ಪ್ರವಾಸ ನವಜೀವನೋತ್ಸಾಹ ತುಂಬುವ ಔಷಧಿ. ಈ ವಿಷಯ ಬಲ್ಲವರೆಲ್ಲ ಸಾಕಷ್ಟು ಪ್ರವಾಸ ಮಾಡುತ್ತಾರೆ. ವಾರಪೂರ್ತಿ ದುಡಿಯುವ ಜೀವಕ್ಕೆ ಒಂದು ಬ್ರೇಕ್‌ ಬೇಡವೇ? ದೇಹ ಮತ್ತು ಮನಸಿಗೆ ಬ್ರೇಕ್‌ ಎಂದರೆ ದಪ್ಪ ಜಮಕಾನ ಹೊದ್ದುಕೊಂಡು ಸೊಂಪಾದ ನಿದ್ದೆ ಮಾಡುವುದಲ್ಲ; ಬದಲಿಗೆ ಸಂಪೂರ್ಣ ಹೊಸತನಕ್ಕೆ ತೆರೆದುಕೊಳ್ಳುವುದು. ಹಳೆಯ ನೋವುಗಳನ್ನು, ಕೆಟ್ಟ ವಿಚಾರಗಳನ್ನು ಮರೆಯುವುದು. ಇದಕ್ಕೆ ಹೀಲಿಂಗ್‌ ಚಿಕಿತ್ಸೆ ಎಂದೂ ಕರೆಯುವುದುಂಟು. ಅಷ್ಟೆಲ್ಲ ಅರ್ಥಮಾಡಿಕೊಂಡು ಅನುಭವಿಸಬೇಕಾದರೆ ಅನುಭವಿಯೊಡನೆ ನೀವು ಪ್ರವಾಸ ಮಾಡಬೇಕು. ಇದಕ್ಕಾಗಿ ವಾರಗಟ್ಟಲೆ ನೀವು ಊರು ಬಿಡಬೇಕು ಎನ್ನುವ ಆಲೋಚನೆಯಿಂದ ಮೊದಲು ಹೊರಗೆ ಬನ್ನಿ. ವಾರಾಂತ್ಯಕ್ಕೂ ಒಂದು ಪ್ರವಾಸ ಮಾಡುತ್ತೀರಿ.

ನೀವು ಸೋಲೋ ಪ್ರವಾಸ ಮಾಡಬಲ್ಲಿರಿ ಎಂಬುದು ನಮಗೆ ಗೊತ್ತಿದೆ. ಆದರೆ ಆ ಎಲ್ಲಾ ಪ್ರವಾಸಗಳು ನಿಮಗೆ ಉತ್ತಮ ವಿಷಯಗಳನ್ನಷ್ಟೇ ನೀಡಿವೆಯೇ. ಅಲ್ಲಿನ ಎಲ್ಲಾ ವಿಶೇಷಗಳನ್ನು ನೀವು ಕಣ್ಣಾರೆ ಕಂಡು ಮನಸಾರೆ ಅನುಭವಿಸಿದ್ದೀರಾ? ಎಂದು ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ. ನಿಮಗೆ ಸಿಗುವ ಉತ್ತರ ಎಷ್ಟು ಗೊಂದಲಮಯವಾಗಿದೆ ಅಲ್ಲವೇ? ಅದಕ್ಕಾಗಿ ನಾವು ನಿಮಗೆ ನೀಡುತ್ತಿರುವ ಸಲಹೆ ಇದು. ಒಮ್ಮೆ ಕೆಎಸ್‌ಟಿಡಿಸಿಯೊಂದಿಗೆ ಪ್ರವಾಸ ಮಾಡಿಬನ್ನಿ.

