್ಲ

ಲಾಂಗೆಸ್ಟ್‌ ಜಿಪ್‌ ಲೈನ್‌

ಎಟಿವಿ ಕ್ವಾಡ್‌ ಬೈಕ್‌

ರಾಜೆಟ್‌ ಎಜೆಕ್ಟರ್‌

ಇರುವುದೆಲ್ಲಿ ?

ರಾವಿಶಿಂಗ್‌ ರಿಟ್ರೀಟ್‌ ರೆಸಾರ್ಟ್‌, ಕಗ್ಗಲಾಪುರ ದೇವಸ್ಥಾನದ ಮುಂಭಾಗ, ಚನ್ನಾಲ್‌ ರಸ್ತೆ, ಮಂಚನಬೆಲೆ, ಕರ್ನಾಟಕ - 562128

ಮೊ: 6362900370