ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ!
ಕೆಎಸ್‌ಟಿಡಿಸಿ ಇದೀಗ ಬೆಂಗಳೂರು ಸುತ್ತಾಟಕ್ಕೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಒಂದು ದಿನದ ರಾಜಧಾನಿ ಪ್ರವಾಸ ಪ್ಯಾಕೇಜ್ ಇದಾಗಿದೆ. ಬನ್ನೇರುಘಟ್ಟ ಸಫಾರಿ ಮತ್ತು ಉದ್ಯಾನವನ ಭೇಟಿ, ಇಸ್ಕಾನ್ ಟೆಂಪಲ್, ರಾಜರಾಜೇಶ್ವರಿ ದೇವಸ್ಥಾನಗಳನ್ನು ನೋಡಿಕೊಂಡು ಬರುತ್ತೀರಿ. ಪ್ರತಿದಿನದ ಫಜೀತಿಗಳಿಗೆ ವಾರಕ್ಕೊಮ್ಮೆ ರಜೆಕೊಡಿ. ಪರಿವಾರ ಸಮೇತರಾಗಿ ಹೊರಟರೂ ಜೇಬು ಖಾಲಿಯಾಗುವುದಿಲ್ಲ. ಕಡಿಮೆ ವ್ಯಯ ಹೆಚ್ಚು ಗಳಿಕೆ ಇರುವುದು ಇಂಥ ಪ್ರವಾಸಗಳಲ್ಲಿ ಎಂಬುದನ್ನು ಮರೆಯಬೇಡಿ.
ಪ್ರವಾಸವೊಂದೇ ಪ್ರಯಾಸವನ್ನು ಕಳೆಯುವ ಸಾಧನ. ಬದುಕಿನ ಎಲ್ಲ ಜಂಜಡಗಳಿಂದ ಒಮ್ಮೆಲೇ ಮುಕ್ತಿ ಪಡೆಯುವುದಂತೂ ಅಸಾಧ್ಯ. ಆದರೆ ವಾರಪೂರ್ತಿಯ ತಲೆನೋವುಗಳನ್ನಂತೂ ವಾರಾಂತ್ಯದ ರಜೆಗಳಲ್ಲಿ ಕಳೆದುಕೊಳ್ಳಬಹುದು. ನಗರದ ಗದ್ದಲಗಳು ನಗುವನ್ನು ಮರೆಸುತ್ತವೆ. ಹಾಗಾಗಿ ಶಾಂತಿ ಸಿಗುವ ತಾಣಗಳಲ್ಲಿ ಓಡಾಡುವುದು ಬಹಳ ಮುಖ್ಯ. ದೇವಾಲಯ, ಕಾಡು-ಮೇಡುಗಳತ್ತ ಒಂದು ಪ್ರವಾಸ ಮನಸಿನ ಭಾರವನ್ನು ಇಳಿಸಿ, ಪ್ರತಿದಿನದ ಸಂಕಟಗಳನ್ನು ಮರೆಸಿ ಜೀವನಪ್ರೀತಿಯನ್ನು ಹುಟ್ಟಿಸಿ ಜೀವನೋತ್ಸಾಹವನ್ನು ಅರಳುವಂತೆ ಮಾಡಬಲ್ಲದು. ಇದನ್ನು ಸದಾ ನಾವು ಮತ್ತೆ ಮತ್ತೆ ಹೇಳುತ್ತಲೇ ಬಂದಿದ್ದೇವೆ. ನೀವಿದನ್ನು ಮರೆತಿಲ್ಲ ಅಲ್ಲವೇ? ಮನಶ್ಶಾಂತಿಗಾಗಿ ಟೊಂಕಕಟ್ಟಿ ದೇಶ-ವಿದೇಶಗಳತ್ತ ಪ್ರವಾಸ ಮಾಡುತ್ತಿರುವವರು ಸಾಕಷ್ಟು ಜನರಿದ್ದಾರೆ. ಅವರನ್ನೊಮ್ಮೆ ಕೇಳಿ, ವರ್ಷಪೂರ್ತಿ ಟೂರ್ ನಿಮಗೆ ಬೋರ್ ಅನಿಸುವುದಿಲ್ಲವೇ ಎಂದು. ಅವರು ಪ್ರವಾಸವಿಲ್ಲದಾಗ ನನಗೆ ಬೋರ್ ಅನಿಸುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಹೊಸತನವನ್ನು ನೋಡುವಾಗ ಮತ್ತು ಕೇಳಿ, ಸವಿಯುವಾಗಲೇ ಮನಸಿನಲ್ಲಿನ ಹಳೆಯ ನೋವುಗಳು ಮರೆಯಾಗುತ್ತವೆ. ಅಂಥ ಹೊಸತನಗಳನ್ನು ಪ್ರವಾಸ ಪೂರೈಸಬಲ್ಲದು. ಏನಿಲ್ಲದಿದ್ದರೂ ಮನೆಯನ್ನು, ಆಫೀಸ್ ಅನ್ನು ಬಿಟ್ಟು ಒಂದಷ್ಟು ಕಡೆ ವಿಹಾರ ಹೋಗಿ ಬಂದರೂ ಆದೀತು.