ಇದನ್ನೂ ಓದಿ: ದೇವರ ನಾಡಿನತ್ತ ಕೆಎಸ್‌ಟಿಡಿಸಿ ಬಂಡಿ

ಕೆಎಸ್‌ಟಿಡಿಸಿ ಜತೆಗೆ ಪ್ರವಾಸ ಎಂದರೆ ಅದು ಅನುಭವಿಯ ಜತೆಗೆನ ಪಯಣ ಎಂದು ನಾವು ನಿಮಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಕೆಎಸ್‌ಟಿಡಿಸಿ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಕುರಿತು ಬಲ್ಲದು. ಅದು ನಮ್ಮ ನಾಡಿನ ಪ್ರವಾಸೋದ್ಯಮದ ಹಿರಿಯಣ್ಣ. ಅದು ನಿಮಗೆ ತಿಳಿದಿರದ ಹಲವು ಹೊಸ ವಿಷಯಗಳನ್ನು ತಿಳಿಸುತ್ತದೆ. ಇತಿಹಾಸ, ಪೌರಾಣಿಕ ಹಿನ್ನೆಲೆ, ವಾಸ್ತುಶಿಲ್ಪ, ಅಲ್ಲಿನ ಜನಜೀವನ, ವ್ಯಾಪಾರ-ವಾಣಿಜ್ಯಗಳ ಕುರಿತು ನೀವು ತಿಳಿದುಕೊಂಡು ಬರಬಹುದು. ಸ್ಥಳೀಯ ಆಹಾರದ ರುಚಿಯನ್ನಂತೂ ನೀವು ಸವಿಯುತ್ತೀರಿ.

Untitled design - 2026-04-15T200227.241

ಕರ್ನಾಟಕದಲ್ಲಂತೂ ಪ್ರವಾಸಿ ಸಾಕಷ್ಟು ಪ್ರವಾಸಿ ತಾಣಗಳಿವೆ. ವಾರಾಂತ್ಯಕ್ಕೆ ಅಂದರೆ ಒಂದೇ ದಿನದಲ್ಲಿ ನಿಮಗೆ ಒಂದು ಸುಂದರ ಮತ್ತು ಪ್ರಬುದ್ಧ ಪಯಣಿಗರಂತೆ ಸುತ್ತಾಡಿಸಲು ಕೆಎಸ್‌ಟಿಡಿಸಿಯೂ ಸಿದ್ಧವಾಗಿದೆ. ವಿಶೇಷ ಟೂರ್‌ ಪ್ಯಾಕೇಜನ್ನೂ ಘೋಷಿಸಿದೆ. ಈ ಪ್ರವಾಸ ಧಾರ್ಮಿಕ ಮತ್ತು ವಾಸ್ತುಶಿಲ್ಪಕ್ಕೆ ಹೆಸರಾದ ತಾಣಗಳತ್ತ ಇರಲಿದೆ. ನಿಮಗಂತೂ ಇದು ರಿಲ್ಯಾಕ್ಸ್‌ ಟ್ರಿಪ್‌ ಎನ್ನಬಹುದು. ಏಕೆಂದರೆ ಈ ಪ್ರವಾಸದಲ್ಲಿ ನೀವು ಶ್ರವಣ ಬೆಳಗೊಳದಲ್ಲಿನ ವಿಶ್ವದಲ್ಲೇ ಅತಿ ಎತ್ತರದ ಏಕಶಿಲೆಯ ಬಾಹುಬಲಿ ಮೂರ್ತಿಯನ್ನು ನೋಡುತ್ತೀರಿ. ವಾಸ್ತುಶಿಲ್ಪಗಳಿಗೆ ಹೆಸರಾದ ಬೇಲೂರು ಚೆನ್ನಕೇಶವ ದೇವಸ್ಥಾನ, ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನಗಳನ್ನೂ ಭೇಟಿ ಮಾಡುತ್ತೀರಿ.

ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ

ಜೈನಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಶ್ರವಣಬೆಳಗೊಳದ ಬಾಹುಬಲಿ (ಗೊಮ್ಮಟೇಶ್ವರ) ಅತಿ ಮುಖ್ಯವಾದುದು. ಗಂಗರ ದೊರೆ ನಾಲ್ವಡಿ ರಾಚಮಲ್ಲನ ಸೇನಾಧಿಪತಿಯಾಗಿದ್ದ ಚಾವುoಡರಾಯನು ಈ ಮೂರ್ತಿಯನ್ನು ಕೆತ್ತಿಸಿದ್ದು, ಇದು 58 ಅಡಿ ಎತ್ತರದ ಏಕಶಿಲ ಪ್ರತಿಮೆಯಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ನೆರವೆರಿಸಲಾಗುತ್ತದೆ. ಈ ಬಾರಿಯಹ ಮಹಾಮಸ್ತಕಾಭಿಷೇಕ 2030 ರಲ್ಲಿ ನಡೆಯಲಿದೆ.

ಹೊಯ್ಸಳೇಶ್ವರ ದೇವಾಲಯ

ಹಳೆಬೀಡು ಇತಿಹಾಸದ ಪುಟಗಳಲ್ಲಿ ದ್ವಾರಸಮುದ್ರ ಎಂದು ಗುರುತಿಸಿಕೊಂಡಿದೆ. ಇಲ್ಲಿ ಆಳ್ವಿಕೆ ನಡೆಸಿದ ಹೊಯ್ಸಳರು ವಾಸ್ತುಶಿಲ್ಪಕ್ಕೆ ನೀಡಿದ ಅಪ್ರತಿಮ ಕೊಡುಗೆಗಳು ಸಾಕಷ್ಟಿವೆ. ಅವುಗಳಲ್ಲಿ ಹೊಯ್ಸಳೇಶ್ವರ ದೇವಾಲಯವೂ ಒಂದು. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯ, ನಿಬ್ಬೆರಗಾಗಿ ನೋಡುವಂತೆ ಮಾಡುವ ಶಿಲ್ಪಕಲೆಯಿಂದಾಗಿ ಯುನೆಸ್ಕೋ ವಿಶ್ವ ಪಾರಂಪರಿಕವಾಗಿ ಗುರುತಿಸಿಕೊಂಡಿದೆ.

Untitled design - 2026-04-15T200234.806



ಪ್ಯಾಕೇಜ್

ದಿನ-1
ಬೆಳಗ್ಗೆ 7:00 ಗಂಟೆಗೆ ಮೈಸೂರಿನ ಮಯೂರ ಹೊಯ್ಸಳದಿಂದ ನಿರ್ಗಮನ.

ಬೆಳಗ್ಗೆ 8:30 ಗಂಟೆಗೆ ಪ್ರಯಾಣದ ಮಾರ್ಗಮಧ್ಯ ಉಪಾಹಾರ.

ಬೆಳಗ್ಗೆ 9:00 ಗಂಟೆಗೆ ಕೆಆರ್ ಪೇಟೆಯಿಂದ ನಿರ್ಗಮನ.

ಬೆಳಗ್ಗೆ 10.30 - 11.00 ರವರೆಗೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ - ಬಾಹುಬಲಿಯ ದರ್ಶನ.

ಬೆಳಗ್ಗೆ 11:30 ಗಂಟೆಗೆ ಶ್ರವಣಬೆಳಗೊಳದಿಂದ ನಿರ್ಗಮನ

ಮಧ್ಯಾಹ್ನ 1:30 ಗಂಟೆಗೆ ಬೇಲೂರಿನ ಹೊಟೇಲ್ ವೇಲಾಪುರಿಗೆ ಆಗಮಿಸಿ, ಊಟದ ನಂತರ ಬೇಲೂರು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ.

ಮಧ್ಯಾಹ್ನ 3:00 ಗಂಟೆಗೆ ಬೇಲೂರಿನಿಂದ ನಿರ್ಗಮನ

ಮಧ್ಯಾಹ್ನ 3:45 ಗಂಟೆಗೆ ಹಳೆಬೀಡು ತಲುಪಿ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ.

