ಚೆಸ್ಟ್ ಮುಟ್ಟುವ ಕೋತಿ ಚೇಷ್ಟೆ
ಖಾಸಗಿ ಅಂಗದ ಭಾಗಗಳನ್ನು ಪುರುಷ ಸ್ಪರ್ಶಿಸಿದರೆ ಅಥವಾ ಅದರ ಕುರಿತು ಮಾತನಾಡಿದರೆ ಅಪರಾಧವೆಂಬಂತಿರುವ ಸಮಾಜದ ಎದುರು, ಖಾಸಗಿ ಅಂಗಗಳನ್ನು ಪ್ರದರ್ಶಿಸುವುದು, ಪ್ರಚೋದಕ ವರ್ತನೆಗಳನ್ನು ಮಾಡುವುದು ಅಸಹ್ಯ ಅಶ್ಲೀಲ ಎಂದು ಪರಿಗಣಿಸುವ ಸಮಾಜದ ಎದುರು, ಎಗ್ಗಿಲ್ಲದೆ ಇಂಥ ವಿಡಿಯೋ ಪೋಸ್ಟ್ ಮಾಡುತ್ತಿರುವ ಯುವತಿಯರಿಗೆ ಏನನ್ನಬೇಕು? ಮುಟ್ಟುವುದು ಮಂಗಗಳೇ ಆದರೆ ಮುಟ್ಟಿದ್ದು ಹೆಣ್ಣಿನ ಖಾಸಗಿ ಅಂಗ ಮತ್ತು ಅದನ್ನು ನೋಡುವವರು ಪುರುಷರೇ ಎಂಬುದು ಗೊತ್ತಿರುವ ಸಂಗತಿ ಅಲ್ಲವೇ?
ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನ ಮಂಗಾಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇರುವವರಿಗೆ ಗೊತ್ತಿರುತ್ತದೆ. ಯುವತಿಯರು ಒರಂಗುಟನ್ ಎಂಬ ಬುದ್ಧಿವಂತ ಮಂಗಗಳ ಜತೆಗೆ ಫೊಟೋ, ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಅದರಲ್ಲಿ ಕೆಲವು ಒರಂಗುಟನ್‌ಗಳು ತುಟಿಗೆ ಮುತ್ತಿಕ್ಕುವುದು, ಹಿಂದಿನಿಂದ ಬಂದು ಮಹಿಳೆಯರ ಎದೆಗೆ ಕೈ ಹಾಕುವುದು, ಅಸಭ್ಯವಾಗಿ ತಬ್ಬಿಕೊಳ್ಳುವುದು, ಅಸಹಜವಾಗಿ ವರ್ತಿಸುವುದು ಎಲ್ಲವನ್ನೂ ಮಾಡುತ್ತವೆ. ಅಚ್ಚರಿ ಅಂದರೆ ಯಾವುದೇ ಹಿಂಜರಿಕೆ ಇಲ್ಲದೆ ಇವೆಲ್ಲವನ್ನೂ ಯುವತಿಯರು ಮಾಡಿಸಿಕೊಳ್ಳುತ್ತಾರೆ. ಸಾಲದೆಂಬಂತೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ. ಸೀರಿಯಸ್ಸಾಗಿ ಕೇಳ್ತೀನಿ, ಇಲ್ಲಿ ಮಂಗ ಯಾರು? ಸಫಾರಿಯಲ್ಲಿರುವ ಒರಂಗುಟನ್ ಮಂಗವೋ ಅಥವಾ ಲಜ್ಜೆಗೇಡಿ ಯುವತಿಯರೋ?
ಇದನ್ನೂ ಓದಿ: ಗುಂಟೂರ್ ಮಸಾಲ: ದಾರಿಯಲ್ಲಿ ಹುಡುಗಿ ಸಿಕ್ಕಾಗ!
ಒರಂಗುಟನ್- ಹೇಳಿ ಕೇಳಿ ಅದು ಮಂಗ. ಅದರ ಸ್ವಭಾವವೇ ಮಂಗಾಟ. ಅದಕ್ಕೆ ತಾಲೀಮು ಕೊಡುವವನು ಇಂಥ ಚೇಷ್ಟೆಗಳನ್ನು ಕಲಿಸಿರಬಹುದು. ಆದರೆ ಅದರಿಂದ ಅಸಭ್ಯ ಅಂಗಚೇಷ್ಟೆ ಮಾಡಿಸಿಕೊಳ್ಳುವ ಆಸೆ ಹೆಣ್ಮಕ್ಕಳಿಗೇಕೆ? ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಏನನ್ನು ಹೇಳಬಯಸುತ್ತಿದ್ದಾರೆ? ಮಹಿಳೆಯರನ್ನು ಗೌರವದಿಂದ ಕಾಣಬೇಕು ಅಂತ ಉಪದೇಶ ಮಾಡುವ ಸಮಾಜದಲ್ಲಿ, ಇಂಥವು ಗೌರವ ತಂದುಕೊಡುತ್ತವೆಯೇ? ವಿದೇಶೀಗರಿಗೆ ಅಂಥ ಅಂಗಚೇಷ್ಟೆಗಳು ಸಹ್ಯವೇ ಇರಬಹುದು. ಆದರೆ ಭಾರತೀಯರಿಗೆ ಖಂಡಿತ ಅಲ್ಲ.

