• ಬಡೆಕ್ಕಿಲ ಪ್ರದೀಪ

ಸಿಟಿ ಒಳಗೆ ಎಲ್ಲಿ ಹೋದ್ರೂ ಇವಿ ಬೈಕ್‌ಗಳೇ ಕಾಣಸಿಗುತ್ತಿವೆ. ಕಾರ್‌ಗಳ ಸಂಖ್ಯೆಯೂ ಜಾಸ್ತಿಯಾಗ್ತಾ ಇದೆ.

ಆದರೆ ಹೊರಗೆ ಟ್ರಿಪ್‌ ಹೋಗೋಣ ಅಂದ್ರೆ ಮಾತ್ರ ಇವಿ ಕಾರ್‌ ಇದ್ದವರಿಗೆ ಎದೆ ನಡುಕ ಶುರು. ಅದಕ್ಕೇ ಅವರ ಇವಿ ಕಾರ್‌ ಬಿಟ್ಟು ಡೀಸೆಲ್‌-ಪೆಟ್ರೋಲ್‌ ಕಾರ್‌ಗಳ ಮೊರೆ ಹೋಗ್ತಾರೆ.

ಆದರೆ, ನಿಮ್ಮ ಇವಿ ಕಾರ್‌ನೊಂದಿಗೆ ನೀವು ಲಾಂಗ್‌ ಟ್ರಿಪ್‌ ಹೋಗೋದು ಕನಸಿನ ಮಾತಾ? ಹೌದು. ಇದು ಕೆಲವು ವರ್ಷಗಳ ಹಿಂದೆ ಸತ್ಯವೇ ಆಗಿತ್ತು. ಆಗ ಇವಿ ಕಾರ್‌ಗಳಲ್ಲಿ ಹೋದವರ ಕಷ್ಟದ ಕಥೆ ಖಂಡಿತಾ ಹೇಳತೀರದ್ದಾಗಿತ್ತು.

ಇದನ್ನೂ ಓದಿ: ಹಿಮ ಬೀಳುವ ಹೊತ್ತಲ್ಲಿ…

ಈಗ ಕಾಲ ವೇಗವಾಗಿ ಬದಲಾಗುತ್ತಿದೆ. ಇವಿ ಕಾರ್‌ ಅದರದೇ ಆದ ಇಕೋಸಿಸ್ಟಮ್‌ ಇಲ್ಲದಿದ್ದರೆ, ಮ್ಯಾನೇಜ್‌ ಮಾಡುವುದು ತುಂಬ ಕಷ್ಟ. ಈಗ ರಾಷ್ಟ್ರಾದ್ಯಂತ ಇವಿ ಕಾರ್‌ಗಳ ಸಂಖ್ಯೆ ವೇಗವಾಗಿ ಹೆಚ್ಚಾಗ್ತಾ ಇದೆ. ಮತ್ತು, ಇದರತ್ತ ಹೆಚ್ಚು ಜನ ಮುಖ ಮಾಡಬೇಕು ಅನ್ನುವ ಉದ್ದೇಶದಿಂದಲೇ ಎಲ್ಲೆಡೆ ಇವಿ ಚಾರ್ಜಿಂಗ್‌ ವ್ಯವಸ್ಥೆ ಕೂಡ ಶರವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಸಹಾಯವಾಗುವಂತೆ ಸರಕಾರಗಳು (ಕೇಂದ್ರ ಹಾಗೂ ರಾಜ್ಯ) ಕೂಡ ಸಬ್ಸಿಡಿಗಳನ್ನೂ ನೀಡುತ್ತಿವೆ.

Untitled design - 2026-03-10T141925.790

ಹೆಚ್ಚಿನೆಲ್ಲ ಪೆಟ್ರೋಲ್‌ ಬಂಕ್‌ಗಳು ಈಗ ಇವಿ ಸ್ಟೇಶನ್‌ಗಳನ್ನು ಹೊಂದುತ್ತಿವೆ ಹಾಗೂ ಖಾಸಗಿ ಚಾರ್ಜಿಂಗ್‌ ಸ್ಟೇಷನ್‌ಗಳಿಗೆ ಹೋಲಿಸಿದರೆ ಇಲ್ಲಿ ಬಹಳ ಕಮ್ಮಿ ಬೆಲೆಗೆ ಚಾರ್ಜ್‌ ಮಾಡಬಹುದು. ಜತೆಗೆ ಮಡಿಕೇರಿ ಹಲವಾರು ರೆಸಾರ್ಟ್‌ಗಳಲ್ಲಿ ಇವಿ ಚಾರ್ಜಿಂಗ್‌ ವ್ಯವಸ್ಥೆಗಳು ಬಂದಿವೆ.

ಒಂದಂತೂ ಹೇಳ್ತೀನಿ, ದಟ್ಟ ಕಾನನದಲ್ಲಿ, ಪ್ರಾಣಿ-ಪಕ್ಷಿಗಳ ಕಲರವವನ್ನು ಕೇಳುತ್ತಾ ಡ್ರೈವ್‌ ಮಾಡಬೇಕು ಅನ್ನುವ ಆಸೆ ಇದ್ದರೆ, ಶಾಂತವಾಗಿ ಸಾಗುವ ಇವಿ ಕಾರ್‌ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು.

ಚಾರ್ಜಿಂಗ್‌ ಮಾತ್ರ ಪ್ಲಾನ್‌ ಮಾಡಿಕೊಳ್ಳಿ ಅಷ್ಟೇ!