ಸಂಜೆ 4:45 ಗಂಟೆಗೆ ಹಳೆಬೀಡಿನಿಂದ ನಿರ್ಗಮನ

ರಾತ್ರಿ 8:30 ಗಂಟೆಗೆ ಪ್ರವಾಸವು ಮೈಸೂರಿನಲ್ಲಿ ಮುಕ್ತಾಯಗೊಳ್ಳುತ್ತದೆ.

Untitled design - 2026-04-15T200249.683

ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಹಂಪಿಯಲ್ಲಿ ಆತಿಥ್ಯಕ್ಕೆ ಮಯೂರ ಭುವನೇಶ್ವರಿ ದಿ ಬೆಸ್ಟ್‌

ಕೆಎಸ್‌ಟಿಡಿಸಿಯ ಕುರಿತು ನಾವು ಮಾಹಿತಿ ನೀಡಿ ಪ್ರವಾಸದಲ್ಲಿ ಅಥವಾ ನೀವು ಅತ್ತಕಡೆ ಹೋದಾಗ ಉಳಿದುಕೊಳ್ಳಲು ಮಯೂರದಂಥ ಹೊಟೇಲ್‌ ಪರಿಚಯಿಸುವುದನ್ನು ಎಂದಿಗೂ ಮರೆತಿಲ್ಲ. ಈ ವಿಷಯ ನಿಮಗೂ ಗೊತ್ತಿದೆ. ಏಕೆಂದರೆ ಆತಿಥ್ಯಕ್ಕೆ ಮಯೂರ ಅಷ್ಟು ಹೆಸರುವಾಸಿಯಾಗಿದೆ. ಒಮ್ಮೆ ಯೋಚಿಸಿ ಕರ್ನಾಟಕ ಬಿಟ್ಟು ಅಮೆರಿಕಕ್ಕೆ ಹೋದಾಗ ಉಳಿದುಕೊಳ್ಳಲು ಗೂಗಲ್‌ ಬಳಸದೆ ನೀವೊಂದು ಸ್ಥಳವನ್ನು ಗುರುತಿಸಬಲ್ಲಿರಾ? ಖಂಡಿತಾವಾಗಿಯೂ ಅಲ್ಲಿ ಉತ್ತಮ ಅನುಭವ ನೀಡುವ ವಾಸ್ತವ್ಯದ ತಾಣಗಳ ಕುರಿತು ನಿಮಗೆ ಓನಾಮವೂ ತಿಳಿದಿರುವುದಿಲ್ಲ. ಆದರೆ ವಿದೇಶದಿಂದ ಬರುವ ಸಾಕಷ್ಟು ಪ್ರವಾಸಿಗರು ಮಾತ್ರ ಮಯೂರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಮಯೂರ ಆತಿಥ್ಯ ಕ್ಷೇತ್ರ ಅನುಭವಿ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಗುಣಮಟ್ಟದ ಆತಿಥ್ಯ ನೀಡುತ್ತಾ ಪ್ರವಾಸಿಗರ ಎಲ್ಲ ಬೇಕು ಬೇಡಗಳನ್ನು ಮಯೂರ ಈಡೇರಿಸುತ್ತದೆ.