ಖಾಸಗಿ ಅಂಗದ ಭಾಗಗಳನ್ನು ಪುರುಷ ಸ್ಪರ್ಶಿಸಿದರೆ ಅಥವಾ ಅದರ ಕುರಿತು ಮಾತನಾಡಿದರೆ ಅಪರಾಧವೆಂಬಂತಿರುವ ಸಮಾಜದ ಎದುರು, ಖಾಸಗಿ ಅಂಗಗಳನ್ನು ಪ್ರದರ್ಶಿಸುವುದು, ಪ್ರಚೋದಕ ವರ್ತನೆಗಳನ್ನು ಮಾಡುವುದು ಅಸಹ್ಯ ಅಶ್ಲೀಲ ಎಂದು ಪರಿಗಣಿಸುವ ಸಮಾಜದ ಎದುರು, ಎಗ್ಗಿಲ್ಲದೆ ಇಂಥ ವಿಡಿಯೋ ಪೋಸ್ಟ್ ಮಾಡುತ್ತಿರುವ ಯುವತಿಯರಿಗೆ ಏನನ್ನಬೇಕು? ಮುಟ್ಟುವುದು ಮಂಗಗಳೇ ಆದರೆ ಮುಟ್ಟಿದ್ದು ಹೆಣ್ಣಿನ ಖಾಸಗಿ ಅಂಗ ಮತ್ತು ಅದನ್ನು ನೋಡುವವರು ಪುರುಷರೇ ಎಂಬುದು ಗೊತ್ತಿರುವ ಸಂಗತಿ ಅಲ್ಲವೇ? ಇನ್ ಸ್ಟಾ ವೀಕ್ಷಣೆ ಮತ್ತು ಖ್ಯಾತಿಗೋಸ್ಕರ ಇಂಥ ವಿಡಿಯೋಗಳ ಅಗತ್ಯವಿದೆಯೇ? ಒರಂಗುಟನ್ ಗಳ ಜತೆ ಫೊಟೋ ತಪ್ಪಲ್ಲ. ಪೋಸಿಂಗ್ ಅಥವಾ ಕೈಗೊಂದು ಕಿಸ್ ಕೊಡಿಸಿಕೊಳ್ಳುವುದೂ ತಪ್ಪಲ್ಲ. ಆದರೆ ಈ ರೀತಿಯ ಅಸಭ್ಯ ಭಂಗಿಗಳು ಭಾರತೀಯ ಪ್ರವಾಸಿಗರಿಗೆ ಭೂಷಣವಲ್ಲ. ಬ್ಯಾಂಕಾಕ್ ಹೋದಾಗ ಇದನ್ನು ಒರಂಗುಟನ್ ಆಡಿಸುವಾತನಿಗೆ ಹೇಳಬೇಕೇ ಹೊರತು, ಮುಟ್ಟಿಸಿಕೊಂಡು ಎಂಜಾಯ್ ಮಾಡುವುದಲ್ಲ.
ಕಾಡಿನಲ್ಲಿರುವ ಮಂಗಗಳು ನಿಧಾನವಾಗಿ ಮನುಷ್ಯರಂತೆ ವರ್ತಿಸಲು ಕಲಿಯುತ್ತಿವೆಯೋ ಏನೋ. ಆದರೆ ಸೋಷಿಯಲ್ ಮೀಡಿಯಾದಲ್ಲಿರುವ ಕೆಲವು ಮನುಷ್ಯರು ಮಾತ್ರ ದಿನದಿಂದ ದಿನಕ್ಕೆ ಮಂಗಗಳಂತೆ ವರ್ತಿಸಲು ಕಲಿಯುತ್ತಿದ್ದಾರೆ. ಒರಂಗುಟನ್ ಗೆ ಇನ್‌ಸ್ಟಾಗ್ರಾಮ್ ಇಲ್ಲ. ನಮಗಿದೆ. ಅದೇ ಬಹುಶಃ ದೊಡ್ಡ ಸಮಸ್ಯೆ!