ಇದನ್ನೂ ಓದಿ: ಏಳು ಸುತ್ತಿನ ಕೋಟೆಯಲ್ಲಿ ಒಂದು ಸುತ್ತು……
ಪ್ರತಿಸಲವೂ ಓದಿದ್ದನ್ನೇ ಓದಿ ಕಂಠಪಾಠವಾದಂತೆ, ನೀವು ಎಲ್ಲ ಕಡೆ ಕಲ್ಲು, ಮಣ್ಣು ನೋಡಿದರೂ ಅದರಲ್ಲಿ ಬರಿಯ ಕಲ್ಲು ಮಣ್ಣುಗಳೇ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಅವುಗಳಲ್ಲಿ ನಂಬಿಕೆ, ಇತಿಹಾಸ, ಕಲೆ, ಸಂಸ್ಕೃತಿಗಳು ಅಡಕವಾಗಿರುತ್ತವೆ. ಹಾಗಾಗಿ ಇವುಗಳ ಮಾಹಿತಿ ನಿಮಗಿಲ್ಲದಿದ್ದರೆ ನಿಮ್ಮ ಪ್ರವಾಸ ವ್ಯರ್ಥವಾಗುತ್ತದೆ. ಇದರ ಪರಿಹಾರವೇ ಅನುಭವಿ ಪ್ರವಾಸಿಗನ ಜತೆಗೆ ಪ್ರವಾಸ ಹೋಗುವುದು. ನಮ್ಮ ನಾಡಿನ ಪ್ರವಾಸೋದ್ಯಮ ನಿಗಮವೇ ಈ ಎಲ್ಲ ಅವಕಾಶಗಳನ್ನು ನೀಡುತ್ತಿದೆ. ಕೈಗೆಟುಕುವ ದರದಲ್ಲಿ ಒಂದೇ ದಿನದಲ್ಲಿ ಒಂದು ಪ್ರವಾಸ ಮಾಡಿಸಲು ಸಜ್ಜಾಗಿದೆ. ಕರ್ನಾಟಕದ ಸರ್ವಜ್ಞನಂತೆ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಇದರಿಂದ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನವನ್ನು ನಿಮ್ಮಲ್ಲಿ ತುಂಬಿಕೊಂಡಂತಾಗುತ್ತದೆ. ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಮಯೂರದಲ್ಲಿ ಮನಮೋಹಿಸುವ ವಾತಾವರಣವಿರುತ್ತದೆ. ಕೆಎಸ್‌ಟಿಡಿಸಿ ನಿಮಗೆ ಅಲ್ಲಿ ಉಳಿದುಕೊಳ್ಳಲು ವಾಸ್ತವ್ಯ ಅವಕಾಶ ಕಲ್ಪಿಸಿಕೊಡುತ್ತದೆ. ಕರ್ನಾಟಕ ಪ್ರವಾಸೋದ್ಯಮ ನಿಗಮದ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದು ಮಹಾನ್ ಅನುಭವಿಯ ಜತೆಗೆ ಪ್ರವಾಸ.

ಕೆಎಸ್‌ಟಿಡಿಸಿ ಇದೀಗ ಬೆಂಗಳೂರು ಸುತ್ತಾಟಕ್ಕೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಒಂದು ದಿನದ ರಾಜಧಾನಿ ಪ್ರವಾಸ ಪ್ಯಾಕೇಜ್ ಇದಾಗಿದೆ. ಬನ್ನೇರುಘಟ್ಟ ಸಫಾರಿ ಮತ್ತು ಉದ್ಯಾನವನ ಭೇಟಿ, ಇಸ್ಕಾನ್ ಟೆಂಪಲ್, ರಾಜರಾಜೇಶ್ವರಿ ದೇವಸ್ಥಾನಗಳನ್ನು ನೋಡಿಕೊಂಡು ಬರುತ್ತೀರಿ. ಪ್ರತಿದಿನದ ಫಜೀತಿಗಳಿಗೆ ವಾರಕ್ಕೊಮ್ಮೆ ರಜೆಕೊಡಿ. ಪರಿವಾರ ಸಮೇತರಾಗಿ ಹೊರಟರೂ ಜೇಬು ಖಾಲಿಯಾಗುವುದಿಲ್ಲ. ಕಡಿಮೆ ವ್ಯಯ ಹೆಚ್ಚು ಗಳಿಕೆ ಇರುವುದು ಇಂಥ ಪ್ರವಾಸಗಳಲ್ಲಿ ಎಂಬುದನ್ನು ಮರೆಯಬೇಡಿ. ಒಮ್ಮೆ ಟ್ರೈ ಮಾಡಿ. ನಿಮ್ಮ ಮನಸಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಹ್ಯಾವ್ ಎ ನೈಸ್ ಟ್ರಿಪ್!