ಮಯೂರ ನೆಲೆಸಿರುವ ಸ್ಥಳಗಳಲ್ಲಿ ಮನೋರಂಜಿಸುವ ಚಟುವಟಿಕೆ ಮತ್ತು ಅದ್ಭುತ ಪ್ರಕೃತಿ ಸೌಂದರ್ಯವಿರುತ್ತದೆ. ಈ ಹಿತವಾದ ವಾತಾವರಣ ಪ್ರತಿ ಪ್ರವಾಸಿಗನ ಮನಸೆಳೆಯುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್‌ ಮಯೂರ ಮನೆ ಮಾಡಿದೆ. ಮಯೂರ ಬಜೆಟ್‌ ಫ್ರೆಂಡ್ಲಿ, ಪ್ರವಾಸಿ ಫ್ರೆಂಡ್ಲಿಯೂ ಹೌದು. ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಗನೂ ಮಯೂರ ಆತಿಥ್ಯವನ್ನು ಸ್ವೀಕರಿಸಬಹುದು. ಇದರ ಜತೆಗೆ ನಿಮಗೆ ವಿಶ್ವ ಪಾರಂಪರಿಕ ತಾಣದಲ್ಲಿ ವಾಸ್ತವ್ಯ ಸಿಕ್ಕರೆ ಹೇಗಿರುತ್ತದೆ? ಹೌದು, ಹಂಪಿಯ ಕಮಲಾಪುರ ಬಳಿಯ ಹೊಟೇಲ್‌ ಮಯೂರ ಭುವನೇಶ್ವರಿ ನಿಮಗೆ ಈ ಅವಕಾಶ ನೀಡುತ್ತದೆ.

Untitled design - 2026-04-15T200242.121

ವಿಶ್ವ ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ ಹಂಪಿಯ ಬಳಿಯ ಕಮಲಾಪುರದಲ್ಲಿ ಹೊಟೇಲ್ ಮಯೂರ ಭುವನೇಶ್ವರಿ ನೆಲೆಯಾಗಿದೆ. ಹೀಗೆ ವಿಶ್ವ ಪರಂಪರೆಯ ತಾಣ ಪ್ರದೇಶದೊಳಗೆ ಇರುವ ಏಕೈಕ ಹೊಟೇಲ್ ಇದು. ಇಲ್ಲಿ ಅತಿಥಿಗಳ ಆಯ್ಕೆಗೆ ಸೂಟ್, ಡಿಲಕ್ಸ್ ಮತ್ತು ಸೆಮಿ-ಡಿಲಕ್ಸ್ ರೂಮ್‌ಗಳು ಹಾಗೂ 5 ಡಾರ್ಮಿಟರಿಗಳ ಜತೆಗೆ 36 ಹವಾನಿಯಂತ್ರಿತ ಕೊಠಡಿಗಳಿವೆ. ಸ್ಥಳೀಯ ಮತ್ತು ಭಾರತೀಯ ಶೈಲಿಯ ಆಹಾರಗಳಿಗಂತೂ ನೀವು ಮನಸೋಲುತ್ತೀರಿ. ಅದರ ಜತೆಗೆ ಹಂಪಿಯಲ್ಲಿ ಅಡ್ಡಾಡಿ ಪ್ರವಾಸ ಮಾಡಬಹುದು. ಅದಕ್ಕಾಗಿ ಪ್ರವಾಸಿ ಮಾರ್ಗದರ್ಶಿಗಳನ್ನೂ ನಿಮ್ಮ ವಿನಂತಿಯ ಮೇರೆಗೆ ಮಯೂರ ಭುವನೇಶ್ವರಿ ನಿಮಗೆ ನೀಡುತ್ತದೆ. ಮಯೂರದಂಥ ಅದ್ಭುತ ಹೊಟೇಲ್‌ನಲ್ಲಿ ಉಳಿದು ಹಂಪಿಯತ್ತ ಕಸ್ಟಮೈಸ್ಡ್‌ ಪ್ರವಾಸ ಮಾಡುವ ಅವಕಾಶ ನಿಮಗಾಗಿ ಕಾಯುತ್ತಿದೆ. ವಾಸ್ತವ್ಯಕ್ಕೇನು ಎಲ್ಲಾದರೂ ಉಳಿಯಬಹುದು ಎನ್ನುವ ಆಲೋಚನೆಯಿಂದ ಹೊರಗೆ ಬನ್ನಿ. ಮಯೂರ ನಿಮಗಾಗಿ ಕಾಯುತ್ತಿದೆ.

ಸಂಪರ್ಕ:
Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan|Race Course Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org