ಟ್ರಾವೆಲ್‌ಗೆ ಟೆಕ್‌ ಟಚ್‌

ಇವಿ ಚಾರ್ಜಿಂಗ್‌ಗೆ ಸಾವಿರ ಆಪ್‌ಗಳು. ಆದರೆ ಒಂದೂರಿಂದ ಇನ್ನೊಂದೂರಿಗೆ ಹೋಗುವಾಗ, ಈ ಎಲ್ಲಾ ಆಪ್‌ಗಳ ಮಧ್ಯೆ ಜುಗಲ್ಬಂದಿ ಮಾಡ್ಕೊಂಡು ನಾವಿರುವ ಅಥವಾ ಹೋಗುವ ಜಾಗದಲ್ಲಿ ಒಳ್ಳೆ ಇವಿ ಚಾರ್ಜರ್‌ ಎಲ್ಲಿದೆ ಅನ್ನುವುದನ್ನು ಹುಡುಕುವ ತಲೆನೋವು ಯಾರಿಗೂ ಬೇಡ.

ಈ ಸಂದರ್ಭ ಸಹಾಯ ಆಗೋದು ‌ʼಅ ಬೆಟರ್ ರೂಟ್‌ ಪ್ಲಾನರ್ʼ (ABRP) ಮತ್ತು ಪ್ಲಗ್‌ಶೇರ್‌ ಆಪ್‌ ನಿಂದ. ಈ ಎರಡು ಆಪ್‌ಗಳಲ್ಲಿ ಎಲ್ಲಿ ಚಾರ್ಜರ್‌ ಇದೆ ಅನ್ನುವುದು ಗೊತ್ತಾಗುತ್ತದೆ. ಆದರೆ ಮೊದಲನೇದು ಇನ್ನೊಂದೂರಿಗೆ ಪ್ರಯಾಣ ಮಾಡುವಾಗ ನಿಮ್ಮ ಕಾರ್‌ ಮಾಡೆಲ್‌ ಹಾಗೂ ಈಗಿರುವ ಬ್ಯಾಟರಿ ಚಾರ್ಜ್‌ ಆಧಾರದಲ್ಲಿ ದಾರಿಯುದ್ದಕ್ಕೂ ಚಾರ್ಜಿಂಗ್‌ ಮಾಡಲು ಸೂಕ್ರ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ಲಗ್‌ಶೇರ್‌ ಪಬ್ಲಿಕ್‌ ಚಾರ್ಜಿಂಗ್‌ ವ್ಯವಸ್ಥೆಗಳನ್ನು ಬಳಕೆದಾರರ ಫೀಡ್‌ಬ್ಯಾಕ್‌ ಜೊತೆಗೆ ನಮ್ಮ ಮುಂದಿಡುತ್ತದೆ.

ಇವಿ ಕಾರ್‌ಗಳಲ್ಲಿ ಚಾರ್ಜಿಂಗ್‌ ಸ್ಪೀಡ್‌ನದ್ದೇ ಮುಖ್ಯ ಪಾತ್ರ. ನಿಮಿಷಗಳಲ್ಲಿ ಪೆಟ್ರೋಲ್‌ ತುಂಬಿದ ಹಾಗೆ ಬ್ಯಾಟರಿ ತುಂಬುವುದು ಸಾಧ್ಯವಿಲ್ಲದಿರುವುದರಿಂದ, ಬ್ಯಾಟರಿ ಸ್ವಾಪಿಂಗ್‌ ಇಲ್ಲವೇ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಮಾತ್ರ ಸ್ಪೀಡ್‌ ಆಗಿ ಗಮ್ಯಸ್ಥಾನ ತಲುಪುವುದಕ್ಕಿರುವ ದಾರಿ.

Untitled design - 2026-03-10T141650.107

ವಿಶ್ವಾದ್ಯಂತ ಒಳ್ಳೆಯ ಹೆಸರಿರುವ ಎಬಿಆರ್‌ಪಿ ಭಾರತದ ಕೆಲವು ಮಾಡೆಲ್‌ಗಳನ್ನು ಇನ್ನೂ ಹೊಂದಿಲ್ಲದಿರುವುದರಿಂದ ನಿಮ್ಮ ಕಾರ್‌ಗನುಗುಣವಾದ ಪ್ಲಾನಿಂಗ್‌ ಮಾಡುವುದು ಕಷ್ಟವಾಗಬಹುದು. ಆದರೆ ನಿಮ್ಮ ಪ್ರಯಾಣಕ್ಕೆ ಪೀಸ್‌ ಆಫ್‌ ಮೈಂಡ್‌ ನೀಡುವುದಕ್ಕೆ ಇದು ಅತ್ಯುತ್ತಮ ಆಪ್‌ ಅನ್ನುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಇದು ನೀವು ಹೋಗುವ ದಾರಿ, ಹವಾಮಾನ, ಇವುಗಳಿಗನುಗುಣವಾಗಿ, ನಿಮ್ಮ ಕಾರ್‌ ಮಾಡೆಲ್‌ ಯಾವ ರೀತಿ ಚಾರ್ಜಿಂಗ್‌ ಬಯಸುತ್ತದೆ ಎನ್ನುವುದನ್ನು ಪ್ರೆಡಿಕ್ಟ್‌ ಮಾಡುತ್ತದೆ.

ಪಂಚ್‌-ರ್‌ ಶಾಪ್‌

ಇವಿ ಗಾಡಿ ಬರ್ಲಿ, ಯಾವ ಗಾಡಿ ಬೇಕಾದ್ರೂ ಬರ್ಲಿ, ಟಯರ್‌ ಪಂಚರ್‌ ಆದ್ರೆ ನಮ್‌ ಶಾಪಗೇ ಬರ್ಬೇಕು, ಅಂತಿದ್ರ ನಮ್ಮೂರ ಪಂಚರ್‌ ಅಂಗಡಿ ಮಾಲೀಕ.