ಪ್ಯಾಕೇಜ್
------------
ದಿನ 1
ಬೆಳಗ್ಗೆ 07.30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡುವುದು
ಬೆಳಗ್ಗೆ 7.45ಕ್ಕೆ ಇಸ್ಕಾನ್ ಟೆಂಪಲ್ ಭೇಟಿ
ಬೆಳಗ್ಗೆ 7.45 - 8.45ರವರೆಗೆ ಇಸ್ಕಾನ್ ಭಗವಾನ್ ಶ್ರೀ ಕೃಷ್ಣನ ದರ್ಶನ
ಬೆಳಗ್ಗೆ 8.45 - 9.15ರವರೆಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ
ಬೆಳಗ್ಗೆ 9.15ಕ್ಕೆ ರಾಜರಾಜೇಶ್ವರಿ ದೇವಸ್ಥಾನದಿಂದ ನಿರ್ಗಮನ
ಬೆಳಗ್ಗೆ 10.30 ಕ್ಕೆ ಬನ್ನೇರುಘಟ್ಟಕ್ಕೆ ಹೊರಡುವುದು
ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿನೀಡಿ
ಮಧ್ಯಾಹ್ನ 1.00 - 1.30ರವರೆಗೆ ಬನ್ನೇರುಘಟ್ಟದ ಹೊಟೇಲ್ ಮಯೂರ ವನಶ್ರೀಯಲ್ಲಿ ಊಟ
ಮಧ್ಯಾಹ್ನ 1.30ಕ್ಕೆ ಬನ್ನೇರುಘಟ್ಟದಿಂದ ನಿರ್ಗಮನ
ಸಂಜೆ 4.30 - 5.15ರವರೆಗೆ ತಾರಾಲಯ ಭೇಟಿ
ಸಂಜೆ 6.30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ.

ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಮುತ್ಯಾಲಮಡುವಿನಲ್ಲಿ ಮಯೂರ ನಿಸರ್ಗ ಪರ್ಲ್ ವ್ಯಾಲಿ
ಮಯೂರ ಆತಿಥ್ಯ ಎಂದರೆ ಅದು ಮರೆಯದ ನೆನಪು. ರಾಜ್ಯದಾದ್ಯಂತ ಈಗಾಗಲೆ ಮಯೂರ ಹೊಟೇಲ್‌ಗಳಿವೆ. ದೇಶ-ವಿದೇಶದಿಂದ ರಾಜ್ಯ ಪ್ರವಾಸಕ್ಕೆ ಬರುವ ಜನರ ಆಯ್ಕೆ ಬಹುತೇಕ ಮಯೂರವೇ ಆಗಿರುತ್ತದೆ. ಅಪ್ತವಾಗಿ ಆತಿಥ್ಯ ನೀಡಿ ಮಯೂರ ಈ ಪ್ರೀತಿಯನ್ನು ಗಳಿಸಿದೆ. ಪ್ರವಾಸಿಗರಿಗೆ ಏನನ್ನು ನೀಡಬೇಕು ಎಂಬುದು ಮಯೂರದ ಆಯ್ಕೆಯಲ್ಲ. ಅದು ರಾಜ್ಯಾದ್ಯಂತ ಮನೆಮಾಡಿ ಪ್ರವಾಸಿಗರನ್ನು ದಶಕಗಳಿಂದ ನೋಡಿಕೊಂಡು ಬಂದಿದೆ. ಹಾಗಾಗಿ ಪ್ರವಾಸಿಗರ ಬೇಕು-ಬೇಡಗಳನ್ನು ಕಿಂಚಿತ್ತೂ ಕಮ್ಮಿ ಇಲ್ಲದಂತೆ ಪೂರೈಸುತ್ತದೆ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಪ್ರವಾಸದ ಗೈಡ್‌ಗಳನ್ನೂ ನೀವಲ್ಲಿ ಅರಸಬಹುದು. ಪ್ರವಾಸಿ ತಾಣದ ವೈಬ್‌ಗಳನ್ನೂ ಮಯೂರ ನೀಡಬಲ್ಲದು. ಅಲ್ಲಿನ ವಾತಾವರಣ ಹಾಗಿರುತ್ತದೆ. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನರಂಜಿಸುವ ಸುತ್ತಮುತ್ತಲಿನ ಹಿತವಾದ ವಾತಾವರಣ ಪ್ರತಿ ಪ್ರವಾಸಿಗನ ಮನಸೆಳೆಯುತ್ತವೆ. ಮಯೂರ ಅದು ಪ್ರವಾಸ ಸ್ನೇಹಿ ಹೊಟೇಲ್ ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ.
ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಯೂ ಮಯೂರದ ಆತಿಥ್ಯವನ್ನು ಆನಂದಿಸಬಹುದು. ಹತ್ತಾರು ವರ್ಷಗಳಿಂದ ಹೊಟೇಲ್ ಉದ್ಯಮದ ರಾಜನಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಷ್ಟೂ ಜಾಗಗಳ, ಅಷ್ಟೂ ವರ್ಷಗಳ ಅನುಭವದ ಬುತ್ತಿಯೊಂದಿಗೆ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹಾಗಾಗಿ ಆತಿಥ್ಯ ಕ್ಷೇತ್ರದ ಉಳಿದ ಹೊಟೇಲ್ ಮತ್ತು ಉದ್ಯಮ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಮತ್ತು ಆಪ್ತವೆನಿಸಿಕೊಂಡು ಮಯೂರ ತಲೆಯೆತ್ತಿ ನಿಂತಿದೆ. ಇಲ್ಲಿ ವಾಸ್ತವ್ಯಕ್ಕೆ ಹೇಳಿ ಮಾಡಿಸಿದ ವಾತಾವರಣ, ಮನೆಯವರಂತೆ ಮಾತಿಗಿಳಿದು ನಿಮ್ಮನ್ನು ಸತ್ಕರಿಸುವ ಸಿಬ್ಬಂದಿ, ಚಟುವಟಿಕೆಗಳು ಇದ್ದೇ ಇರುತ್ತವೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್ನ ಶಾಖೆಗಳಿವೆ. ಅವುಗಳಲ್ಲಿ ಮುತ್ಯಾಲ ಮಡುವಿನಲ್ಲಿನ ಮಯೂರವೂ ಒಂದು. ಕಣಿವೆಯಿಂದ ನೀರಿನ ಹನಿಗಳು ಮುತ್ತುಗಳಂತೆ ಬೀಳುವುದನ್ನು ಮತ್ತು ಬಂಡೆಗಳ ಮೇಲೆ ನಾದ ಹೊರಡಿಸುತ್ತಾ ಹರಿಯುವುದನ್ನೂ ನೀವೊಮ್ಮೆ ಕಲ್ಪಿಸಿಕೊಳ್ಳಿ. ಈ ಕಲ್ಪನೆಗೆ ʻಮುತ್ತುಮುತ್ತು ನೀರ ಹನಿಯ ತಾಂ ನನʼ ಹಾಡೊಂದು ಸೇರಿಕೊಂಡರೆ ಮನಸು ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತದೆ ಅಲ್ಲವೇ? ಈ ಕಲ್ಪನೆಗೆ ಜೀವ ನೀಡಿದರೆ ಹೊಟೇಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿಯಂತಿರುತ್ತದೆ. ಇದು ಬೆಂಗಳೂರಿನಿಂದ ಕೇವಲ 40 ಕಿಮೀ ದೂರದಲ್ಲಿರುವ ಆನೇಕಲ್ ಬಳಿಯ ಮುತ್ಯಾಲ ಮಡುವಿನಲ್ಲಿದೆ. ಹೊಟೇಲ್‌ನಲ್ಲಿ 5 ಡಬಲ್ ರೂಮ್‌ಗಳ ಕೊಠಡಿಗಳಿವೆ ಮತ್ತು ಮನೆಯನ್ನು ನೆನಪಿಸುವ ಆಹಾರ ಮಾಡಿ ಬಡಿಸುವ ರೆಸ್ಟೋರೆಂಟ್ ಇದೆ. ಎಲ್ಲದಕ್ಕಿಂತ ಮಿಗಿಲಾಗಿ ಇಲ್ಲಿ ನೀವು ಎಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳುವಂಥ ವಾತಾವರಣವಿದೆ. ಖಂಡಿತವಾಗಿ ನೀವು ಇಲ್ಲಿಗೆ ಒಮ್ಮೆ ಹೋಗಿಬನ್ನಿ. ಮತ್ತೊಮ್ಮೆ ನೀವಾಗಿಯೇ ಭೇಟಿ ನೀಡುತ್ತೀರಿ.

ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org